'ನಾನು ಹೆದರುವುದು ಮಾಧ್ಯಮಗಳಿಗೆ ಮಾತ್ರ: ರಜನಿಕಾಂತ್
Recommended Video

ಚೆನ್ನೈ, ಡಿಸೆಂಬರ್ 31: ಪ್ರಜಾಪ್ರಭುತ್ವ ವ್ಯವಸ್ಥೆ ಬದಲಾಯಿಸಲು ರಾಜಕೀಯ ಪ್ರವೇಶ ಅನಿವಾರ್ಯವಾಗಿತ್ತು. ರಾಜಕೀಯ ಪ್ರವೇಶದ ಈ ಸಂದರ್ಭದಲ್ಲಿ ನಾನು ಚೋ ರಾಮಸ್ವಾಮಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದರು.
ಮಾಧ್ಯಮಗಳ ಬಗ್ಗೆ ನನಗೆ ಅಪಾರ ಗೌರವ, ಭಯ ಭಕ್ತಿ ಎಲ್ಲವೂ ಇದೆ ಎಂದರು. ಅಂಕಣಕಾರ, ರಾಜಕೀಯ ವಿಶ್ಲೇಷಣಕಾರ, ಪತ್ರಕರ್ತ, ನಟ, ಸಂಭಾಷಣಕಾರ, ಸಿನೆಮಾ ನಿರ್ದೇಶಕ, ಜಯಲಲಿತಾ ಹಿತೈಷಿ ಚೋ ರಾಮಸ್ವಾಮಿ ಅವರನ್ನು ಇಂದು ತುಂಬಾ ಸ್ಮರಿಸುತ್ತಿದ್ದೇನೆ. ಅವರು ನೀಡಿದ ಸಲಹೆ ಎಂದಿಗೂ ನಾನು ಪಾಲಿಸುತ್ತೇನೆ ಎಂದರು.

'ನನಗೆ ರಾಜಕೀಯ ಹೊಸದಲ್ಲ, ರಾಜಕೀಯ ಪ್ರವೇಶದಿಂದ ಭಯವಾಗಿಲ್ಲ. ಆದರೆ, ನಾನು ಈ ಕ್ಷೇತ್ರದಲ್ಲಿ ಇಂದು ಸಣ್ಣ ಕೂಸು, ಈ ನಿಟ್ಟಿನಲ್ಲಿ ನಾನು ಮಾಧ್ಯಮಗಳ ಬಗ್ಗೆ ಎಚ್ಚರಿಕೆಯಿಂದಿರುತ್ತೇನೆ. ನನ್ನ ಸರಿ ತಪ್ಪುಗಳನ್ನು ತಿದ್ದುವ ಕಾರ್ಯ ಇವರಿಂದ ನನಗೆ ಆಗಲಿದೆ. ಚೋ ಸಾರ್ ನನಗೆ ಈ ಬಗ್ಗೆಯೇ ಸಲಹೆ ನೀಡಿದ್ದು, ಅವರ ಸಲಹೆ ಪಾಲಿಸಬೇಕಿದೆ. ಅವರಿದಿದ್ದರೆ ನಮ್ಮ ರಾಜ್ಯದ ವ್ಯವಸ್ಥೆ ಹದಗೆಡುತ್ತಿರಲಿಲ್ಲ ಎಂದು ಭಾವುಕರಾದರು.

ಮೊನಚಾದ, ಪಾರದರ್ಶಕ ಬರಹಗಳಿಂದ ರಾಜಕೀಯ ನಾಯಕರನ್ನು ಕಟುವಾಗಿ ಟೀಕಿಸುತ್ತಿದ್ದ ಚೋ ರಾಮಸ್ವಾಮಿ ಯಾವ ನಾಯಕರನ್ನೂ ಬಿಟ್ಟಿರಲಿಲ್ಲ. 'ತುಘಲಕ್' ಪತ್ರಿಕೆಯ ಸಂಪಾದಕರಾಗಿದ್ದ ಅವರ ಪೆನ್ನಿನ ಮೊನೆಯಿಂದ ತಿವಿಸಿಕೊಂಡವರಲ್ಲಿ ಇಂದಿರಾಗಾಂಧಿ, ವಾಜಪೇಯಿ, ಕರುಣಾನಿಧಿ, ಜಯಲಲಿತಾ, ಜೆಬಿ ಕೃಪಲಾನಿ, ಎಂಜಿ ರಾಮಚಂದ್ರನ್, ರಾಮಕೃಷ್ಣ ಹೆಗಡೆಯವರು ಸೇರಿದ್ದಾರೆ.












Click it and Unblock the Notifications