ಮಲಯಾಳಂ ನಟಿ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದರಾ ಕಮಲ್?

Posted By:
Subscribe to Oneindia Kannada

ಚೆನ್ನೈ, ಜುಲೈ 14: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಲಯಾಳಂ ನಟಿಯ ಹೆಸರನ್ನು ಪತ್ರಿಕಾಗೋಷ್ಠಿಯೊಂದರಲ್ಲಿ ಬಹಿರಂಗಗೊಳಿಸಿದ ಕಮಲ್ ಹಾಸನ್ ಅವರು ಮತ್ತೊಂದು ವಿವಾದಕ್ಕೆ ಸಿಲುಕುವ ಸೂಚನೆ ನೀಡಿದ್ದಾರೆ. ವಿವಾದಗಳೊಂದಿಗೆ ಸದಾ ಅವಿನಾಭಾವ ನಂಟು ಹೊಂದಿರುವ ಕಮಲ್ ಹಾಸನ್ ಅವರು, ಈಗ ಮತ್ತೊಂದು ವಿವಾದಕ್ಕೆ ಸಿಲುಕುವಂಥ ಕೆಲಸ ಮಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಕಮಲ್ ಹಾಸನ್ ಅವರು, ಮಲಯಾಳಂ ನಟಿಯ ಪ್ರಕರಣವನ್ನು ತಮ್ಮ ಮಾತಿನಲ್ಲಿ ತಂದರು. ಹಾಗೆ, ಮಾತನಾಡುವಾಗ ಅವರ ಹೆಸರನ್ನೂ ಬಹಿರಂಗಗೊಳಿಸಿದ ಅವರು, ಈ ಬಗ್ಗೆ ಪತ್ರಕರ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದಾಗ ತಮ್ಮ ಹೇಳಿಕೆಯನ್ನು ಕಮಲ್ ಸಮರ್ಥಿಸಿಕೊಂಡರು.

ಕಮಲ್ ಹಾಸನ್ ಬಂಧಿಸುವಂತೆ ತಮಿಳುನಾಡು ಸಂಘಟನೆಗಳ ಆಗ್ರಹ

Kamal Haasan addresses abused Malayalam actress by name, justifies it

''ಎಲ್ಲರೂ ಚಿತ್ರರಂಗದ ಮಹಿಳಾ ಕಲಾವಿದರ ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ಸಿನಿಮಾ ರಂಗದ ಕಲಾವಿದೆಯರಿಗೆ ಮಾತ್ರ ಸುರಕ್ಷೆ ಸಿಗಬೇಕೇ? ಇತರರಿಗೂ ಸುರಕ್ಷೆ ಸಿಗಬೇಕಲ್ಲವೇ? ಪ್ರತಿಯೊಬ್ಬ ಮಹಿಳೆಗೆ ಸುರಕ್ಷತೆ ಸಿಗಬೇಕು'' ಎಂದು ಅವರು ಹೇಳುತ್ತಾ ಸಾಗಿದ್ದಾರೆ.

ಆ ವೇಳೆಗೆ, ಸುದ್ದಿಗೋಷ್ಠಿಯಲ್ಲಿದ್ದ ಪತ್ರಕರ್ತರೊಬ್ಬರು ಮಲಯಾಳಂ ನಟಿಯ ಹೆಸರನ್ನು ಪ್ರಸ್ತಾಪಿಸಿದ್ದು ಸರಿಯಲ್ಲವೆಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕಮಲ್, ''ಪರವಾಗಿಲ್ಲ. ನಾನು ಹೇಳಿದರೇನು ತಪ್ಪಾಗುವುದಿಲ್ಲ. ಈಗಾಗಲೇ ಹಲವಾರು ಮಾಧ್ಯಮಗಳು ಅವರ ಹೆಸರನ್ನು ಘಟನೆ ನಡೆದ ಹೊಸತರಲ್ಲೇ ಬಳಸಿವೆ'' ಎಂದರು.

ಸೂರ್ಯ ಹಾಗೂ 8 ನಟರಿಗೆ ಶುಭ ಸುದ್ದಿ ಕೊಟ್ಟ ಹೈಕೋರ್ಟ್

ತಮ್ಮ ಮಾತನ್ನು ಮತ್ತೂ ಮುಂದುವರಿಸಿ, ''ದೌರ್ಜನ್ಯಕ್ಕೊಳಗಾಗಿದ್ದ ಆ ಮಲಯಾಳಂ ನಟಿ ಹೆಸರನ್ನು ನೀವು (ಮಾಧ್ಯಮಗಳು) ಏನಾದರೂ ಬಳಸಿಕೊಳ್ಳಿ. ಆಕೆಯನ್ನು ದ್ರೌಪದಿಯೆಂದಾದರೂ ಕರೆಯಿರಿ ಅಥವಾ ಇನ್ಯಾವ ಹೆಸರನ್ನಾದರೂ ಕರೆಯಿರಿ. ಆದರೆ, ಹೆಣ್ಣು ಎಂದು ಹೇಳಬೇಡಿ'' ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil cinema superstar Kamal Haasan, recently, in a press conference, revealed the name of the Malayalam actress who was abducted and sexually assaulted in February, adding there is nothing wrong in letting the world know the victim's name.
Please Wait while comments are loading...