ಗುರು ಎಂಜಿಆರ್ ಮಾರ್ಗದಲ್ಲೇ ಸಾಗುತ್ತೇನೆ: ಜಯಲಲಿತಾ
ಚೆನ್ನೈ, ಮಾ.11: ಪುರಚ್ಚಿ ತಲೈವಿ ಮತ್ತೊಮ್ಮೆ ಸಕ್ರಿಯ ರಾಜಕೀಯಕ್ಕೆ ಮರಳಲು ರಹದಾರಿ ಸಿಕ್ಕಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೋಮವಾರ ಅಕ್ರಮ ಆಸ್ತಿ ಪ್ರಕರಣದಲ್ಲಿ ನಿರ್ದೋಷಿ ಎಂಬ ಟ್ಯಾಗ್ ಸಿಕ್ಕಿದೆ. 19 ವರ್ಷಗಳ ಕಾನೂನು ಸಮರ ಜಯಿಸಿದ ಖುಷಿಯಲ್ಲೇ ತನ್ನ 'ರಾಜಕೀಯ ಗುರು' ಎಂಜಿ ರಾಮಚಂದ್ರನ್ ಅವರನ್ನು ಸ್ಮರಿಸಿದ್ದಾರೆ.
ಕರ್ನಾಟಕ ಹೈಕೋರ್ಟಿನಿಂದ ತೀರ್ಪು ಹೊರ ಬಿದ್ದ ನಂತರ ಇದೇ ಮೊದಲ ಬಾರಿಗೆ ಚೆನ್ನೈನ ಪೊಯಿಸ್ ಗಾರ್ಡನ್ ನ ತಮ್ಮ ನಿವಾಸದಿಂದ ಹೊರ ಬಂದು ಅಭಿಮಾನಿಗಳನ್ನು ಉದ್ದೇಶಿಸಿ ಜಯಲಲಿತಾ ಮಾತನಾಡಿದ್ದಾರೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
ನೆಚ್ಚಿನ 'ಅಮ್ಮ'ನನ್ನು ಕಂಡ ಅಭಿಮಾನಿಗಳು ಆನಂದ ಭಾಷ್ಪ ಸುರಿಸುತ್ತಾ ಸಂಭ್ರಮಾಚರಣೆಯನ್ನು ಮುಂದುವರೆಸಿದ್ದಾರೆ. ತೀರ್ಪಿನ ಬಗ್ಗೆ ಜಯಲಲಿತಾ ಹೇಳಿದ್ದೇನು? ಮುಂದೆ ಓದಿ...[ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ]

* ಇದು ನ್ಯಾಯಕ್ಕೆ ಸಂದ ಜಯ, ನನ್ನ ಮೇಲೆ ಕುತಂತ್ರ ಮಾಡಿ ನನ್ನ ಹಾಗೂ ನನ್ನ ಗುರು ಎಂಜಿ ರಾಮಚಂದ್ರನ್ ಅವರ ಹೆಸರು ಕೆಡಿಸಲು ಮಾಡಲು ಮಾಡಿದ ಹುನ್ನಾರ ವಿಫಲವಾಗಿದೆ.
* ಹೈಕೋರ್ಟ್ ತೀರ್ಪಿನಿಂದ ಸಂತಸವಾಗಿದೆ. ಚಿನ್ನದ ಪರಿಶುದ್ಧತೆ ಪರೀಕ್ಷೆಗೆ ಅಗ್ನಿಪರೀಕ್ಷೆ ಅಗತ್ಯವಿತ್ತು.
* ಈ ಗೆಲುವು ಕೇವಲ ತಾತ್ಕಾಲಿಕ. ಪ್ರಾಮಾಣಿಕತೆಗೆ ಅಂತಿಮ ಗೆಲವು ಸಿಕ್ಕಿಯೇ ಸಿಗುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
* ನನ್ನ ವಿರುದ್ಧ ಡಿಎಂಕೆ ವ್ಯವಸ್ಥಿತವಾಗಿ ಈ ರೀತಿಯ ಪಿತೂರಿಯ ಚದುರಂಗದ ಆಟವನ್ನು ಆಡುತ್ತಿತ್ತು. ಆದರೆ ಈಗ ಸಿಕ್ಕಿದ ನ್ಯಾಯದಿಂದ ಅವರು ನಿಷ್ಕ್ರಿಯರಾಗಿದ್ದಾರೆ. [ಜಯಲಲಿತಾಗೆ ಮುಕ್ತಿ, 'ಅಮ್ಮ ದಿನಾಚರಣೆ' ಆರಂಭ]
* ಈ ಹಿಂದಿನ ತೀರ್ಪು ಕೇಳಿ 233 ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಿನ್ನೆ 5 ಜನ ಮೃತಪಟ್ಟಿದ್ದಾರೆ. ಇವರಿಗೆಲ್ಲ ನನ್ನ ಹೃದಯ ಮಿಡಿಯುತ್ತದೆ. ಯಾರೆಲ್ಲ ತಾಳ್ಮೆಯಿಂದ ಕುಳಿತಿದ್ದರೋ ಅವರು ತಮಿಳುನಾಡಿನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾರೆ
* ತಮಿಳುನಾಡು ಜನತೆಯನ್ನು ನಂಬುತ್ತೇನೆ. ಅವರು ಎಲ್ಲವನ್ನು ಪಡೆದುಕೊಳ್ಳಬೇಕು. ನಾನು ತಮಿಳುನಾಡು ಜನರಿಗಾಗಿ ಶ್ರಮಪಟ್ಟು ಕೆಲಸ ಮಾಡುತ್ತೇನೆ. [ಟ್ವೀಟೋತ್ತರ : ಈ ದೇಶವನ್ನು ಆ ದೇವರೇ ಕಾಪಾಡಬೇಕು]
(ಒನ್ ಇಂಡಿಯಾ ಸುದ್ದಿ)












Click it and Unblock the Notifications