ಕರುಣಾನಿಧಿಗೆ ಲಕ್ಷಾಂತರ ಜನರ ಕಣ್ಣೀರಿನೊಂದಿಗೆ ವಿದಾಯ
Recommended Video

ಚೆನ್ನೈ, ಆಗಸ್ಟ್ 08: ಲಕ್ಷಾಂತರ ಜನರ ಕಂಬನಿ...ಯಾವುದೇ ಸಂಪ್ರದಾಯಿಕ ವಿಧಿವಿಧಾನಗಳು ಇಲ್ಲದೇ ಸಕಲ ಸರ್ಕಾರಿ ಗೌರವದೊಂದಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯಕ್ರಿಯೆ ಮರೀನಾ ಬೀಚ್‌ನಲ್ಲಿ ಬುಧವಾರ ಸಂಜೆ 6.50ಕ್ಕೆ ನಡೆಯಿತು.
94 ವರ್ಷದ ಮುತ್ತುವೇಲ್ ಕರುಣಾನಿಧಿ ಅವರು ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಡಿಎಂಕೆ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಅಗಲಿದ ನಾಯಕರಿಗೆ ಕಣ್ಣೀರಿನ ವಿದಾಯ ಹೇಳಿದರು.
ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಯಬೇಕು? ಎಂಬ ಕುರಿತು ಮಂಗಳವಾರ ಸಂಜೆಯಿಂದ ಚರ್ಚೆ ನಡೆದಿತ್ತು. ಮದ್ರಾಸ್ ಹೈಕೋರ್ಟ್ ಆದೇಶದಂತೆ ಮರೀನಾ ಬೀಚ್‌ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಅಂತ್ಯಸಂಸ್ಕಾರಕ್ಕೂ ಮುನ್ನ ಚೆನ್ನೈನ ರಾಜಾಜಿಹಾಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಲವು ಸಚಿವರು, ತಮಿಳು ಚಿತ್ರರಂಗದ ಹಲವು ನಟರು, ನಿರ್ಮಾಪಕರು ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಕರುಣಾನಿಧಿ ಅವರನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ಕಪ್ಪು ಕನ್ನಡಕದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' ಎಂದು, ಮತ್ತೊಂದು ಬದಿ ಕಲೈಂಗರ್ ಕರುಣಾನಿಧಿ, ಡಿಎಂಕೆ ಅಧ್ಯಕರು ಎಂದು ಬರೆಯಲಾಗಿತ್ತು.
M #Karunanidhi's family pays last tribute to the DMK chief at Marina beach. Burial to take place shortly pic.twitter.com/hNIW5dkjOy
— ANI (@ANI) August 8, 2018
#WATCH: PM Narendra Modi talks to DMK leaders MK Stalin & Kanimozhi, after paying last respects to M #Karunanidhi at #RajajiHall in Chennai. pic.twitter.com/cEiwjEdNbz
— ANI (@ANI) August 8, 2018












Click it and Unblock the Notifications