ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಮುಂದುವರಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ 'ಬರ'!

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 21: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET)ಯು ಇನ್ನು ಕೆಲವು ವರ್ಷಗಳವರೆಗೆ ಮುಂದುವರಿದರೆ ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಣಿತ ವೈದ್ಯರ ಸಂಖ್ಯೆ ಇಳಿಮುಖ ಆಗಬಹುದು ಎಂದು ನಿವೃತ್ತ ನ್ಯಾಯಮೂರ್ತಿ ರಾಜನ್ ಸಮಿತಿ ನೀಡಿದ 165 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಮಿಳುನಾಡು ಸರ್ಕಾರವು ನೀಟ್ ಪರೀಕ್ಷೆಯಿಂದ ಆಗುವ ಸಾಮಾಜಿಕ-ಆರ್ಥಿಕ ಪ್ರಭಾವದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವುದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಎ ಕೆ ರಾಜನ್ ನೇತೃತ್ವದ ಸಮಿತಿ ರಚಿಸಿತ್ತು. ಈ ಸಮಿತಿಯು "ತಮಿಳುನಾಡಿನಲ್ಲಿ ವೈದ್ಯಕೀಯ ಪ್ರವೇಶದ ಮೇಲೆ ನೀಟ್ ಪ್ರಭಾವವನ್ನು ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿಯ ವರದಿ"ಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ನೀಟ್ ಪರೀಕ್ಷೆ ಭೀತಿ: 5 ದಿನಗಳಲ್ಲಿ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!ನೀಟ್ ಪರೀಕ್ಷೆ ಭೀತಿ: 5 ದಿನಗಳಲ್ಲಿ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!

ನೀಟ್ ಪರೀಕ್ಷೆಗೆ ಸಂಬಂಧಿಸಿದ 165 ಪುಟಗಳ ವರದಿಯನ್ನು ಸಮಿತಿಯು ಅಂತಿಮವಾಗಿ ಸಲ್ಲಿಸಿದೆ. ಈ ಹಿಂದೆ ತಮಿಳುನಾಡು ವಿಧಾನಸಭೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ವಿರುದ್ಧ ಮತ ಚಲಾಯಿಸಲಾಗಿತ್ತು. ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿತ್ತು. ನೀಟ್ ಪರೀಕ್ಷೆ ಅಂಕಗಳ ಬದಲಿಗೆ 12ನೇ ತಗರತಿಯ ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಗಳನ್ನು ಮುಂದಿನ ಹಂತದ ಕಾಲೇಜುಗಳಿಗೆ ದಾಖಲಿಸಿಕೊಳ್ಳಬೇಕು ಎಂದು ತಮಿಳುನಾಡು ಸರ್ಕಾರ ಕೇಳಿದೆ.

ನೀಟ್ ಪರೀಕ್ಷೆಗಿಂತ ಪಿಯುಸಿ ಅಂಕಗಳ ಆಧಾರವೇ ಉತ್ತಮ

ನೀಟ್ ಪರೀಕ್ಷೆಗಿಂತ ಪಿಯುಸಿ ಅಂಕಗಳ ಆಧಾರವೇ ಉತ್ತಮ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಮೂಲಕ ಎಂಬಿಬಿಎಸ್ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳು 12ನೇ ತರಗತಿಯ ಅಂಕಗಳ ಆಧಾರದ ಮೇಲೆ ದಾಖಲಾಗಿದ್ದ ವಿದ್ಯಾರ್ಥಿಗಳಿಗಿಂತ ಕಳಪೆ ಗುಣಮಟ್ಟವನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆ ಕೆಟ್ಟ ಪ್ರಭಾವ

ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆ ಕೆಟ್ಟ ಪ್ರಭಾವ

ಒಂದು ವೇಳೆ ನೀಟ್ ಪರೀಕ್ಷೆಗಳು ಇನ್ನು ಕೆಲವು ವರ್ಷಗಳವರೆಗೂ ಮುಂದುವರಿದರೆ, "ತಮಿಳುನಾಡು ಆರೋಗ್ಯ ವ್ಯವಸ್ಥೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ," ಎಂದು ರಾಜ್ಯಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ. "ಅಲ್ಲದೇ ಅಂತಿಮವಾಗಿ ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿ ಮರುಕಳಿಸುವ ಅಪಾಯವಿದೆ ಎಂದು ವರದಿ ತಿಳಿಸಿದೆ. ವೈದ್ಯಕೀಯ ಮತ್ತು ಆರೋಗ್ಯ ಸುರಕ್ಷತೆಯಲ್ಲಿ ತಮಿಳುನಾಡು ಎಲ್ಲ ರಾಜ್ಯಗಳಿಗಿಂತ ಹಿಂದೆ ಉಳಿಯಲಿದೆ."

ನೀಟ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಅಪಾಯ

ನೀಟ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಅಪಾಯ

"ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯು ಹಣವಂತರತ್ತ ಬಾಗಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೆ ಅಪಾಯ ಎದುರಾಗಲಿದೆ. ನೀಟ್ ಆಧಾರದ ಮೇಲೆ ಪ್ರವೇಶ ಪಡೆಯುವವರು ಪ್ರಾಥಮಿಕವಾಗಿ ನಗರ, ಶ್ರೀಮಂತ, ವಿದ್ಯಾವಂತ ಕುಟುಂಬಗಳಿಂದ ಬಂದವರೇ ಆಗಿರುತ್ತಾರೆ. ಶೇ.70 ವಿದ್ಯಾರ್ಥಿಗಳು ತಮ್ಮ ಪಿಜಿ ಕೋರ್ಸ್ ಮುಗಿಸಿದ ತಕ್ಷಣ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳೊಂದಿಗೆ ಕೆಲಸ ಮಾಡಲು ಶುರು ಮಾಡಿರುವುದನ್ನು ಕಂಡುಕೊಂಡಿದ್ದೇವೆ. ಆದರೆ ನೀಟ್ ಪರಿಚಯಿಸುವ ಮುನ್ನ ಪರಿಸ್ಥಿತಿ ಹೀಗೆ ಇರಲಿಲ್ಲ. ಈ ಮೊದಲು ಶೇ.70ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳೊಂದಿಗೆ ಕೆಲಸ ಮಾಡಲು ಮನಸು ಮಾಡುತ್ತಿದ್ದರು. ಆದ್ದರಿಂದ ನಾನು ನೀಟ್ ವಿನಾಶಕಾರಿ ಎಂದು ಹೇಳುತ್ತೇನೆ, ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳು ಮಾಡುತ್ತದೆ," ಎಂದು ಎಕೆ ರಾಜನ್ ಸಮಿತಿಯ ಸದಸ್ಯರಾದ ಡಾ. ಜವಾಹರ್ ನೇಸನ್ ನ್ಯೂಸ್ 18 ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

9 ತಜ್ಞರ ತಂಡ ರಚಿಸಿದ್ದ ತಮಿಳುನಾಡು ಸರ್ಕಾರ

9 ತಜ್ಞರ ತಂಡ ರಚಿಸಿದ್ದ ತಮಿಳುನಾಡು ಸರ್ಕಾರ

ತಮಿಳುನಾಡು ಆರೋಗ್ಯ ವ್ಯವಸ್ಥೆಯ ಮೇಲೆ ನೀಟ್ ಪರೀಕ್ಷೆ ಪ್ರಭಾವದ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎಕೆ ರಾಜನ್ ನೇತೃತ್ವದಲ್ಲಿ ರಾಜ್ಯ ಆರೋಗ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣದ ನಿರ್ದೇಶಕರು ಸೇರಿದಂತೆ ಒಟ್ಟು 9 ಸದಸ್ಯರನ್ನೊಳಗೊಂಡ ತಜ್ಞರ ತಂಡವನ್ನು ರಚಿಸಿತ್ತು. ನೀಟ್ ಪರೀಕ್ಷೆ ಕುರಿತು ಸಾರ್ವಜನಿಕರಿಂದ 90,000 ಜನರ ಪ್ರತಿಕ್ರಿಯೆಯನ್ನು ಸಮಿತಿಯು ಸಂಗ್ರಹಿಸಿತು. ತಮಿಳುನಾಡು ಮುಖ್ಯಮಂತ್ರಿಗೆ 165 ಪುಟಗಳ ವರದಿ ಸಲ್ಲಿಸುವುದಕ್ಕೂ ಪೂರ್ವದಲ್ಲಿ ಇದರ ಮೇಲೆ ಸಮಿತಿಯು ಒಂದು ತಿಂಗಳ ಕಾಲ ಕೆಲಸ ಮಾಡಿದೆ.

English summary
NEET continues then there might not be enough expert doctors for being employed in the Government Hospitals, reveals report of Retired Justice Rajan Committee. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X