ಪೊಲ್ಲಾಚಿ ಲೈಂಗಿಕ ಕಿರುಕುಳ ಕೇಸ್: ಎಐಎಡಿಎಂಕೆ ವಿರುದ್ಧ ತಿರುಗಿಬಿದ್ದ ಕಮಲ್

ಚೆನ್ನೈ, ಮಾರ್ಚ್ 15: ಪೊಲ್ಲಾಚಿಯ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ನಿರ್ಲಕ್ಷ್ಯವನ್ನು ಖಂಡಿಸಿ, ನಟ, ಮಕ್ಕಳ್ ನೀತಿ ಮೈಯಂ ನಾಯಕ ಕಮಲ್ ಹಾಸನ್ ಅವರು ವಿಡಿಯೋ ಸಂದೇಶ ಕಳಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ವಿಡಿಯೋ ಸಂದೇಶದ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿರ್ಭಯಾ ಪ್ರಕರಣ ನಡೆದಾಗ ವಿಶ್ವದ ಇತರೆಡೆಯಂತೆ ತಮಿಳುನಾಡಿನ ಮುಖಂಡರು ಸ್ಪಂದಿಸಿದ್ದರು. ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಮಹಿಳೆ ವಿರುದ್ಧದ ಕ್ರೈಂಗಳನ್ನು ಅತಿಮಾನುಷ ಪ್ರಕರಣಗಳಂತೆ ಪರಿಗಣಿಸಿ, ಉನ್ನತಾಧಿಕಾರಿಗಳು ಮುತುವರ್ಜಿ ವಹಿಸಿಕೊಂಡು ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂದಿದ್ದರು.

ದಿವಂಗತ ಜಯಲಲಿತಾ ಅವರ ಆಶಯದಂತೆ ನಡೆಯುತ್ತೇವೆ ಎಂದಿರುವ ಎಐಎಡಿಎಂಕೆ ಪಕ್ಷ ಈಗ ಏನು ಮಾಡುತ್ತಿದೆ. ಪೊಲ್ಲಾಚಿ ಕೇಸ್ ಬಗ್ಗೆ ನಿರ್ಲಕ್ಷ್ಯ ಏಕೆ ಎಂದು ಕಮಲ್ ಪ್ರಶ್ನಿಸಿದ್ದಾರೆ.

How can you be so careless: Kamal Haasan slams AIADMK over Pollachi case

ದೂರು ನೀಡಿದ ಮಹಿಳೆಯ ಹೆಸರನ್ನು ಕೊಯಮತ್ತೂರು ಎಸ್ ಪಿ ಬಹಿರಂಗ ಪಡಿಸಿದ್ದೇಕೆ? ಕಿರುಕುಳ ನೀಡುವ ವಿಡಿಯೋಗಳು ಸೋರಿಕೆಯಾಗಿದ್ದು ಹೇಗೆ? ಸರ್ಕಾರಕ್ಕೆ ಕಿಂಚಿತ್ತು ಕಾಳಜಿಯಿಲ್ಲ ಎಂದು ಕಮಲ್ ಕಿಡಿಕಾರಿದ್ದಾರೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಂತ್ರಸ್ತರ ಫೋಟೋ, ವಿಡಿಯೋ, ಹೆಸರು ಬಹಿರಂಗಪಡಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ, ಮಾನವೀಯತೆಗೆ ಬೆಲೆ ಇಲ್ಲದ್ದಂತೆ ಇಲ್ಲಿನ ಸರ್ಕಾರ ವರ್ತಿಸುತ್ತಿದೆ ಎಂದು ಕಮಲ್ ಬೇಸರ ವ್ಯಕ್ತಪಡಿಸಿದರು.

ಪೊಲ್ಲಾಚಿಯಲ್ಲಿ ಫೆಬ್ರವರಿ 26ರಂದು ನಾಲ್ಕು ಮಂದಿಯ ಗುಂಪೊಂದು 19 ವರ್ಷ ವಯಸ್ಸಿನ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಪೊಲ್ಲಾಚಿಯ ಈ ಕಾಮುಕರನ್ನು ಬಂಧಿಸಿದ ಮೇಲೆ ವಿಚಾರಣೆ ವೇಳೆ ಈ ಗ್ಯಾಂಗ್ ನಿಂದ 50ಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಸುಮಾರು ಏಳು ವರ್ಷಗಳ ಕಾಲ ಈ ರೀತಿ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ, ಸಂತ್ರಸ್ತರನ್ನು ಪೀಡಿಸಿ, ಬೆದರಿಸಿ, ಹಣ ಗಳಿಸುತ್ತಿದ್ದರು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+