ತಮಿಳುನಾಡು ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ : ಹೈಕೋರ್ಟ್

ಚೆನ್ನೈ, ಡಿ.02: ತಮಿಳುನಾಡಿನ ಎಲ್ಲಾ ಪ್ರಮುಖ ಹಿಂದೂ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ಚಾರಿಟಬಲ್ ದತ್ತಿ ಇಲಾಖೆ (ಎಚ್ಆರ್ ಹಾಗೂ ಸಿಇ) ಅಧೀನಕ್ಕೆ ಒಳಪಡುವ ಎಲ್ಲಾ ದೇಗುಲಗಳಲ್ಲಿ ಈ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಎಂದು ಎಂದು ಆದೇಶದಲ್ಲಿ ಹೇಳಲಾಗಿದೆ. [ಪಂಚೆ ಪ್ರಕರಣ: ಕ್ರಿಕೆಟ್ ಕ್ಲಬ್ಬಿಗೆ ಸಿಎಂ ಜಯಾ ಪಂಚ್]

ಜಸ್ಟೀಸ್ ಎಸ್ ವೈದ್ಯನಾಥನ್ ಅವರು ನೀಡಿದ ಆದೇಶ ಪ್ರಕಾರ ಮುಂದಿನ ಜನವರಿ 1 ರಿಂದ ಪುರುಷ ಹಾಗೂ ಮಹಿಳೆಯರಿಗೆ ವಸ್ತ್ರ ಸಂಹಿತೆ ಅನ್ವಯವಾಗಲಿದೆ.

Madras HC prescribes dress code at temples

ಪುರುಷರಿಗೆ ಧೋತಿ ಹಾಗೂ ಪೈಜಾಮಾ, ಶರ್ಟ್ ಹಾಗೂ ಪ್ಯಾಂಟ್ ಜೊತೆಗೆ ಪ್ಯಾಂಟ್ ಧರಿಸಬಹುದು. ಮಹಿಳೆಯರು ಸೀರೆ, ಲಂಗ ದಾವಣಿ ಅಥವಾ ಚೂಡಿದಾರ್ ಧರಿಸಿ ಬರಬೇಕು. ಈ ನಿಯಮಗಳು ಮಕ್ಕಳಿಗೂ ಅನ್ವಯವಾಗುತ್ತದೆ.[ಲೆಗ್ಗಿಂಗ್ಸ್ ಸುದ್ದಿಯನ್ನು ಸಮರ್ಥಿಸಿಕೊಂಡ ಕುಮುಧಮ್]

ಹೊಸ ವಸ್ತ್ರ ಸಂಹಿತೆ ಬಗ್ಗೆ ಶೀಘ್ರವೇ ಎಲ್ಲಾ ದೇಗುಲಗಳಿಗೂ ಸುತ್ತೋಲೆ ಕಳಿಸಲಾಗುವುದು ಎಂದು ಎಚ್ಆರ್ ಹಾಗೂ ಸಿಇ ಆಯುಕ್ತರು ಹೇಳಿದ್ದಾರೆ.

ಸರ್ಕಾರದ ಅಧೀನಕ್ಕೆ ಒಳಪಡದ ಖಾಸಗಿ ಸ್ವಾಧೀನದ ದೇಗುಲಗಳಲ್ಲಿ ತಮ್ಮದೇ ಆದ ನೀತಿ ನಿಯಯ ಹಾಗೂ ವಸ್ತ್ರ ಸಂಹಿತೆ ಹೊಂದಲು ಅವಕಾಶವಿದೆ. ಅದರೆ, ಮೇಲ್ಕಂಡ ವಸ್ತ್ರ ಸಂಹಿತೆ ಹೊರತುಪಡಿಸಿ ದೇಗುಲಕ್ಕೆ ಪ್ರವೇಶಿಸಲು ಯತ್ನಿಸುವ ಭಕ್ತಾದಿಗಳನ್ನು ತಡೆಯುವ ಅಧಿಕಾರ ಅಲ್ಲಿನ ಸಿಬ್ಬಂದಿ ಹಾಗೂ ಪೊಲೀಸರಿಗೆ ನೀಡಲಾಗಿದೆ ಎಂದು ಕೋರ್ಟ್ ಹೇಳಿದೆ.[ಸೀರೆ ಕಡ್ಡಾಯವಲ್ಲ, ಸಭ್ಯವಾದ ಡ್ರೆಸ್ ಇರಲಿ: ಕಾಶಿ ದೇಗುಲ ಟ್ರಸ್ಟ್]

ಈ ರೀತಿ ವಸ್ತ್ರ ಸಂಹಿತೆ ನಿಯಮಗಳು, ಸಭ್ಯತೆ ಬಗ್ಗೆ ಕಟ್ಟಳೆಗಳು ಹಿಂದೂ ಧರ್ಮವಷ್ಟೇ ಅಲ್ಲದೆ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮದಲ್ಲೂ ಇದೆ. ದೇವರ ಬಗ್ಗೆ ಗೌರವ ಹಾಗೂ ದೇಗುಲದ ಪಾವಿತ್ರ್ಯತೆ ಕಾಯ್ದುಕೊಳ್ಳಲು ನಿಯಮಗಳು ಅವಶ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+