ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರೋನು' ಅಬ್ಬರಕ್ಕೆ ರೋದಿಸುತ್ತಿರುವ ತಮಿಳುನಾಡು

|
Google Oneindia Kannada News

ಚೆನ್ನೈ, ನವೆಂಬರ್, 14: ಚಂಡಮಾರುತದ 'ರೋನು' ಅಬ್ಬರ ಮುಂದುವರಿದಿದ್ದು ತಮಿಳುನಾಡಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಮಳೆ ಆರ್ಭಟಕ್ಕೆ ತಮಿಳುನಾಡಿನಲ್ಲಿ ಶುಕ್ರವಾರ 7 ಜನ ಸಾವಿಗೀಡಾಗಿದ್ದಾರೆ. ಮಳೆಗೆ ಜೀವ ಕಳೆದುಕೊಂಡವರ ಸಮಖ್ಯೆ 60 ದಾಟಿದೆ.

ವಾಯುಭಾರ ಕುಸಿತದ ಪರಿಣಾಮ ಕಾಂಚೀಪುರಂನಲ್ಲಿ ಅಧಿಕ 34 ಸೆಂ.ಮೀ ಮಳೆ ದಾಖಲಾಗಿದೆ. ಪುಝಲ್‌ ಮತ್ತು ರೆಡ್‌ಹಿಲ್‌ನಲ್ಲಿ ತಲಾ 21 ಸೆಂ.ಮೀ. ಮಳೆ ದಾಖಲಾಗಿದೆ. ಚೆನ್ನೈ ನಗರದಲ್ಲೇ 15 ಸೆಂ.ಮೀ. ಮಳೆಯಾಗಿದೆ.[ಚಂಡಮಾರುತ 'ರೋನು', ಎಲ್ಲೆಲ್ಲಿ ಅಬ್ಬರಿಸುತ್ತಿದೆ?]

ರಾಜ್ಯದಲ್ಲಿ ಇನ್ನು ಮೂರು ದಿನ ಮಳೆ
ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿಯ ಕೆಲವು ಕಡೆ ಇನ್ನೂ ಮೂರು ದಿನ ಮಳೆಯಾಗಲಿದ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಮಳೆ ತರಿಸಲಿದ್ದು ಉತ್ತರ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.

ತಮಿಳುನಾಡಿನಾದ್ಯಂತ ಸುರಿಯುತ್ತಿರುವ ಮಳೆ ಜನ ಜೀವನದ ಮತ್ತು ಕೃಷಿಯ ಮೇಲೆ ಪರಿಣಾಮ ಉಂಟುಮಾಡಿದ್ದು, ಮಳೆಯ ಆರ್ಭಟವನ್ನು ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ....[ಪಿಟಿಐ ಚಿತ್ರಗಳು]

ಕೊಚ್ಚಿ ಹೋದ ಸೇತುವೆ

ಕೊಚ್ಚಿ ಹೋದ ಸೇತುವೆ

ದಕ್ಷಿಣ ಚೆನ್ನೈನ ಥಾಮಸ್‌ ಮೌಂಟ್‌ ಮತ್ತು ವೆಲಚೇರಿ ಪ್ರದೇಶಗಳೂ ಸೇರಿ ಹಲವಡೆ ರೈಲ್ವೇ ಸೇತುವೆ ಗಳು ಕೊಚ್ಚಿ ಹೋಗಿ ಸಂಚಾರಕ್ಕೆ ವ್ಯತ್ಯಯ ವುಂಟಾಗಿದೆ. ಚೆನ್ನೈ ಸೇರಿ ಹಲವಾರು ಜಿಲ್ಲೆಗಳಲ್ಲಿ ಅಧಿಕ ಮಳೆಯ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಜಲಾಶಯಗಳಾದ ರಸ್ತೆ

ಜಲಾಶಯಗಳಾದ ರಸ್ತೆ

ವಾಹನಗಳು ರಸ್ತೆ ಮಧ್ಯದಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಸ್ಥಗಿತವಾಗಿದೆ. ರಾಜ್ಯದ ಹಲವಾರು ಕೆರೆ ಮತ್ತು ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು ಈ ವರ್ಷ ಕುಡಿಯುವ ನೀರಿಗೆ ವ್ಯತ್ಯಯವುಂಟಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರ

ಮೃತರ ಕುಟುಂಬಕ್ಕೆ ಪರಿಹಾರ

ಮೃತರಿಗೆ ಸಂತಾಪ ಸೂಚಿಸಿರುವ ತಮಿಳುನಾಡು ಸಿಎಂ ಜಯಲಲಿತಾ, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಮೆಟ್ಟೂರು ಜಲಾಶಯ ಮಟ್ಟ ಏರಿಕೆ

ಮೆಟ್ಟೂರು ಜಲಾಶಯ ಮಟ್ಟ ಏರಿಕೆ

ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೆಟ್ಟೂರು ಅಣೆಕಟ್ಟಿನ ಮಟ್ಟ 80 ಅಡಿಗೆ ಏರಿದೆ. 3 ದಿನದ ಹಿಂದಷ್ಟೇ ಅಣೆಕಟ್ಟು ಮಟ್ಟ 65 ಅಡಿ ಇತ್ತು. ಈಗ ಅಣೆಕಟ್ಟಿಗೆ 20 ಸಾವಿರ ಕ್ಯುಸೆಕ್‌ ಒಳಹರಿವು ಇದೆ.

English summary
The toll in rain-related incidents in Tamil Nadu increased to 60 on Saturday, even as MeT office forecast another spell of heavy showers next week following formation of a new trough of low pressure. The toll in rain-related incidents rose to 60 on November 14, with the state government reporting another 17 deaths in the last two days, most of them from Cuddalore. Chief Minister J Jayalalithaa condoled the death of the victims, a majority of whom died due to drowning in flood waters and announced Rs four lakh each to their families as assistance from the Disaster Relief Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X