ಅಮೆರಿಕದ VP ಸ್ಥಾನಕ್ಕೆ ಕಮಲ, ತಮಿಳರಿಗೆ ಹೆಮ್ಮೆ ವಿಷ್ಯ: ಒಪಿಎಸ್

ಚೆನ್ನೈ, ಆ. 12: ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಆಯ್ಕೆ ಮಾಡಿದ್ದಾರೆ.

ಸೆನೆಟರ್ ಕಮಲಾ ಹ್ಯಾರಿಸ್ (55) ಅವರ ಆಯ್ಕೆಯನ್ನು ಅಮೆರಿಕದಲ್ಲಿನ ಭಾರತೀಯ ಸಮುದಾಯಗಳು ಸ್ವಾಗತಿಸಿವೆ. ಉಪಾಧ್ಯಕ್ಷ ಸ್ಥಾನಕ್ಕೆ ಸೆಣಸುತ್ತಿರುವ ಭಾರತ ಹಾಗೂ ಏಷ್ಯಾ ಮೂಲದ ಪ್ರಥಮ ವ್ಯಕ್ತಿ ಎನಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಭಾರತ ಮತ್ತು ತಮಿಳುನಾಡಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಪ್ರತಿಕ್ರಿಯಿಸಿದ್ದಾರೆ.

Kamala Harris Nomination Moment Of Pride For Indians OPS

ಅಮೆರಿಕದಲ್ಲಿ ಭಾರತೀಯ ಮೂಲದ ಮೊದಲ ಸೆನೆಟರ್‌ ಎಂಬ ಹೆಗ್ಗಳಿಕೆ ಹೊಂದಿರುವ ಕಮಲಾ ಹ್ಯಾರಿಸ್‌ ಅವರ ತಾಯಿ ಶ್ಯಾಮಲಾ ಅವರು ತಮಿಳುನಾಡಿನ ಮೂಲದವರು, ಕಮಲಾ ಅವರಿಗೆ ನಮ್ಮ ಶುಭಹಾರೈಕೆಗಳು ಎಂದು ಪನ್ನೀರ್ ಸೆಲ್ವಂ ತಿಳಿಸಿದ್ದಾರೆ.

Kamala Harris Nomination Moment Of Pride For Indians OPS

ಸ್ವಾತಂತ್ರ್ಯ ಹೋರಾಟಗಾರ ಪಿ.ವಿ.ಗೋಪಾಲನ್‌ ಅವರ ಪುತ್ರಿ ಶ್ಯಾಮಲಾ ಅವರು ಕ್ಯಾನ್ಸರ್ ಸಂಶೋಧಕಿಯಾಗಿದ್ದರು. ಜಮೈಕಾ ಮೂಲದ ಸ್ಟಾನ್ ಫೋರ್ಡ್ ವಿವಿಯಲ್ಲಿ ಬೋಧಕರಾದ ಡೊನಾಲ್ಡ್ ಹ್ಯಾರೀಸ್ ರನ್ನು ವರಿಸಿದರು. ಕ್ಯಾಲಿಫೋರ್ನಿಯಾದ ಮಾಜಿ ಅಟಾರ್ನಿ ಜನರಲ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ಅಟಾರ್ನಿ, ಹಾಲಿ ಕ್ಯಾಲಿಫೋರ್ನಿಯಾ ಸೆನೆಟರ್ ಆಗಿ ಕಮಲಾ ಕಾರ್ಯ ನಿರ್ವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+