7 ವರ್ಷದ ಬಾಲಕನ ಬಾಯಲ್ಲಿತ್ತು ಬರೋಬ್ಬರಿ 526 ಹಲ್ಲು
ಚೆನ್ನೈ, ಆಗಸ್ಟ್ 1: ಮನುಷ್ಯನ ಬಾಯಲ್ಲಿ ಸಾಮಾನ್ಯವಾಗಿ ಎಷ್ಟು ಹಲ್ಲುಗಳಿರಬಹುದು? ಹಲ್ಲುಗಳ ಸಾಲಿನಲ್ಲಿ ಒಂದಷ್ಟು ಸಮಸ್ಯೆಯಾಗಿ ಅಡ್ಡಾದಿಡ್ಡಿಯಾಗಿ ಹಲ್ಲುಗಳು ಹುಟ್ಟಿದರೂ ಗರಿಷ್ಠ 33-34ರವರೆಗೆ ಮೂಡಬಹುದು. ಆದರೆ, ಇಲ್ಲೊಬ್ಬ ಬಾಲಕನ ಬಾಯಿ ಪರೀಕ್ಷಿಸಿದ ದಂತ ವೈದ್ಯರು ಅಕ್ಷರಶಃ ಕಂಗಾಲಾಗಿದ್ದರು. ಏಕೆಂದರೆ ಆತನ ಬಾಯಲ್ಲಿ ಇದ್ದದ್ದು ಬರೋಬ್ಬರಿ 526 ಹಲ್ಲುಗಳು.
ತಮಿಳುನಾಡಿನ ಚೆನ್ನೈನ ಏಳು ವರ್ಷದ ಬಾಲಕನೊಬ್ಬನ ಬಾಯಲ್ಲಿದ್ದ 526 ಹಲ್ಲುಗಳನ್ನು ದಂತ ವೈದ್ಯರು ಹೊರತೆಗೆದಿದ್ದಾರೆ. ಅಂದ ಹಾಗೆ ಆತನ ಬಾಯಲ್ಲಿ ಈ ಎಲ್ಲ ಹಲ್ಲುಗಳು ಉಳಿದ ಹಲ್ಲುಗಳಂತೆ ದಂತಪಂಕ್ತಿಯಲ್ಲಿ ಇರಲಿಲ್ಲ.
ತನ್ನ ಕೆಳದವಡೆಯ ಭಾಗದಲ್ಲಿ ಊತ ಉಂಟಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಪಿ. ರವೀಂದ್ರನ್ ಎಂಬ ಬಾಲಕನನ್ನು ಜುಲೈ 11ರಂದು ಚೆನ್ನೈನ ಸವಿತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಗಿತ್ತು. ಆತನ ಬಾಯನ್ನು ಎಕ್ಸ್‌ರೇ ತೆಗೆದ ವೈದ್ಯರಿಗೆ ಕಾಣಿಸಿದ್ದು, 526 ಸಣ್ಣ ಸಣ್ಣ ಹಲ್ಲುಗಳಿದ್ದ ಚೀಲದಂತಹ ಗಡ್ಡೆ. ಈ ಗಡ್ಡೆ ಸುಮಾರು 200 ಗ್ರಾಂ ತೂಕವಿತ್ತು.

ದವಡೆಯ ಭಾಗದೊಳಗೆ ವಿವಿಧ ಹಂತಗಳಲ್ಲಿ ಗಟ್ಟಿಯಾದ ಗಡ್ಡೆಯ ರಚನೆ ಬೆಳೆದಿತ್ತು. ಆ ಬಾಲಕ ಅತ್ಯಂತ ಅಪರೂಪದ 'ಕಾಂಪೌಂಡ್ ಕಾಂಪೋಸಿಟ್ ಒಡೊಂಟೊಮಾ' ಎಂಬ ಸಮಸ್ಯೆಯಿಂದ ಬಳಲುತ್ತಿದ್ದ. ಅಷ್ಟೊಂದು ಸಂಖ್ಯೆಯ ಪುಟಾಣಿ ಹಲ್ಲುಗಳನ್ನು ಹೊಂದಿರುವ ಪ್ರಕರಣ ಜಗತ್ತಿನಲ್ಲಿ ಇದುವರೆಗೂ ದಾಖಲಾಗಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಮಗನಿಗೆ ಮೂರು ವರ್ಷವಾಗಿದ್ದಾಗಿನಿಂದಲೂ ದವಡೆಯಲ್ಲಿ ಊತ ಆರಂಭವಾಗಿತ್ತು ಎಂದು ಬಾಲಕನ ತಂದೆ ಪ್ರಭು ತಿಳಿಸಿದ್ದಾರೆ. 2014ರಲ್ಲಿ ಮುಂಬೈನಲ್ಲಿ ಇದೇ ರೀತಿಯ ಪ್ರಕರಣ ದಾಖಲಾಗಿತ್ತು. ಬಾಲಕನೊಬ್ಬನ ಬಾಯಲ್ಲಿ ಇದ್ದ ಗಡ್ಡೆಯಿಂದ 232 ಹಲ್ಲುಗಳನ್ನು ಹೊರತೆಗೆಯಲಾಗಿತ್ತು.
ಏನಿದು ಒಡೊಂಟೊಮಾ?
ಒಡೊಂಟೊಮಾ ಎನ್ನುವುದು ಹಲ್ಲಿನ ಬೆಳವಣಿಗೆ ಸಂಬಂಧಿಸಿದ ಗಡ್ಡೆ. ಇದು ಕ್ಯಾನ್ಸರ್ ಕಾರಕವಲ್ಲದ ಕಾರಣ ತೀವ್ರ ಮಾರಕವಲ್ಲ. ಇದು ಸಹಜವಾಗಿಯೇ ಬೆಳೆಯುವ ಹಲ್ಲಿನ ಗುಣಗಳಿಂದ ಸಂರಚಿತವಾಗಿದ್ದರೂ, ಅಸಹಜ ರೀತಿಯಲ್ಲಿ ಬೆಳೆಯುತ್ತದೆ. ಇದರಲ್ಲಿ ಕಠಿಣ ಮತ್ತು ಮೃದು ಎರಡೂ ಬಗೆಯ ಅಂಗಾಂಶಗಳಿರುತ್ತವೆ.
ಒಡೊಂಟೊಮಾ ಸಾಮಾನ್ಯವಾಗಿ 14 ವರ್ಷದ ಒಳಗಿನವರಲ್ಲಿ ಕಾಣಿಸಿಕೊಳ್ಳುತ್ತದೆ. ನಿರೀಕ್ಷಿತ ಅವಧಿಯಲ್ಲಿ ಹಲ್ಲುಗಳು ಬೆಳೆಯುವಲ್ಲಿ ವಿಫಲವಾದಾಗ ಮತ್ತು ಬೆಳೆಯದ ಒಂದೆರಡು ಹಲ್ಲುಗಳೊಂದಿಗೆ ಈ ಸಮಸ್ಯೆ ಉದ್ಭವಿಸುತ್ತದೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ದವಡೆಯ ಮೇಲೆ ಪರಿಣಾಮ ಬೀರಿದ ನಿದರ್ಶನಗಳಾಗಿದ್ದರೂ, ಬಾಯಿ ಹುಳುಕಿನೊಂದಿಗೆ ಕಾಣಿಸಿಕೊಂಡ ಪ್ರಕರಣಗಳೂ ಇವೆ. ಇದು ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಡುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ತೆಗೆದುಹಾಕಲಾಗುತ್ತದೆ.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications