ಜೂನ್ 3ರಂದು ಕರುಣಾನಿಧಿ ಸಾಧನೆ ವಜ್ರ ಮಹೋತ್ಸವ
1957ರಲ್ಲಿ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದ ಎಂ. ಕರುಣಾನಿಧಿ ಈವರೆಗೆ ಸತತವಾಗಿ ಶಾಸಕರಾಗಿ ಆಯ್ಕೆಯಾಗಿ ವಿಶಿಷ್ಟವಾದ ಸಾಧನೆ ಮಾಡಿರುವ ಕರುಣಾನಿಧಿಗಾಗಿ ಏರ್ಪಡಿಸಲಾಗಿರುವ ಸನ್ಮಾನ ಸಮಾರಂಭವಿದು.
ಚೆನ್ನೈ, ಮೇ 20: ತಮಿಳುನಾಡು ವಿಧಾನಸಭೆಯಲ್ಲಿ ಶಾಸಕರಾಗಿ ಸತತ 60 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಧುರೀಣ ಎಂ. ಕರುಣಾನಿಧಿಯವರ ವಜ್ರ ಮಹೋತ್ಸವ ಸಮಾರಂಭವನ್ನು ಜೂ. 3ರಂದು ಚೆನ್ನೈನಲ್ಲಿ ಆಯೋಜಿಸಲಾಗಿದೆ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
1957ರಲ್ಲಿ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದ ಎಂ. ಕರುಣಾನಿಧಿ ಈವರೆಗೆ ಸತತವಾಗಿ ಶಾಸಕರಾಗಿ ಆಯ್ಕೆಯಾಗಿ ವಿಶಿಷ್ಟವಾದ ಸಾಧನೆ ಮಾಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಸ್ಟಾಲಿನ್, ''ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು. ಆ ಸಮಾರಂಭದಲ್ಲಿ ಕರುಣಾನಿಧಿಯವರ ಸಾಧನೆಗಳನ್ನು ಜನರ ಮುಂದಿಡಲಾಗುವುದು. ಅನೇಕ ಗಣ್ಯರು, ಪಕ್ಷದ ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾರಂಭಕ್ಕೆ ಹಾಜರಾಗಲಿದ್ದಾರೆ'' ಎಂದು ತಿಳಿಸಿದರು.
ಕರುಣಾನಿಧಿಯವರು ಸಮಾರಂಭಕ್ಕೆ ಹಾಜರಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಕರುಣಾನಿಧಿಯವರ ಆರೋಗ್ಯ ಸರಿಯಿಲ್ಲ. ವೈದ್ಯರು ಅನುಮತಿ ಕೊಟ್ಟಲ್ಲಿ ಮಾತ್ರ ಅವರು ಸಮಾರಂಭಕ್ಕೆ ಹಾಜರಾಗಲಿದ್ದಾರೆ'' ಎಂದು ತಿಳಿಸಿದರು.
{promotion-urls}












Click it and Unblock the Notifications