'ಗೋ ಬ್ಯಾಕ್ ಮೋದಿ...' ತಮಿಳು ನಾಡಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ!

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 12: "ಗೋ ಬ್ಯಾಕ್ ಮೋದಿ..." ಇದು ಸದ್ಯಕ್ಕೆ ತಮಿಳುನಾಡಿನಾದ್ಯಂತ ಕೇಳಿಬರುತ್ತಿರುವ ಸ್ವರ! ಡಿಎಂಕೆ ನಾಯಕರಾದ ಕರುಣಾನಿಧಿ, ಕನ್ನಿಮೋಳಿ ಸೇರಿದಂತೆ ತಮಿಳುನಾಡಿನ ಘಟಾನುಘಟಿ ನಾಯಕರೂ ಕಪ್ಪು ಬಟ್ಟೆ ತೊಟ್ಟು ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಫೆನ್ಸ್ ಎಕ್ಸ್ ಪೋ 2018 ರ ಉದ್ಘಾಟನೆಗಾಗಿ ಚೆನ್ನೈಗೆ ಆಗಮಿಸಿರುವ ಪ್ರಧಾನಿ ಮೋದಿಯವರಿಗೆ ಸಿಕ್ಕಿದ್ದು ಕಪ್ಪು ಬಾವುಟ ಮತ್ತು ಬಲೂನ್ ಸ್ವಾಗತ! ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ತಮಿಳುನಾಡಿನಾದ್ಯಂತ ಸಾಕಷ್ಟು ಪ್ರತಿಭಟನೆ ನಡೆಯುತ್ತಿದೆ.

ಚೆನ್ನೈ ನಲ್ಲಿ Defence Expo 2018 ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಆಗಮನದ ಮೇಲೂ ಇದು ಪರಿಣಾಮ ಬೀರಿದ್ದು, ಎಲ್ಲೆಲ್ಲೂ 'ಗೋ ಬ್ಯಾಕ್ ಮೋದಿ' ಎಂಬ ಕೂಗು ಪ್ರತಿಧ್ವನಿಸುತ್ತಿದೆ. ಟ್ವಿಟ್ಟರ್ ನಲ್ಲೂ GoBackModi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ತಮಿಳುನಾಡಿಗೆ ಬರಬೇಡಿ!

ಗೌರವಾನ್ವಿತ ಪ್ರಧಾನಿಗಳೇ, ನಿಮಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ನಿರ್ಮಿಸುವುದಕ್ಕೆ ಸಾಧ್ಯವಿಲ್ಲ ಎಂದಾದರೆ ದಯವಿಟ್ಟು ತಮಿಳುನಾಡಿಗೆ ಬರಬೇಡಿ ಎಂದು ರಾಮಚಂದ್ರನ್ ಕೆ. ಎಂಬುವವರು ಟ್ವೀಟ್ ಮಾಡಿದ್ದಾರೆ. ತಮಿಳು ಜನರ ಒಗ್ಗಟ್ಟಿನ ಬಗ್ಗೆ ನಿಮಗೆ ಅರಿವಿಲ್ಲ. ವಿಶ್ವದಾದ್ಯಂತ ಇರುವ ತಮಿಳಿಗರೂ ಈ ಪ್ರತಿಭಟನೆಗೆ ಬೆಂಬಲನೀಡದಿದ್ದರಿಂದಲೇ ಗೋ ಬ್ಯಾಕ್ ಮೋದಿ ಹ್ಯಾಶ್ ಟ್ಯಾಗ್ ವಿಶ್ವದಲ್ಲೇ ನಂ.1 ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಆಗಿರುವುದು ಎಂದು ಮತ್ತಷ್ಟು ಜನ ಟ್ವೀಟ್ ಮಾಡಿದ್ದಾರೆ.

ನಮ್ಮೊಂದಿಗೆ ರಾಜಕೀಯ ಮಾಡಬೇಡಿ!

ನಮ್ಮೊಂದಿಗೆ ರಾಜಕೀಯ ಮಾಡಬೇಡಿ. ತಮಿಳುನಾಡಿಗೆ ಸಾವಿರಾರು ವರ್ಷದ ಪರಂಪರೆಯಿದೆ. ನಮ್ಮ ತಾಳ್ಮೆ ಮುಗಿದಿದೆ. ಕೇವಲ ರಾಷ್ಟ್ರೀಯ ಪಕ್ಷಗಳಿಗೆ ಮಾತ್ರವಲ್ಲ, ಇಲ್ಲಿನ ಪ್ರಾದೇಶಿಕ ಪಕ್ಷಗಳಿಗೂ ನಾವು ಪಾಠ ಕಲಿಸುತ್ತೇವೆ. ಇನ್ನು ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇವೆ ಎಂದಿದ್ದಾರೆ ಶ್ರೀನಿವಾಸನ್ ಎಸ್.

ಇಂದಿನಿಂದ ಚೆನ್ನೈನಲ್ಲಿ Defence Expo 2018: ಭಾರತದ ಶಕ್ತಿಪ್ರದರ್ಶನ

ನೀವು ಪ್ರಧಾನಿಯಾಗುವುದಕ್ಕೆ ಸಮರ್ದಥರಲ್ಲ!

ತಮಿಳುನಾಡಿನಿಂದ ವಾಪಸ್ ಹೋಗಿ. ನೀವು ಪ್ರಧಾನಿ ಹುದ್ದೆಗೆ ಸೂಕ್ತರಲ್ಲ. ಹೋಗಿ ಮತ್ತೆ ಚಹ ಮಾರಲು ಆರಂಭಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ನ್ಯಾನೀಸ್ ಸರವಣನ್ ಎಂಬುವವರು. ನೀವು ತಮಿಳುನಾಡಿಗಾಗಿ ಏನನ್ನೂ ಮಂಆಡಿಲ್ಲ. ನಿಮ್ಮ ಗಮನವೇನಿದ್ದರೂ ಉತ್ತರ ಭಾರತದ ರಾಷ್ಟ್ರಗಳಷ್ಟೇ ಎಂದು ಮತ್ತಷ್ಟು ಜನ ಮೋದಿಯವರ ಕಾಲೆಳೆದಿದ್ದಾರೆ.

ಮುಳ್ಳಿನಿಂದಲೇ ಮುಳ್ಳು ತೆಗೆಯುತ್ತಿದ್ದಾರೆ ಜನ!

GoBackModi ಹ್ಯಾಶ್ ಟ್ಯಾಗ್ ಸದ್ಯಕ್ಕೆ ನಂಬರ್ 1 ಆಗಿದೆ. ತಮ್ಮ ವಿರೊಧಿಗಳನ್ನು ಹಳಿಯಲು ಸಾಮಾಜಿಕ ಮಾಧ್ಯಮಗಳನ್ನೇ ಬಳಸುತ್ತಿದ್ದ ಬಿಜೆಪಿಗೆ ಅದೇ ಸಾಮಾಜಿಕ ಮಾಧ್ಯಮದಿಂದಲೇ ಜನರು ಪೆಟ್ಟುಕೊಟ್ಟಿದ್ದಾರೆ. ಏಪ್ರಿಲ್ 12, 2018 ಒಂದು ಐತಿಹಾಸಿಕ ದಿನ ಎಂದಿದ್ದಾರೆ ಅದ್ವೈತ್ ಎಂಬುವವರು.

ನಿಮ್ಮ ಮೊಸಳೆ ಕಣ್ಣೀರಿಗೆ ಬಗ್ಗೋಲ್ಲ

ನಿಮ್ಮ ಮೊಸಳೆ ಕಣ್ಣೀರಿಗೆ ಬಗ್ಗುವುದಕ್ಕೆ ಇದು ಉತ್ತರ ಭಾರತದ ರಾಜ್ಯವಲ್ಲ! ಇದು ತಮಿಳುನಾಡು ಎಂದಿದ್ದಾರೆ ನಿನೋ ಎಂಬುವವರು. ಕಾವೇರಿ ಜಲ ಮಂಡಳಿ ರಚಿಸದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನಾದ್ಯಂತ ಎದ್ದಿರುವ ಆಕ್ರೋಶಕ್ಕೆ ಎಲ್ಲೆಲ್ಲೂ ಕಪ್ಪು ಬಟ್ತೆಯೇ ಕಾಣಿಸುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೂ ಕಪ್ಪು ಬಾವುಟವನ್ನು ಹಿಡಿದಿರುವ ದೃಶ್ಯ ಕಾಣಿಸುತ್ತಿದೆ. ಈ ಪ್ರತಿಭಟನೆ ತಮಿಳಿಗರ ಒಗ್ಗಟ್ಟಿನ ಪ್ರತೀಕವೆನ್ನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi was greeted with black flags and black balloons upon his arrival in Chennai on April 12th. The protestors expressing their rage against the Centre for not constituting the Cauvery Management Board (CMB). Go Back Modi hashtag is also trending on twitter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ