ಉಸಿರಾಟದ ತೊಂದರೆ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಆಸ್ಪತ್ರೆಗೆ

ಚೆನ್ನೈ, ಆಗಸ್ಟ್ 16: ಅನಾರೋಗ್ಯದ ಕಾರಣಕ್ಕೆ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಅವರು ಕಾವೇರಿ ಆಸ್ಪತ್ರೆಗೆ ಸೇರಿದ್ದಾರೆ.

ವರದಿಗಳ ಪ್ರಕಾರ, ಕೃತಕ ಆಹಾರ ಪೂರೈಕೆ ಪೈಪ್ ಬದಲಾವಣೆಗಾಗಿ ಕರುಣಾನಿಧಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಒಂದು ಗಂಟೆಯೊಳಗಾಗಿ ಅವರು ಮನೆಗೆ ಹಿಂತಿರುಗುತ್ತಾರೆ.

ಕಳೆದ ವರ್ಷ ಡಿಸೆಂಬರ್ ಹದಿನೈದರಂದು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆಳ್ವಾರ್ ಪೇಟ್ ನಲ್ಲಿರುವ ಕಾವೇರಿ ಆಸ್ಪತ್ರೆಗೆ ಮತ್ತೆ ಸೇರಿದ್ದಾರೆ. ಉಸಿರಾಟದ ತೊಂದರೆ, ಗಂಟಲು ಹಾಗೂ ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

DMK chief Karunanidhi admitted to hospital

ಇನ್ನು ಕಳೆದ ವರ್ಷ ಡಿಸೆಂಬರ್ ಒಂದರಂದು ಅತಿಸಾರದಿಂದ ಬಳಲುತ್ತಿದ್ದ ಅವರು ಡಿಸೆಂಬರ್ ಏಳರ ರಾತ್ರಿ ಡಿಸ್ ಚಾರ್ಜ್ ಆಗಿದ್ದರು. ಕೆಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಕರುಣಾನಿಧಿ ಅವರಿಗೆ ಸೂಚಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+