ತಿರುವಾಂಕೂರು ಶ್ರೀಗಳೊಂದಿಗೆ ಮಾತನಾಡಿತಂತೆ ಜಯಲಲಿತಾ ಆತ್ಮ!

ತಮಿಳುನಾಡು, ಮಾರ್ಚ್ 4: ಆತ್ಮ ಮತ್ತು ಅದರ ಅಸ್ತಿತ್ವ ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ ಇದೀಗ ತಮಿಳುನಾಡು ಸೇರಿದಂತೆ ಇಡಿ ದೇಶದಲ್ಲೂ ಚರ್ಚೆಯಾಗುತ್ತಿರುವ ಜಯಲಲಿತಾ ಆತ್ಮದ ವಿಚಾರ ಮತ್ತೊಮ್ಮೆ ಆತ್ಮದ ಅಸ್ತಿತ್ವವನ್ನು ಪುನರ್ವಿಮರ್ಷೆಗೆ ಒಡ್ಡಿದೆ.

"75 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಿದ್ದು ನಾನಲ್ಲ, ನನ್ನ ಆತ್ಮ" ಎಂದು ಸ್ವತಃ ಅಮ್ಮನ ಆತ್ಮವೇ ತನ್ನೊಂದಿಗೆ ಸಂವಾದ ನಡೆಸಿದ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ ತಿರುವಾರೂರ್ ಶ್ರೀ ಮಹರ್ಷಿ ಎಂಬ ತಮಿಳುನಾಡಿನ ಸ್ವಾಮೀಜಿ.[ಜಯಲಲಿತಾ ಪಾಲಿನ 100 ಕೋಟಿ ದಂಡ ವಸೂಲಿಯಲ್ಲೇನಿದು ಗೊಂದಲ?]

Jayalalith's soul communicates with me: A TN saint told

"ತಮಿಳುನಾವಡಿನ ಜನ ನನ್ನನ್ನು ಬದುಕಿಸಲು ಪೂಜೆ-ಪುನಸ್ಕಾರಗಳನ್ನು ಮಾಡಿದರು. ಆದರೆ ಕೆಲವರು ನನ್ನ ಸಾವನ್ನೇ ಬಯಸುತ್ತಿದ್ದರು. ನನ್ನನ್ನು ಸಾಯಿಸಿದ ಶತ್ರುಗಳನ್ನು ನಾನು ಸುಮ್ಮನೆ ಬಿಡುವುದಿಲ್ಲ, ಪ್ರತೀಕಾರ ತೀರಿಸಿಕೊಳ್ಳುತ್ತೇನೆ" ಎಂದು ಅಮ್ಮನ ಆತ್ಮ ಹೇಳಿದೆ ಎಂದು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸ್ವಾಮೀಜಿ ಹೇಳಿದ್ದಾರೆ.[ಪಳನಿಸ್ವಾಮಿ ಬಹುಮತ ಸಾಬೀತಿಗೆ ಇಲ್ಲ ಚಿನ್ನಮ್ಮನ ಆಶಿರ್ವಾದ!]

"ಓ ಪನ್ನೀರ್ ಸೆಲ್ವ ಮತ್ತು ತನ್ನ ಸೋದರ ಸಂಬಂಧಿ ದೀಪಾ ಅವರು ಮಾತ್ರವೇ ಎಐಎಡಿಎಂಕೆಯನ್ನು ಮುನ್ನಡೆಸಲು ಸಮರ್ಥರು" ಎಂದು ಸಹ ಆತ್ಮ ಹೇಳಿದೆ ಎಂದಿದ್ದಾರೆ.[ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

ಮೊನ್ನೆ ತಾನೇ ಜಯಲಲಿತಾ ಅವರು ಆಸ್ಪತ್ರೆಗೆ ಸೇರಿದ್ದು ಅವರನ್ನು ಅವರ ಪೊಯಸ್ ಗಾರ್ಡನ್ ನಿವಾಸದಲ್ಲಿ ಯಾರೋ ತಳ್ಳಿ ಬೀಳಿಸಿದ್ದರಿಂದ ಎಂಬ ಸ್ಫೋಟಕ ಮಾಹಿತಿ ನೀಡಿದ್ದ ಇಲ್ಲಿನ ಮಾಜಿ ಸ್ಪೀಕರ್ ಪಿ.ಎಚ್.ಪಾಂಡಿಯನ್ ಮತ್ತು ಇದೀಗ ಸ್ವಾಮೀಜಿ ನೀಡಿದ ಹೇಳಿಕೆಗಳು ಜಯಲಲಿತಾ ಸಾವಿನ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+