ಕೇಂದ್ರಕ್ಕೆ ವರದಿ ಸಲ್ಲಿಸಿದ ತಮಿಳುನಾಡು ಗವರ್ನರ್ ವಿದ್ಯಾಸಾಗರ್

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 9: ಗುರುವಾರ ಸಂಜೆಯ ವೇಳೆಗೆ ನಡೆದ ತಮಿಳುನಾಡು ರಾಜಕೀಯ ವಿದ್ಯಮಾನಗಳು ಕ್ರಮೇಣ ನಿರ್ಣಾಯಕ ಘಟ್ಟಕ್ಕೆ ತಲುಪುತ್ತಿವೆ.

ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾದ ಎಐಡಿಎಂಕೆ ಪಕ್ಷದ ಇಬ್ಬರು ಕಲಿಗಳಾದ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಅವರನ್ನು ಭೇಟಿ ಮಾಡಿದ ನಂತರ, ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ವಿಸ್ತ್ರೃತ ವರದಿಯನ್ನು ಸಲ್ಲಿಸಿದ್ದಾರೆಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಡಿಎಂಕೆ ಪಕ್ಷವೂ ಪನ್ನೀರ್ ಸೆಲ್ವಂ ಅವರಿಗೆ ಬಹುಮತ ಸಾಬೀತುಪಡಿಸಲು ಸಹಾಯ ಮಾಡುವುದಾಗಿ ಘೋಷಿಸಿದೆ.[ಹಠಾತ್ ತಿರುವು: ಚಿನ್ನಮ್ಮ ವಿರುದ್ಧ ತಿರುಗಿಬಿದ್ದ 35 ಶಾಸಕರು!]

Governor submitts report to centre regarding Tamilnadu crisis


ವರದಿಯಲ್ಲಿ, ಪನ್ನೀರ್ ಸೆಲ್ವಂ ಹಾಗೂ ಅವರ ಬೆಂಬಲಿಗರು ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ನೀಡಿರುವ ಹೇಳಿಕೆಗಳಿಗೇ ಪ್ರಾಮುಖ್ಯತೆ ಸಿಕ್ಕಿದೆ ಎಂದು ಹೇಳಲಾಗಿದೆ.[ರಾಜ್ಯಪಾಲರ ಮುಂದೆ ಸರ್ಕಾರ ರಚಿಸುವ ಪ್ರಸ್ತಾವನೆಯಿಟ್ಟ ಶಶಿಕಲಾ]

ಶಶಿಕಲಾ ಅವರು, ಒತ್ತಡ ಹೇರಿ ಪನ್ನೀರ್ ಸೆಲ್ವಂ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವಂತೆ ಮಾಡಿದ್ದು, ಎಐಡಿಎಂಕೆ ಪಕ್ಷದ ಅನೇಕ ಶಾಸಕರ ಮೇಲೆ ಒತ್ತಡ ಹೇರಿ ಅವರನ್ನು ತಮ್ಮ ಹಿಡಿತಲ್ಲಿಟ್ಟುಕೊಳ್ಳಲು ಪ್ರಯತ್ನಿಸಿರುವ ಕುರಿತಂತೆ ರಾಜ್ಯಪಾಲರು ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆಂದು ಹೇಳಲಾಗಿದೆ.[ರಾಜ್ಯಪಾಲರ ಭೇಟಿ ನಂತರ ಧರ್ಮಕ್ಕೆ ಗೆಲುವೆಂದ ಪನ್ನೀರ್ ಸೆಲ್ವಂ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamilnadu Governor submitted the detailed report about ongoing political drama for power. In evening he met with the AIDMK leaders Panner Selvam and Sasikala. After that he submitted his report to the centre.
Please Wait while comments are loading...