ಚೆನ್ನೈ ಸಂತ್ರಸ್ತರ ನೆರವಿಗೆ ಕೆಎಸ್ಆರ್‌ಟಿಸಿ ವಿಶೇಷ ಬಸ್
ಬೆಂಗಳೂರು, ಡಿಸೆಂಬರ್, 05: ಪ್ರವಾಹಕ್ಕೆ ಸಿಲುಕಿ ಸಂಕಷ್ಟಕೀಡಾಗಿರುವ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ನೆರವಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಂತಿದೆ.
ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳನ್ನು ಕಲ್ಪಿಸಿದ್ದು ಮೂರು ಬಸ್ ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದೆ. ಶುಕ್ರವಾರ ಸಂಜೆಯಿಂದಲೇ ಅನೇಕರು ಬೆಂಗಳೂರು ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ.[ಮತ್ತೆ ಮಳೆಯಾರ್ಭಟ. ರಕ್ಷಣಾ ಕಾರ್ಯಕ್ಕೆ ಅಡ್ಡಿ]

ಪ್ರತಿದಿನ ಚೆನ್ನೈನಿಂದ ಬೆಂಗಳೂರು ಮತ್ತು ಬೆಂಗಳೂರಿನಿಂದ ಚೆನ್ನೈಗೆ ಒಟ್ಟು 43 ಬಸ್ ಗಳು ಸಂಚಾರ ಮಾಡುತ್ತಿದ್ದವು. ಈಗ 10 ಹೆಚ್ಚುವರಿ ಬಸ್ ಗಳನ್ನು ಬಿಡಲಾಗುತ್ತಿತ್ತು ಒಟ್ಟು 53 ಬಸ್ ಗಳು ನಾಗರಿಕರಿಗೆ ಸೇವೆ ನೀಡುತ್ತಿವೆ. ಅತ್ತ ಕೇರಳ ಸರ್ಕಾರ ಸಹ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದೆ.
ಶನಿವಾರ ಮತ್ತೆ ತಮಿಳುನಾಡಿನಲ್ಲಿ ಮಳೆ ಆರ್ಭಟ ಆರಂಭವಾಗಿದೆ. ಕರ್ನಾಟಕದಿಂದ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಮೊಬೈಲ್ ಸಂಪರ್ಕ ಮತ್ತು ವಿದ್ಯುತ್ ವ್ಯವಸ್ಥೆ ಪುನರಾಂಭಗೊಂಡಿದ್ದು ತಮಿಳುನಾಡು ಸರ್ಕಾರ ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆಗೆದಿದೆ.












Click it and Unblock the Notifications