ಚೆನೈನಲ್ಲಿ ಅಘೋಷಿತ ಬಂದ್‌ ವಾತಾವರಣ

ಬೆಂಗಳೂರು, ಸೆ. 27 : ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದೆ. ಜಯಾ ದೋಷಿ ಎಂದು ಬೆಂಗಳೂರಿನ ವಿಶೇಷ ಕೋರ್ಟ್‌ ತೀರ್ಮಾನ ನೀಡಿದೆ. ತೀರ್ಪು ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಪರಿಣಾಮ ಬೀರಲಿದೆ.

karunanidhi

ತಮಿಳುನಾಡಲ್ಲಿ ಏನಾಗ್ತಿದೆ?

* ಚೆನೈನಲ್ಲಿ ಅಘೋಷಿತ ಬಂದ್‌ ವಾತಾವರಣ
* ಚೆನೈ ಬಸ್‌ ನಿಲ್ದಾಣದಲ್ಲಿ ಉಳಿದಿರುವ ಕರ್ನಾಟಕದ 51 ಬಸ್‌ಗಳು
* ಕಾಂಚಿಪುರಂನಲ್ಲಿ ಎಇಎಡಿಎಂಕೆ ಕಾರ್ಯಕರ್ತರಿಂದ ಬಸ್‌ಗೆ ಬೆಂಕಿ
* ಕೊಯಂಬತ್ತೂರಿನಲ್ಲಿ ಜಯಲಲಿತಾ ಅಭಿಮಾನಿಯಿಂದ ಆತ್ಮಹತ್ಯೆ ಯತ್ನ
* ತಮಿಳುನಾಡಿನ ಅಂಬತ್ತೂರಿನಲ್ಲಿ ಕರ್ನಾಟಕದ ಬಸ್‌ಗಳ ಮೇಲೆ ಕಲ್ಲು ತೂರಾಟ.
* ಜಯಲಲಿತಾ ವಿರುದ್ಧ ಪ್ರಕರಣ ದಾಖಲಾಗಲು ಕಾರಣವಾಗಿದ್ದ ಸುಬ್ರಮಣಿಯನ್ ಸ್ವಾಮಿ ಚೆನೈ ನಿವಾಸದೆದುರು ಎಐಎಡಿಎಂಕೆ ಕಾರ್ಯಕರ್ತರಿಂದ ಪ್ರತಿಭಟನೆ
* ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರ
* ತಮಿಳುನಾಡಿನ ಶ್ರೀರಂಗಂ ಜಿಲ್ಲೆಯಲ್ಲಿ ಎಐಎಡಿಎಂಕೆ ಕಾರ್ಯಕರ್ತರಿಂದ ಬಸ್ಸಿಗೆ ಬೆಂಕಿ
* ಜಯಲಲಿತಾ ಮನೆ ಮುಂದೆ ಧರಣಿ ಕುಳಿತ ಮಹಿಳೆಯರು
* ಅಗತ್ಯ ಬಿದ್ದರೆ ಕೇಂದ್ರದ ನೆರವು ಪಡೆಯುವುದಾಗಿ ಹೇಳಿದ ತಮಿಳು ನಾಡು ಪೊಲೀಸ್‌
* ಜಯಲಲಿತಾ ಮಹಿಳಾ ಅಭಿಮಾನಿಗಳಿಂದ ಮುಗಿಲು ಮುಟ್ಟಿದ ಆಕ್ರಂದನ
* ಕೆಲವೆಡೆ ಪ್ರತಿಭಟನೆ ಆರಂಭಿಸಿದ ಅಮ್ಮ ಅಭಿಮಾನಿಗಳು
* ತಮಿಳುನಾಡಲ್ಲಿ ಸ್ವಯಂ ಘೋಷಿತ ಬಂದ್‌ ನಿರ್ಮಾಣ
* ಚೆನೈನಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡುತ್ತಿರುವ ಸಾರ್ವಜನಿಕರು
* ಹೋಟೆಲ್‌ಗಳನ್ನು ಬಂದ್‌ ಮಾಡಲಾಗುತ್ತಿದೆ. ವಾಹನ ಸಂಚಾರ ವಿರಳವಾಗುತ್ತಿದೆ.
*ಡಿಎಂಕೆ ನಾಯಕರಾದ ಕರುಣಾನಿಧಿ, ಸ್ಟಾಲಿನ್ ಮತ್ತು ಅನ್ಬಳಗನ್ ಮನೆಗೆ ಬಿಗಿ ಭದ್ರತೆ
* ಡಿಎಂಕೆ ನಾಯಕರ ಮನೆಗೆ ಬಿಗಿ ಭದ್ರತೆ
* ಎಐಎಡಿಎಂಕೆ ಕಾರ್ಯಕರ್ತರಿಂದ ಸುಬ್ರಮಣಿಯನ್ ಸ್ವಾಮಿ ವಿರುದ್ದವೂ ಆಕ್ರೋಶ.
* ಎಐಎಡಿಎಂಕೆ ಕಾರ್ಯಕರ್ತರಿಂದ ಕರುಣಾನಿಧಿ ಪ್ರತಿಕೃತಿ ದಹನ
* ಕರ್ನಾಟಕದಿಂದ ತಮಿಳು ನಾಡಿಗೆ ಯಾರೂ ತೆರಳದಂತೆ ಸೂಚನೆ
* ಕರುಣಾನಿಧಿ ಮನೆ ಮುಂದೆ ಡಿಎಂಕೆ ಬೆಂಬಲಿಗರಿಂದ ಸಂಭ್ರಮಾಚರಣೆ
* ಡಿಎಂಕೆ ನಾಯಕ ಕರುಣಾನಿಧಿ ತಮ್ಮ ಪುತ್ತ ಸ್ಟಾಲಿನ್ ಜತೆ ಚರ್ಚೆಗೆ ತೊಡಗಿದ್ದಾರೆ.
* ತಮಿಳುನಾಡಿನ ಮನೆಗಳ ಟಿವಿ ಕೇಬಲ್ ಕಟ್‌ ಮಾಡಲಾಗಿದೆ.
* ಕರ್ನಾಟಕ ಮತ್ತು ತಮಿಳು ನಾಡು ನಡುವಿನ ಬಸ್‌ ಸಂಚಾರ ಬಂದ್‌.
* ಡಿಎಂಕೆ ಮತ್ತು ಎಐಎಡಿಎಂಕೆ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗುವ ನಿರೀಕ್ಷೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+