ಐಪಿಎಲ್ ಕ್ರಿಕೆಟ್ ಕಳ್ಳಾಟದಲ್ಲಿ ಧೋನಿ ಸುಳ್ಳಾಟ!

ನವದೆಹಲಿ, ಫೆ.11: ಇಂಡಿಯನ್ ಪ್ರಿಮಿಯರ್ ಲೀಗ್ ನ ವಿವಾದಿತ ತಂಡ ಚೆನ್ನೈ ಸೂಪರ್ ಕಿಂಗ್ಸ್ ಒಡೆಯ ಗುರುನಾಥ್ ಮೈಯಪ್ಪನ್ ಅವರನ್ನು ರಕ್ಷಿಸಲು ನಾಯಕ ಎಂಎಸ್ ಧೋನಿ ಹಾಗೂ ಎನ್ ಶ್ರೀನಿವಾಸನ್ ಆವರು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಮುಚ್ಚಿಹಾಕಲು ಭಾರತ ಹಾಗೂ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಯತ್ನಿಸಿದ್ದಾರೆ ಎಂದು ಐಪಿಎಲ್ ನ ಉಚ್ಚಾಟಿತ ಆಯುಕ್ತ ಲಲಿತ್ ಮೋದಿ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.[ಗುರು ಸಿಎಸ್ ಕೆ ಬಾಸ್ ಅಲ್ವಂತೆ ಗುರೂ]

ಮೈಯಪ್ಪನ್ ಗೂ ಚೆನ್ನೈ ಕ್ರಿಕೆಟ್ ತಂಡಕ್ಕೂ ಯಾವುದೇ ಸಂಬಂಧ ಹೊಂದಿಲ್ಲ ಎಂದು ಪ್ರಕರಣ ಬೆಳಕಿಗೆ ಬಂದ ತಕ್ಷಣ ಧೋನಿ ಪ್ರತಿಕ್ರಿಯಿಸಿದ್ದರು.ಅಲ್ಲದೇ ಇದೇ ರೀತಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದರು. ಆದರೆ, ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಗುರುನಾಥ್ ಮಯ್ಯಪ್ಪನ್ ಪಾತ್ರವಿದೆ ಎಂದು ಸುಪ್ರೀಂಕೋರ್ಟ್ ನಿಂದ ನೇಮಿಸಲ್ಪಟ್ಟ ಜಸ್ಟೀಸ್ ಮುದ್ಗಲ್ ಸಮಿತಿಯ ವರದಿಯಲ್ಲಿ ತಿಳಿಸಿದೆ.

MS Dhoni Chennai Super Kings captain involved in cover-up

ಪ್ರಕರಣ ಮುಚ್ಚಿ ಹಾಕಲು ಧೋನಿಯ ಪಾತ್ರವೂ ಇದೆ' ಎಂದು ಲಂಡನ್ ನಿಂದ ಸಿಎನ್ ‌ಎನ್-ಐಬಿಎನ್ ‌ಗೆ ಮೋದಿ ತಿಳಿಸಿ, ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ‌ನಲ್ಲಿ ಗುರುನಾಥ್ ಮಯ್ಯಪ್ಪನ್ ಪಾತ್ರವಿದೆ ಎಂದು ಸುಪ್ರೀಂಕೋರ್ಟ್ ನಿಂದ ನೇಮಿಸಲ್ಪಟ್ಟ ಜಸ್ಟೀಸ್ ಮುದ್ಗಲ್ ಸಮಿತಿಯ ವರದಿಯಲ್ಲಿ ತಿಳಿಸಿರುವ ಕಾರಣ ಮೈಯಪ್ಪನ್ ನ ಮಾವ ಹಾಗೂ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ‌ಗೆ ಆಜೀವ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ.[ದಾವೂದ್ ಜತೆ ಶ್ರೀಶಾಂತ್ ಮೇಲೂ ಚಾರ್ಜ್ ಶೀಟ್]

'ಜಸ್ಟೀಸ್ ಮುದ್ಗಲ್ ಸಮಿತಿಯ ವರದಿಯಲ್ಲಿ ನಾನು ಹೇಳಿದ್ದು ಸತ್ಯ ಎಂದು ಸಾಬೀತಾಗಿದೆ. ಭವಿಷ್ಯದ ವಿಶ್ವ ಕ್ರಿಕೆಟ್‌ನಲ್ಲಿ ರಾರಾಜಿಸುವ ಕನಸು ಕಾಣುತ್ತಿರುವ ಶ್ರೀನಿಗೆ ಈ ವರದಿ ಆಘಾತ ತಂದಿದೆ' ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

ಐಪಿಎಲ್ ನಿಯಮದ ಪ್ರಕಾರ ಯಾವುದೇ ತಂಡದ ಮಾಲೀಕರು, ಫ್ರಾಂಚೈಸಿ ಸದಸ್ಯರು ಕಳ್ಳಾಟದಲ್ಲಿ ಭಾಗಿಯಾಗಿದ್ದರೆ ಅಥವಾ ಐಪಿಎಲ್ ನಿಯಮ ಮೀರಿ ವರ್ತಿಸಿದ್ದರೆ ಅವರನ್ನು ಹಾಗೂ ಅವರು ಪ್ರತಿನಿಧಿಸುವ ತಂಡವನ್ನು ವಜಾಗೊಳಿಸಬಹುದಾಗಿದೆ. ಆದರೆ, ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಲಿ, ಗುರುನಾಥ್ ಹಾಗೂ ಧೋನಿಗಾಗಲಿ ಯಾವುದೇ ಹಾನಿಯಾಗಿಲ್ಲದಿರುವುದು ದುರಂತ ಎಂದು ಮೋದಿ ಹೇಳಿದ್ದಾರೆ.

ಈ ನಡುವೆ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೂ ಭೂಗತ ಜಗತ್ತಿನ ದೊರೆಗಳಾದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಅವರಿಗೂ ಸಂಬಂಧವಿದೆ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ತನಿಖೆ ನಡೆಸಲು ಮುಂಬೈ ಪೊಲೀಸರು ಕೂಡಾ ಹಿಂದೇಟು ಹಾಕುತ್ತಿದ್ದಾರೆ ಎಂದು ಜಸ್ಟೀಸ್ ಮುಕುಲ್ ಮುದ್ಗಲ್ ವರದಿಯಲ್ಲಿ ಹೇಳಲಾಗಿದೆ. ಪಾಕಿಸ್ತಾನ ಅಂಪೈರ್ ಅಸದ್ ರೌಫ್ ಹೆಸರು ಕೂಡಾ ಕೇಳಿ ಬಂದಿದೆ.ದೆಹಲಿ ಪೊಲೀಸರು ಹಾಕಿರುವ ಚಾರ್ಜ್ ಶೀಟ್ ನಲ್ಲಿ ಭೂಗತ ಪಾತಕಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. (ಐಎಎನ್ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+