ನಟಿ ಕಮ್ ರಾಜಕಾರಣಿ ಖುಷ್ಬು ಸುಂದರ್‌ಗೆ ಬಿಜೆಪಿ ಟಿಕೆಟ್

ಚೆನ್ನೈ, ಮಾರ್ಚ್ 14: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಟಿ ಕಮ್ ರಾಜಕಾರಣಿ ಖುಷ್ಬು ಸುಂದರ್‌ಗೆ ತಮಿಳುನಾಡು ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ. ಎಐಎಡಿಎಂಕೆ ಜೊತೆ ಮೈತ್ರಿ ಒಪ್ಪಂದದಂತೆ ಬಿಜೆಪಿ 20 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ.

ನಟಿ ಖುಷ್ಬು ಅಲ್ಲದೆ, ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ, ಎಲ್ ಮುರುಗನ್, ವಾಸಂತಿ ಶ್ರೀನಿವಾಸನ್ ಅವರು ಸ್ಪರ್ಧಿಸುವ ಕ್ಷೇತ್ರಗಳನ್ನು ಭಾನುವಾರ(ಮಾರ್ಚ್ 14) ದಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಅಧಿಕೃತವಾಗಿ ಘೋಷಿಸಿದರು.

ಪ್ರಮುಖ ಸ್ಪರ್ಧಿಗಳು ಹಾಗೂ ಕ್ಷೇತ್ರ
ಖುಷ್ಬು ಸುಂದರ್: ಥೌಸಂಡ್ ಲೈಟ್ಸ್ ವಿಧಾನಸಭೆ ಕ್ಷೇತ್ರ
ಎಲ್ ಮುರುಗನ್(ಬಿಜೆಪಿ ರಾಜ್ಯಾಧ್ಯಕ್ಷ): ಧಾರಪುರಂ
ಕೆ ಅಣ್ಣಾಮಲೈ(ಮಾಜಿ ಐಪಿಎಸ್): ಅರವಕುರಿಚಿ
ಎಚ್ ರಾಜ: ಕಾರೈಕುಡಿ
ವಾಸಂತಿ ಶ್ರೀನಿವಾಸನ್(ಮಹಿಳಾ ಘಟಕ ಅಧ್ಯಕ್ಷೆ): ಕೊಯಮತ್ತೂರು ದಕ್ಷಿಣ(ಕಮಲ್ ಹಾಸನ್ ವಿರುದ್ಧ)

Khushbu Sundar to be BJPs candidate from Thousand Lights Assembly seat in Tamil Nadu.

ಖುಷ್ಬು ಈಗ ಬಿಜೆಪಿ ಸ್ಪರ್ಧಿ
2014ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಯಲ್ಲಿ ವಕ್ತಾರೆಯಾಗಿ ಉನ್ನತ ಸ್ಥಾನ ಗಳಿಸಿದ ಖುಷ್ಬು ನಂತರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದರು.

''ಪಕ್ಷ ಮತ್ತು ದೇಶಕ್ಕಾಗಿ ನಿಷ್ಠಾವಂತರಾಗಿ ಕೆಲಸ ಮಾಡಲು ಇಚ್ಛಿಸುವ ನನ್ನಂಥ ನಾಯಕರಿಗೆ ಬಹಳಷ್ಟು ಬೇಸರ ಮತ್ತು ನೋವಾಗಿದೆ'' ಎಂದು ಪ್ರತಿಕ್ರಿಯಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ನಿರಾಸೆಗೊಂಡಿದ್ದರು. ಬಿಜೆಪಿ ಸೇರಿದ ಬಳಿಕ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದರು.

ದಕ್ಷಿಣ ಭಾರತೀಯ ಸಿನಿಮಾದಲ್ಲಿ ಖ್ಯಾತನಟಿಯಾಗಿ ಗುರುತಿಸಿಕೊಂಡಿರುವ ಖುಷ್ಬೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+