ಮೊದಲ ಉಗ್ರ 'ಹಿಂದು' ಎಂದ ಕಮಲ್ ಹಾಸನ್ ಗೆ ಟ್ವಿಟ್ಟರ್ ನಲ್ಲಿ ತಪರಾಕಿ!

ಚೆನ್ನೈ, ಮೇ 13: "ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ 'ಹಿಂದು'. ಆತನ ಹೆಸರು ನಾಥೂರಾಮ್ ಗೋಡ್ಸೆ" ಎಂಬ ಹೇಳಿಕೆ ನೀಡಿದ ನಟ, ರಾಜಕಾರಣಿ ಕಮಲ್ ಹಾಸನ್ ಅವರಿಗೆ ಟ್ವಿಟ್ಟಿಗರು ತಪರಾಕಿ ನೀಡಿದ್ದಾರೆ.

ಭಾರತದ ಮೊದಲ ಉಗ್ರ ಮೊಹಮ್ಮದ್ ಅಲಿ ಜಿನ್ಹಾ ಎಂದೊಬ್ಬರು ಟ್ವೀಟ್ ಮಾಡಿದ್ದರೆ, ಕಮಲ್ ಹಾಸನ್ ಅವರ ಬುದ್ಧಿ ಕೈಕೊಟ್ಟಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19 ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, "ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದು ಕಮಲ್ ಹಾಸನ್ ಎಂದಿದ್ದರು.

ನಾನು ರಾಜಕೀಯಕ್ಕೆ ಬಂದಿದ್ದೇ, 1948 ರಲ್ಲಿ ಗಾಂಧಿ ಹತ್ಯೆ ಯಾಕಾಯಿತು ಎಂದು ಕಾರಣ ತಿಳಿಯುವುದಕ್ಕೆ ಎಂದು ಸಹ ಇದೇ ಸಂದರ್ಭದಲ್ಲಿ ಹಾಸನ್ ಹೇಳಿದ್ದರು.

ಮೊದಲ ಉಗ್ರ ಜಿನ್ಹಾ

ಸರ್, ಕಲ್ ಹಾಸನ್,
ಭಾರತದ ಮೊದಲ ಉಗ್ರ ಮೊಹಮ್ಮದ್ ಅಲಿ ಜಿನ್ಹಾ. ಮೊಹಮ್ಮದ್ ಅಲಿ ಜಿನ್ಹಾ ಸ್ವಹಿತಾಸಕ್ತಿಗಾಗಿ, ಮಿಲಿಯನ್ ಗಟ್ಟಲೆ ಹಿಂದು, ಮುಸ್ಲಿಮರನ್ನು ಕೊಂದಿದ್ದ- ಅನುರಾಗ್

ಅಧಿಕಾರಕ್ಕಾಗಿ ಸಂತೋಷದಿಂದ ದೇಶ ಒಡೆಯುತ್ತಾರೆ!

ಒಬ್ಬ ಮುಸ್ಲಿಂ ನೂರಾರು ಜನರನ್ನು ಕೊಂದರೆ ಆಗ ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ ಈ ಕಮಲ್ ಹಾಸನ್ ಹಿಂದುವನ್ನು ಉಗ್ರ ಎನ್ನಲು ಹೇಸುವುದಿಲ್ಲ. ಅಧಿಕಾರಕ್ಕಾಗಿ ಅವರು ಸಂತೋಷದಿಂದ ದೇಶ ಒಡೆಯುತ್ತಾರೆ- ಕೇಸರಿಯಾ ವಿಲಾಯತಿ

Array

ಕಮಲ್ ಮಾತನಾಡುವಾಗ ಯೋಚಿಸೋದಿಲ್ಲ!

ಕಮಲ್ ಹಾಸನ್ ಅವರ ಸಾರ್ವಜನಿಕ ಭಾಷಣ ಮತ್ತು ಮಾಧ್ಯಮ ಸಂದರ್ಶಸನಗಳನ್ನು ನೋಡಿದರೆ ಎರಡು ವಿಷಯ ಅರ್ಥವಾಗುತ್ತದೆ.
1. ಅವರು ಮಾತನಾಡುವ ಮುನ್ನ ಯೋಚಿಸುವುದಿಲ್ಲ ಎಂಬುದು.
2. ಯಾರಿಗೂ ಅರ್ಥವಾಗದಂತೆ ಮಾತನಾಡಿದರೆ ತಾವು ಬುದ್ಧಿವಂತರು ಎಂದು ಜನ ಸಂದುಕೊಳ್ಳುತ್ತಾರೆ ಎಂಬುದು: ಅಂಬುದನ್ ಬಾಲಾ

ಗೋಡ್ಸೆ ಉಗ್ರ ಎಂದರೆ ಸಾಕಿತ್ತು, ಹಿಂದು ಪದ ಬಳಕೆ ಏಕೆ?

ಪ್ರೀತಿಯ ಕಮಲ್ ಸರ್, ನೀವೊಬ್ಬ ದೊಡ್ಡ ಕಲಾವಿದ. ಹೇಗೆ ಕಲೆಗೆ ಧರ್ಮವಿಲ್ಲವೋ, ಹಾಗೆಯೇ ಭಯೋತ್ಪಾದನೆಗೂ ಧರ್ಮವಿಲ್ಲ. ನೀವು ಗೋಡ್ಸೆ ಒಬ್ಬ ಉಗ್ರ ಎಂದರೆ ಸಾಕಿತ್ತು. ಆದರೆ ನೀವು ಹಿಂದು ಎಂಬ ಪದವನ್ನು ಒತ್ತಿ ಹೇಳಿದ್ದು ಏಕೆ? ಏಕೆಂದರೆ ನೀವು ಮಾತನಾಡುತ್ತಿದ್ದುದು ಮುಸ್ಲಿಮರೇ ಹೆಚ್ಚಿರುವ ಪ್ರದೇಶದಲ್ಲಿ. ನಿಮಗೆ ಮತ ಬೇಕಿತ್ತು!- ವಿವೇಕ್ ಒಬೆರಾಯ್, ನಟ

ಆಗ ಹಿಂದು ಎಂದು ಬಾಯಿಬಡಿದುಕೊಂಡಿದ್ದು ನೀನೇ ತಾನೆ?

ಆಗ ಹಿಂದು ಎಂದು ಬಾಯಿಬಡಿದುಕೊಂಡಿದ್ದು ನೀನೇ ತಾನೆ?

"ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ..
ಅದಕ್ಕೆ ಕೆನಡಾ ವಿಮಾನ ನಿಲ್ದಾಣದಲ್ಲಿ ಕಮಲ ಹಾಸನ್ ಎನ್ನುವ ಹೆಸರನ್ನು ಕೇಳಿ ಅಧಿಕಾರಿಗಳು ಗಂಟೆಗಳ ಕಾಲ ತಡೆದು ನಿಲ್ಲಿಸಿ ತೀವ್ರ ವಿಚಾರಣೆ ಮಾಡಿದ್ದಾಗ "ನಾನು ಹಿಂದೂ" ಅಂತ ಬಾಯಿಬಡಿದುಕೊಂಡಿದ್ದು ನೀನೇ ತಾನೇ - ಪೂರ್ವಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+