• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಗೋ ಬ್ಯಾಕ್ ಮೋದಿ' ಪ್ರತಿಭಟನೆ: 60 ಪ್ರತಿಭಟನಾಕಾರರು ವಶಕ್ಕೆ

|

ಕೊಯಮತ್ತೂರು, ಮಾರ್ಚ್ 30: ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಜ್ಯಕ್ಕೆ ತೆರಳುತ್ತಿದ್ದು, ಅವರ ಭೇಟಿ ವಿರುದ್ಧ ಮತ್ತೆ ಪ್ರತಿಭಟನೆ ನಡೆಯುತ್ತಿದೆ. ಮೋದಿ ಭೇಟಿಗೂ ಮುನ್ನ 'ಗೋ ಬ್ಯಾಕ್ ಮೋದಿ' ಫಲಕ ಹಿಡಿದು ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 60 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರದರ್ಶಿಸಿದ ಪ್ರತಿಭಟನಾಕಾರರು ಮೋದಿ ಅವರ ಭೇಟಿಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿದರು. 10 ಮಹಿಳೆಯರು ಸೇರಿದಂತೆ ಸುಮಾರು 60 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ವಿದೇಶಿ ಹಸುಗಳ ಹಾಲು ಕುಡಿದ ಮಹಿಳೆಯರು...: ಡಿಎಂಕೆ ಮುಖಂಡನ 'ಸೆಕ್ಸಿಸ್ಟ್' ಹೇಳಿಕೆ ವಿವಾದ

ಶ್ರೀಲಂಕಾದಲ್ಲಿ ನಡೆದಿರುವ ಯುದ್ಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಯ ವೇಳೆ ಪ್ರಧಾನಿ ಮೋದಿ ಅವರು ಶ್ರೀಲಂಕಾ ಸರ್ಕಾರದ ವಿರುದ್ಧ ಮತ ಚಲಾಯಿಸದ ಕಾರಣ ಈ ಪ್ರತಿಭಟನೆ ನಡೆದಿದೆ.

'ಮೋದಿ ತಮಿಳಿನ ವಿರುದ್ಧ' ಎಂದು ಬರೆದಿದ್ದ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಜತೆಗೆ ಮೋದಿ ಹಾಗೂ ಶ್ರೀಲಂಕಾ ನಾಯಕ ಮಹಿಂದಾ ರಾಜಪಕ್ಸ ಅವರ ಚಿತ್ರಗಳನ್ನು ಪ್ರದರ್ಶಿಸಿದರು. ಪ್ರತಿಭಟನಾಕಾರರು ರಸ್ತೆ ತಡೆಯನ್ನೂ ನಡೆಸಿದ್ದರಿಂದ ಅವರನ್ನು ಪೊಲೀಸರು ಅಲ್ಲಿಂದ ಬಲವಂತವಾಗಿ ಎಳೆದೊಯ್ದರು.

ಸಿಎಂ ಬಗ್ಗೆ ಚಪ್ಪಲಿ ಮಾತು: ಪಳನಿಸ್ವಾಮಿ ಕ್ಷಮೆ ಕೋರಿದ ಎ ರಾಜಾ

ಬಿಜೆಪಿ ರಾಜ್ಯ ಅಧ್ಯಕ್ಷ ಎಲ್ ಮುರುಗನ್ ಅವರ ಪರ ಪ್ರಚಾರ ನಡೆಸುವ ಸಲುವಾಗಿ ಮೋದಿ ಅವರು ಧರ್ಮಾಪುರಂಗೆ ಭೇಟಿ ನೀಡಲಿದ್ದಾರೆ. 'ಗೋ ಬ್ಯಾಕ್ ಮೋದಿ' ಎಂಬ ಪ್ರತಿಭಟನೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

   Robin Uthappa ಈ ವರ್ಷ CSK ಪರ ಜೀವನ ಶ್ರೇಷ್ಠ ಆಟವಾಡಲಿದ್ದಾರೆ | Oneindia Kannada

   English summary
   Around 60 protesters were taken into custody for protesting against PM Narendra Modi ahead of his visit to Tamil Nadu.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X