ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ಹಿಂಗಾರು ಮಳೆ, ರಸ್ತೆಯಾಯಿತು ಹೊಳೆ!

|
Google Oneindia Kannada News

ಚೆನ್ನೈ, ಅ. 20 : ಚೆನ್ನೈನ ಜನರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಕ್ರವಾರದಿಂದ ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ನಗರದಗಳಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ನಗರದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯುತ್ತಿರುವುದರಿಂದ ವಾಹನ ಸವಾರರು ಪರಾಡುತ್ತಿದ್ದಾರೆ.

ನೈಋತ್ಯ ಮುಂಗಾರು ದೇಶದಿಂದ ಸಂಪೂರ್ಣವಾಗಿ ನಿರ್ಗಮಿಸಿರುವ ಬೆನ್ನಲ್ಲೇ ಹಿಂಗಾರು ಮಾರುತಗಳು ಶನಿವಾರ ದಕ್ಷಿಣ ಭಾರತ ಪ್ರವೇಶಿಸಿದ್ದು, ದಕ್ಷಿಣದ ರಾಜ್ಯಗಳಲ್ಲಿ ಮಳೆ ಆರಂಭವಾಗಿದೆ. ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಮಳೆಯಾಗುತ್ತಿದ್ದು ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚೆನ್ನೈ ಮಳೆಯ ಚಿತ್ರಗಳು ಇಲ್ಲಿವೆ [ಸೂರ್ಯ ನಾಪತ್ತೆ, ಬೆಂಗಳೂರಿಗರಿಗೆ ಚಳಿ ತಾಪತ್ರೆ]

ಚೆನ್ನೈನಲ್ಲಿ ಭಾರೀ ಮಳೆ

ಚೆನ್ನೈನಲ್ಲಿ ಭಾರೀ ಮಳೆ

ಚೆನ್ನೈನ ಜನರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಕ್ರವಾರದಿಂದ ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ನಗರದಗಳಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ.

ಮೆಟ್ರೋ ಕೆಲಸದಿಂದ ಸವಾರರ ಪರದಾಟ

ಮೆಟ್ರೋ ಕೆಲಸದಿಂದ ಸವಾರರ ಪರದಾಟ

ಚೆನ್ನೈ ನಗರದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯುತ್ತಿರುವುದರಿಂದ ರಸ್ತೆಗಳ ತುಂಬಾ ನೀರು ತುಂಬಿದೆ. ಇದರಿಂದಾಗಿ ವಾಹನ ಸವಾರರು ಮತ್ತಷ್ಟು ಪರಾಡುತ್ತಿದ್ದಾರೆ.

ಹಿಂಗಾರು ಮಾರುತಗಳಿಂದಾಗಿ ಮಳೆ

ಹಿಂಗಾರು ಮಾರುತಗಳಿಂದಾಗಿ ಮಳೆ

ನೈಋತ್ಯ ಮುಂಗಾರು ದೇಶದಿಂದ ಸಂಪೂರ್ಣವಾಗಿ ನಿರ್ಗಮಿಸಿರುವ ಬೆನ್ನಲ್ಲೇ ಹಿಂಗಾರು ಮಾರುತಗಳು ಶನಿವಾರ ದಕ್ಷಿಣ ಭಾರತ ಪ್ರವೇಶಿಸಿದ್ದು, ದಕ್ಷಿಣದ ರಾಜ್ಯಗಳಲ್ಲಿ ಮಳೆ ಆರಂಭವಾಗಿದೆ.

ದಕ್ಷಿಣ ರಾಜ್ಯಗಳಲ್ಲಿ ಮಳೆ

ದಕ್ಷಿಣ ರಾಜ್ಯಗಳಲ್ಲಿ ಮಳೆ

ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಮಳೆಯಾಗುತ್ತಿದ್ದು ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

66 ಮರಗಳು ಧರೆಗೆ

66 ಮರಗಳು ಧರೆಗೆ

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈನಗರದಲ್ಲಿ 66 ಮರಗಳು ಧರೆಗೆ ಉರುಳಿವೆ.

ಎಲ್ಲಿ, ಎಷ್ಟು ಮಳೆ

ಎಲ್ಲಿ, ಎಷ್ಟು ಮಳೆ

ಭಾನುವಾರ ಸಂಜೆಯ ತನಕ ಮೀನಬಾಕಂನಲ್ಲಿ 74.8 ಮಿ.ಮೀ ಮಳೆಯಾಗಿದೆ. ಮಳೆಯಿಂದಾಗಿ ನಗರದ ಉಷ್ಣಾಂಶ ಕುಸಿದಿದ್ದು, 25.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಪರದಾಡಿದ ನೌಕರರು

ಪರದಾಡಿದ ನೌಕರರು

ರಸ್ತೆಯಲ್ಲಿ ತುಂಬಿದ್ದ ನೀರನ್ನು ಹೊರಹಾಕಲು ಮಹಾನಗರ ಪಾಲಿಕೆ ನೌಕರರು ಪರಾಡಬೇಕಾಯಿತು. ಕೆಲವು ರಸ್ತೆಗಳಲ್ಲಿ ತುಂಬಿದ್ದ ನೀರನ್ನು ಮೋಟಾರ್ ಮೂಲಕ ಹೊರಹಾಕಲಾಯಿತು.

ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ

ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ

ಮಳೆಯಿಂದಾಗಿ ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಸರ್ಕಾರ ಮಳೆ ಸಂತ್ರಸ್ತರಿಗೆ ಸಹಾಯವಾಣಿಯನ್ನು ಆರಂಭಿಸಿದ್ದು, ರಾಜ್ಯ ಮಟ್ಟದಲ್ಲಿ 1070 ಮತ್ತು ಜಿಲ್ಲಾ ಮಟ್ಟದಲ್ಲಿ 1077 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಅಧಿಕಾರಿಗಳೊಂದಿಗೆ ಸರಣಿ ಸಭೆ

ಅಧಿಕಾರಿಗಳೊಂದಿಗೆ ಸರಣಿ ಸಭೆ

ಹಿಂಗಾರು ಮಾರುತಗಳಿಂದ ಮಳೆ ಹೆಚ್ಚಾಗುತ್ತದೆಯೇ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆ ಎಂದು ಕಂದಾಯ ಸಚಿವರು ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.

ಜನರ ಪರದಾಟ ತಪ್ಪಿದ್ದಲ್ಲ

ಜನರ ಪರದಾಟ ತಪ್ಪಿದ್ದಲ್ಲ

ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಜನರ ಪರದಾಟ ತಪ್ಪಿದ್ದಲ್ಲ.

English summary
As heavy rains continued to lash many parts of the Tamil Nadu including Chennai city for another 48 hours said, meteorological department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X