ತಮಿಳುನಾಡಿನಲ್ಲಿ ಮುಂದುವರೆದ ಐಟಿ ರೇಡ್: ದಿನಕರನ್ ಆಪ್ತರ ಮೇಲೆ ದಾಳಿ
ಚೆನ್ನೈ, ಏಪ್ರಿಲ್ 17: ತಮಿಳುನಾಡು ರಾಜಕಾರಣಿಗಳ ಮೇಲೆ ಐಟಿ ದಾಳಿ ಮುಂದುವರೆದಿದ್ದು, ಕನಿಮೋಳಿ ಬಳಿಕ ಟಿಟಿವಿ ದಿನಕರನ್ ಮನೆಯ ಮೆಲೂ ದಾಳಿ ಮಾಡಲಾಗಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ದಿನಕರನ್ ಅವರು ಚುನಾವಣೆಗೆ ಸ್ಪರ್ಧಿಸಿರುವ ತೇನಿ ಲೋಕಸಭಾ ಕ್ಷೇತ್ರದಲ್ಲಿ ಹಲವು ಕಡೆ ದಾಳಿ ನಡೆದಿದ್ದು, ಎಎಂಎಂಕೆ ಪಕ್ಷದ ಬೆಂಬಲಿಗರೊಬ್ಬರು ನಡೆಸುವ ಅಂಗಡಿಯೊಂದರಲ್ಲಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ.
ದಾಳಿ ಸಮಯ ಐಟಿ ಅಧಿಕಾರಿಗಳನ್ನು ಅಡ್ಡಗಟ್ಟಲು ಯತ್ನಿಸಿದ ದಿನಕರ್ ಬೆಂಬಲಿಗರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೆ, ಐಟಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಐಟಿ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ಮಾಡಿದಾಗ, ಪಾಕೆಟ್‌ಗಳಲ್ಲಿ ಜೋಡಿಸಿ ಹಣವನ್ನು ಇಡಲಾಗಿತ್ತು, ಪಾಕೆಟ್‌ಗಳ ಮೇಲೆ ವಾರ್ಡ್ ಸಂಖ್ಯೆ, ವೋಟರ್‌ಗಳ ಪ್ರಮಾಣ ಮತ್ತು ಮುನ್ನೂರು ರೂಪಾಯಿ ಎಂದು ಬರೆಯಲಾಗಿತ್ತು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications