ಬೆಂಗಳೂರಿಗೆ 'ಅಮ್ಮ' ಬರುವುದು ಅನುಮಾನ?

ಬೆಂಗಳೂರು, ಸೆ. 26 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣ ಅಂತಿಮ ತೀರ್ಪು ಸೆ. 27 ರಂದು ಹೊರಬೀಳಲಿದೆ. ಅದರಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಯಾವ ನಿರ್ಧಾರ ನೀಡಲಿದೆ ಎಂದು ನಿರೀಕ್ಷಿಸುತ್ತಿದ್ದಂತೆ ಕೆಲ ನಾಟಕೀಯ ಬೆಳವಣಿಗೆಗಳು ಆರಂಭವಾಗಿದೆ.

ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನಲ್ಲೇ ತೀರ್ಮಾನ ಹೊರಬಿಳಬೇಕಿತ್ತು. ಆದರೆ ಭದ್ರತಾ ನೆಪವೊಡ್ಡಿ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈಗ ಮತ್ತೆ 'ಅಮ್ಮ' ಬೆಂಬಲಿಗರು ಹೊಸದೊಂದು ವರಸೆ ಆರಂಭಿಸಿದ್ದಾರೆ.(ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣ ತೀರ್ಪು ಸೆ.27ಕ್ಕೆ)

jyaya

ವಿಚಾರಣೆ ಸ್ಥಳ ಬದಲಿಸುವಂತೆ ಜಯಲಲಿತಾ ಪರವಾಗಿ ಕೃಷ್ಣಮೂರ್ತಿ ಎಂಬ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಮನವಿ ಸೆ. 26 ರಂದು ಮಧ್ಯಾಹ್ನ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು ಸುಪ್ರೀಂ ಆದೇಶದ ನಂತರವೇ ಜಯಲಲಿತಾ ಬೆಂಗಳೂರಿಗೆ ಬರುತ್ತಾರೋ ಇಲ್ಲವೋ ಎಂಬುದು ಗೊತ್ತಾಗಲಿದೆ.

ಪ್ರಕರಣದ ವಿಚಾರಣೆ ಜಾಗವನ್ನು ಬೆಂಗಳೂರಿನಿಂದ ಸ್ಥಳಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಜಯಾ ವಕೀಲರು ಮನವಿ ಸಲ್ಲಿಸಿದ್ದಾರೆ. ಆದರೆ ಚೆನೈಗೆ ವರ್ಗಾಯಿಸಿ ಎಂದೇನೂ ಕೇಳಿಕೊಂಡಿಲ್ಲ ಎನ್ನಲಾಗಿದೆ.(ಜಯಲಲಿತಾ ವಿರುದ್ಧದ ವಿಚಾರಣೆಗೆ ತಡೆ ಇಲ್ಲ)

ಜಯಲಲಿತಾ ಅವರು ಅಕ್ರಮವಾಗಿ 66.65 ಕೋಟಿ ರೂ. ಆಸ್ತಿ ಸಂಪದಾನೆ ಮಾಡಿದ್ದಾರೆ ಎಂಬ ಪ್ರಕರಣವಿದಾಗಿದ್ದು ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರ ಪೀಠ ವಿಚಾರಣೆ ಮುಗಿಸಿದ್ದು, ಅಂತಿಮ ತೀರ್ಪುನ್ನು ನೀಡಲಿದೆ. ತೀರ್ಪು ಪ್ರಕಟಗೊಳ್ಳುವಾಗ ಪ್ರಕರಣದಲ್ಲಿನ ಆರೋಪಿಗಳಾದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾಗೂ ಇತರೆ ಮೂವರು ಆರೋಪಿಗಳಾದ ಸುಧಾಕರನ್, ಶಶಿಕಲಾ ಹಾಗೂ ಇಲವರಸಿ ಖುದ್ದು ಹಾಜರಿರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತ್ತು.(ಬೆಂಗಳೂರಿಗೆ ಬರುವ ಮುನ್ನವೇ ಜಯಾ ರಾಜೀನಾಮೆ?)

ಒಟ್ಟಿನಲ್ಲಿ ಬೆಂಗಳೂರಿಗೆ ಬರಲು ಜಯಲಲಿತಾ ಹಿಂದೇಟು ಹಾಕುತ್ತಿರುವುದೆಂತೂ ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಭದ್ರತಾ ನೆಪ, ವಿಚಾರಣೆ ಜಾಗ ಬದಲಿಸಿ ಎಂಬ ಕ್ಯಾತೆ ಎಲ್ಲವೂ ಈ ಕಾರಣಕ್ಕೆ ಎಂಬುದು ಮಾತ್ರ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+