ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮ ಸ್ಥಿತಿ ಗಂಭೀರ, ಅಪೋಲೋದಿಂದ ರೋಗಿಗಳ ಸ್ಥಳಾಂತರ

By ಅನುಷಾ ರವಿ
|
Google Oneindia Kannada News

ಚೆನ್ನೈ, ಡಿಸೆಂಬರ್ 5: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಹತ್ತಿರದ ಇತರ ಆಸ್ಪತ್ರೆಗಳಿಗೆ ರೋಗಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂಬ ವರದಿ ದಟ್ಟವಾಗಿದೆ. ಆದ್ದರಿಂದ ಆಸ್ಪತ್ರೆ ಮಧ್ಯೆ ಆಂಬುಲೆನ್ಸ್ ಓಡಾಟ ವಿಪರೀತ ಹೆಚ್ಚಾಗಿದೆ. ಆ ಕಾರಣಕ್ಕೆ ರೋಗಿಗಳ ಸ್ಥಳಾಂತರದ ಬಗ್ಗೆ ಗುಮಾನಿ ಹೆಚ್ಚಾಗಿದೆ.

ಆಸ್ಪತ್ರೆಯ ಅಧಿಕಾರಿಗಳ ಸೂಚನೆ ಪ್ರಕಾರ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ರೋಗಿಗಳ ಕೋರಿಕೆಯ ಮೇರೆಗೆ ಸ್ಥಳಾಂತರಿಸುತ್ತಿದ್ದಾರೋ ಅಥವಾ ಆಸ್ಪತ್ರೆ ಅಧಿಕಾರಿಗಳ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.[ಮಾರಕ ಶನಿ ತೊಂದರೆಯಿಂದ 'ಅಮ್ಮ' ತಪ್ಪಿಸಿಕೊಳ್ಳೋದು ಕಷ್ಟಕಷ್ಟ!]

Apollo hospital

ಅದರೆ, ವಿಪರೀತ ಜಾಸ್ತಿಯಾಗಿರುವ ಆಂಬುಲೆನ್ಸ್ ಓಡಾಟ ಇಂಥದ್ದೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮಧ್ಯೆ ಆಸ್ಪತ್ರೆ ತಿಳಿಸಿರುವ ಮಾಹಿತಿ: ಜೆ.ಜಯಲಲಿತಾ ಸ್ಥಿತಿ ಗಂಭೀರವಾಗಿದೆ, ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತದೆ. ಜಯಲಲಿತಾ ಅವರ ಆರೋಗ್ಯದ ಬಗ್ಗೆ ಎಲ್ಲ ಮಾಹಿತಿಯನ್ನೂ ಅಪೋಲೋ ಆಸ್ಪತ್ರೆಯೂ ಟ್ವಿಟ್ಟರ್ ಖಾತೆ ಮೂಲಕ ನೀಡುತ್ತಿದೆ.

English summary
Patients from Apollo hospital, where Tamil Nadu Chief Minister J Jayalalithaa is being treated, are reportedly being shifted out to nearby hospitals. Abnormally high movement of ambulances to and from the hospital has sparked off speculations of patients being shifted out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X