ಚೆನ್ನೈ ಪ್ರವಾಹದಲ್ಲಿ ಸಿಲುಕಿ ತತ್ತರಗೊಂಡ ಕನ್ನಡಿಗರು
ಚೆನ್ನೈ, ಡಿಸೆಂಬರ್, 04 : ಪ್ರವಾಹದಿಂದ ತತ್ತರಗೊಂಡ ಚೆನ್ನೈನಲ್ಲಿ ಹಲವಾರು ಕನ್ನಡಿಗರು ಸಿಲುಕಿಗೊಂಡಿದ್ದು, ಮನೆಯವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಕುಟುಂಬದವರು ಸಂಪೂರ್ಣ ಕಂಗಾಲಾಗಿದ್ದು, ಅವರನ್ನು ಸಂಪರ್ಕಿಸಲು ಹರಸಾಹಸ ಪಡುತ್ತಿದ್ದಾರೆ.
ಕೆಲಸದ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದ ಮೈಸೂರು, ತುಮಕೂರು, ರಾಯಚೂರು, ಬೆಂಗಳೂರು ಮೂಲದ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಚೆನ್ನೈನಲ್ಲಿ ಎಲ್ಲಾ ಸಂಪರ್ಕ ವ್ಯವಸ್ಥೆಗಳು ಸ್ಥಗಿತಗೊಂಡ ಪರಿಣಾಮ ಈ ಶೋಚನೀಯ ಸ್ಥಿತಿ ತಲೆದೋರಿದೆ.[ಚೆನ್ನೈ ಪ್ರವಾಹ : ಮೈಸೂರಿನ ಇಂಜಿನಿಯರ್ ನಾಪತ್ತೆ]

ಮಂಡ್ಯ ಮೂಲದ ದಿಲೀಪ್ ಚೆನ್ನೈ ನಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಎಂ. ಹೊಸಹಳ್ಳಿ ತಾಲೂಕಿನಲ್ಲಿ ವಾಸವಾಗಿದ್ದರು. ಅಲ್ಲದೇ ಮೈಸೂರು ಮೂಲದ ಶಿವಪ್ರಸಾದ್ ನಾಪತ್ತೆಯಾಗಿದ್ದು, ಮನೆಯವರಿಗೆ ಸುರಕ್ಷಿತವಾಗಿದ್ದೇನೆ ಎಂದು ಇ-ಮೇಲ್ ಮಾಡಿದ್ದಾರೆ.[ಚೆನ್ನೈ ಪ್ರವಾಹ: ಸಂಪರ್ಕಕ್ಕೆ ಸಿಕ್ಕ ಮಂಡ್ಯ ಟೆಕ್ಕಿ]
ಚೆನ್ನೈ ಪ್ರವಾಹದಲ್ಲಿ ಸಿಲುಕಿದ ಕನ್ನಡಿಗರು:
* ಅಕ್ಷಯ್ ಕುಮಾರ್, ಸಾಫ್ಟ್ ವೇರ್ ಇಂಜಿನಿಯರ್, ರಾಮಾನುಜ ನಗರ, ಮೈಸೂರು
* ಸಂಕೀರ್ತನಾ, ಸಾಫ್ಟ್ ವೇರ್ ಇಂಜಿನಿಯರ್, ಬೆಂಗಳೂರು, ಚೆನ್ನೈನ ಕಾಂಗ್ನಿಜೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು
* ಎಂ.ಡಿ ಸಲೀಂ, ಸಾಫ್ಟ್ ವೇರ್ ಇಂಜಿನಿಯರ್, ರಾಯಚೂರು
* ಕಾರ್ತಿಕ್ ಮತ್ತು ಶ್ರೀದೇವಿ ದಂಪತಿ, ತುಮಕೂರು












Click it and Unblock the Notifications