ಚಿತ್ರಗಳಲ್ಲಿ: ಚೆನ್ನೈ ಸಮುದ್ರ ತೀರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಾಚರಣೆ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 02: ಇಲ್ಲಿನ ಕಡಲ ತೀರದಲ್ಲಿ ಕರಾವಳಿ ಕಾವಲುಪಡೆಯ ನೂರಾರು ಸಿಬ್ಬಂದಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಮೀನುಗಾರರು ಸೋರಿದ ತೈಲವನ್ನು ನೀರಿನಿಂದ ಬೇರ್ಪಡಿಸಲು ಭಾರಿಯಂತ್ರಗಳ ನೆರವಿನೊಂದಿಗೆ ಹರಸಾಹಸ ಪಡುತ್ತಿದ್ದಾರೆ.

ಚೆನ್ನೈಯ ಕಾಮರಾಜಾರ್ ಬಂದರು ಸಮೀಪ ಇತ್ತೀಚೆಗೆ ಎರಡು ನೌಕೆಗಳು ಪರಸ್ಪರ ಢಿಕ್ಕಿ ಹೊಡೆದುದ್ದವು. ಇದಾದ ಬಳಿಕ ಟನ್​ಗಟ್ಟಲೆ ತೈಲ ಸೋರಿಕೆಯಾಗಿ ಸಮುದ್ರ ಸೇರಿತ್ತು. ಸುಮಾರು 35 ಕಿ.ಮೀ.ಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿದ ಬಳಿಕ ಆಡಳಿತಗಾರರು ಎಚ್ಚೆತ್ತುಕೊಂಡಿದ್ದಾರೆ.

ಜನವರಿ 25ರ ಶನಿವಾರ ಕಾಮರಾಜಾರ್ ಬಂದರಿನ ಸಮೀಪ ಎರಡು ನೌಕೆಗಳು ಪರಸ್ಪರ ಢಿಕ್ಕಿ ಹೊಡೆದ ಬಳಿಕ ಅವುಗಳಿಂದ ಸೋರಿಕೆಯಾಗಿರುವ ಟನ್​ಗಟ್ಟಲೆ ತೈಲ ಸಮುದ್ರವನ್ನು ಸೇರಿ ಪರಿಸರ ಮಾಲಿನ್ಯದ ಜೊತೆಗೆ ನೀರಿನಲ್ಲಿರುವ ಜಲಚರಗಳಿಗೆ ಭಾರಿ ಅಪಾಯವನ್ನು ತಂದೊಡ್ಡಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಸಂಸದೆ ಕನ್ನಿಮೋಳಿ ಅವರು ಸಂಸತ್ತಿನಲ್ಲಿ ಬುಧವಾರ ವಿಷಯ ಪ್ರಸ್ತಾಪಿಸಿ, ಕೇಂದ್ರದ ನೆರವು ಕೋರಿದ್ದಾರೆ.

ಕಲುಷಿತಗೊಂಡ ಪರಿಸರ

ಕಲುಷಿತಗೊಂಡ ಪರಿಸರ

ಕರಾವಳಿ ಕಾವಲುಪಡೆಯ ನೂರಾರು ಸಿಬ್ಬಂದಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಮೀನುಗಾರರು ಸೋರಿದ ತೈಲವನ್ನು ನೀರಿನಿಂದ ಬೇರ್ಪಡಿಸಲು ಭಾರಿಯಂತ್ರಗಳ ನೆರವಿನೊಂದಿಗೆ ಬೃಹತ್ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ. ಆದರೆ, ಸ್ವಯಂಸೇವಕರ ಕೊರತೆ ಎದುರಾಗಿದ್ದು, ಕಲುಷಿತ ನೀರು, ಪರಿಸರ ವ್ಯಾಪಿಸುತ್ತಿದೆ.

ಕಾಮರಾಜಾರ್ ಬಂದರು ಸಮೀಪದಲ್ಲಿ

ಕಾಮರಾಜಾರ್ ಬಂದರು ಸಮೀಪದಲ್ಲಿ

ಜನವರಿ 25ರ ಶನಿವಾರ ಕಾಮರಾಜಾರ್ ಬಂದರಿನ ಸಮೀಪ ಎರಡು ನೌಕೆಗಳು ಪರಸ್ಪರ ಢಿಕ್ಕಿ ಹೊಡೆದ ಬಳಿಕ ಟನ್​ಗಟ್ಟಲೆ ತೈಲ ಸಮುದ್ರವನ್ನು ಸೇರಿದೆ. ಕಿಲೋ ಮೀಟರ್ ಗಟ್ಟಲೆ ವ್ಯಾಪ್ತಿಸಿರುವ ತೈಲದಿಂದ ಅನೇಕ ಜಲಚರಗಳು ಸಾವನ್ನಪ್ಪಿವೆ.

27 ಟನ್ ತೈಲ ಈವರೆಗೆ

27 ಟನ್ ತೈಲ ಈವರೆಗೆ

ಸುಮಾರು 40 ಟನ್ ತೈಲ ರಾಡಿ ಮತ್ತು 27 ಟನ್ ತೈಲ ಈವರೆಗೆ ಸಮುದ್ರದ ನೀರನ್ನು ಸೇರಿದೆ. ಸುಮಾರು 35 ಕಿಮೀ ವ್ಯಾಪ್ತಿಯಲ್ಲಿ ಸೋರಿದ ತೈಲ ಹರಡಿದೆ ಎಂದು ಕರಾವಳಿ ಕಾವಲು ಪಡೆ ಹೇಳಿದೆ. ಸಮುದ್ರದಲ್ಲಿ

ಜಲಚರಗಳು ಸಾವನ್ನಪ್ಪಿವೆ

ಜಲಚರಗಳು ಸಾವನ್ನಪ್ಪಿವೆ

ಟನ್​ಗಟ್ಟಲೆ ತೈಲ ಸಮುದ್ರವನ್ನು ಸೇರಿ ಪರಿಸರ ಮಾಲಿನ್ಯದ ಜೊತೆಗೆ ನೀರಿನಲ್ಲಿರುವ ಜಲಚರಗಳಿಗೆ ಭಾರಿ ಅಪಾಯವನ್ನು ತಂದೊಡ್ಡಿದೆ. ಜಲಮಾಲಿನ್ಯ ಪ್ರದೇಶದಲ್ಲಿ ಸಹಸ್ರಾರು ಆಮೆಗಳು, ಮೀನುಗಳು ಸಾವನ್ನಪ್ಪಿವೆ. ಕೂಡಲೇ ಪರಿಹಾರ ಸಿಗದಿದ್ದರೆ, ಜಲಚರಗಳ ಕ್ಷಾಮ ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.

27 ಟನ್ ತೈಲ ಸಮುದ್ರ ಸೇರಿದೆ

27 ಟನ್ ತೈಲ ಸಮುದ್ರ ಸೇರಿದೆ

27 ಟನ್ ತೈಲ ಈವರೆಗೆ ಸಮುದ್ರದ ನೀರನ್ನು ಸೇರಿದೆ, 40 ಟನ್ ತೈಲ ರಾಡಿಯನ್ನು ತೀರ ಪ್ರದೇಶಗಳಿಂದ ಹೊರ ತೆಗೆಯಲಾಗಿದೆ ಎಂದು ವರದಿಗಳು ಬಂದಿವೆ. ಆದರೆ, ಸ್ವಯಂಸೇವಕರ ಕೊರತೆಯಿಂದ ಕಾರ್ಯಾಚರಣೆ ವಿಳಂಬವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hundreds of Coast Guard men, engineering students and fishermen are using their hands to clear a giant oil spill in the sea near Chennai, with a machine proving useless in pumping out the thickening sludge reports NDTV
Please Wait while comments are loading...