ಚೆನ್ನೈಗೆ ಹುಟ್ಟುಹಬ್ಬ, #madrasday ಟ್ರೆಂಡಿಂಗ್

Posted By:
Subscribe to Oneindia Kannada

ತಮಿಳುನಾಡಿನ ರಾಜಧಾನಿ ಚೆನ್ನೈಗೆ ಇಂದು(ಆಗಸ್ಟ್ 22) 377ನೇ ಹುಟ್ಟುಹಬ್ಬದ ಸಂಭ್ರಮ. 17ನೇ ಶತಮಾನದಲ್ಲಿ ಬ್ರಿಟಿಷರು ಭಾರತದಲ್ಲಿ ಸ್ಥಾಪಿಸಿದ ಪ್ರಮುಖ ಬಂದರು ನಗರಗಳಲ್ಲಿ ಈಗಿನ ಚೆನ್ನೈ ಆಗಿನ ಮದ್ರಾಸ್ ಕೂಡಾ ಒಂದು.

ಆಗಸ್ಟ್ 22, 1639ರಂದು ಸ್ಥಳೀಯ ನಾಯಕ ಜನಾಂಗಕ್ಕೆ ಸೇರಿದ್ದ ಭೂಮಿಯನ್ನು ಖರೀದಿಸಿದ ಅಂದಿನ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಡೆ, ಸೇಂಟ್ ಜಾರ್ಜ್ ಕೋಟೆ ಕಟ್ಟಿದ. ಮದ್ರಾಸ್ ಎಂದು ಪುನರ್ ನಾಮಕರಣ ಮಾಡಿದ.[ಚೆನ್ನೈ ಬಾಲಕನಿಗೆ ಗೂಗಲ್ ನಿಂದ ಪ್ರತಿಷ್ಠಿತ ಪ್ರಶಸ್ತಿ]

ಇಂದಿಗೂ ಈ ಕಟ್ಟಡ ತಮಿಳುನಾಡು ಸರ್ಕಾರದ ಆಡಳಿತ ಕಚೇರಿಯಾಗೇ ಉಳಿದಿರುವುದು ವಿಶೇಷ. ಸಣ್ಣ ಪುಟ್ಟ ಗ್ರಾಮೀಣ ಭಾಗಗಳನ್ನು ಹೊಂದಿಕೊಂಡಿದ್ದ ಮದ್ರಾಸ್ ನಂತರ ದೇಶದ ವಿವಿಧ ಭಾಗದ ಜನರಿಗೆ ಆಶ್ರಯ ತಾಣವಾಗಿದೆ. ಭಾರತದ ಪ್ರಮುಖ ಮೆಟ್ರೋ ಸಿಟಿಗೆ ಇತ್ತೀಚೆಗೆ ಮೆಟ್ರೋ ರೈಲು ಸಂಪರ್ಕ ಕೂಡಾ ಸಿಕ್ಕಿದೆ.[ಬಾಂಬೆ, ಮದ್ರಾಸ್ ಹೈಕೋರ್ಟ್‌ಗಳಿಗೆ ಮರುನಾಮಕರಣ]

ಚೆನ್ನಪ್ಪನಾಯಕನ್ ಎಂದು ನಾಯಕ ಜನಾಂಗದ ಮುಖಂಡನ ಹೆಸರು ಪಡೆದಿದ್ದ ನಗರ ನಂತರ ಚೆನ್ನಪ್ಪಪಟ್ಟಿನಂ ಆಗಿ ಮದ್ರಾಸ್, ಚೆನ್ನೈ ಆಗಿ ಮಾರ್ಪಟ್ಟಿದೆ.[ತಮಿಳುನಾಡಲ್ಲಿ 'ಅಮ್ಮ' ವೀಕೆಂಡ್ ಬಜಾರ್]

ಬ್ರಿಟಿಷ್ ಸಾಮ್ರಾಜ್ಯ ಸ್ಥಾಪಿಸಿದ ರಾಬರ್ಟ್ ಕ್ಲೈವ್ ಮದುವೆ ಕೂಡಾ ಫೋರ್ಟ್ ಸೆಂಟ್ ಜಾರ್ಜ್ ನಲ್ಲಿ ಆಗಿದ್ದು ವಿಶೇಷ. 1997ರಲ್ಲಿ ಕರುಣಾನಿಧಿ ಸರ್ಕಾರ ಚೆನ್ನೈ ಎಂದು ನಾಮಕರಣ ಮಾಡಿತ್ತು.

ಚೆನ್ನೈ ಸೆಂಟ್ರಲ್ ರೈಲ್ವೆ ಟರ್ಮಿನಸ್

ಚೆನ್ನೈ ಸೆಂಟ್ರಲ್ ರೈಲ್ವೆ ಟರ್ಮಿನಸ್

ಮದ್ರಾಸ್ ಗೆ ಮೊದಲು ಕಾಲಿರಿಸಿದ ಪೋರ್ಚುಗೀಸರು ಕಟ್ಟಿದ ಸೇಂಟ್ ಥಾಮಸ್ ಮೌಂಟ್ ಚರ್ಚ್ ಸೇರಿದಂತೆ ಹತ್ತು ಹಲವು ಪುರಾತನ ಕಟ್ಟಡಗಳ ರಕ್ಷಣೆಗಾಗಿ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿದೆ.

ಉದ್ಯಮ, ಕಲೆ, ಸಾಹಿತ್ಯ, ಸಂಸ್ಕೃತಿಯ ಕೇಂದ್ರ

ಉದ್ಯಮ, ಕಲೆ, ಸಾಹಿತ್ಯ, ಸಂಸ್ಕೃತಿಯ ಕೇಂದ್ರ

ಸಂಗೀತ, ಸಾಹಿತ್ಯ, ಸಿನಿಮಾ, ಲಲಿತಕಲೆ, ಜವಳಿ, ಆರೋಗ್ಯ, ಆಟೋಮೊಬೈಲ್ ಅಲ್ಲದೆ, ಐಟಿ ಉದ್ಯಮಕ್ಕೂ ಚೆನ್ನೈ ಪ್ರಮುಖ ಕೇಂದ್ರವಾಗಿದೆ.

ಕುಡಿಯುವ ನೀರಿನ ಸಮಸ್ಯೆ

ಕುಡಿಯುವ ನೀರಿನ ಸಮಸ್ಯೆ

ಶತಮಾನಗಳು ಕಳೆದರೂ ಸಾರಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ಈ ಪ್ರಾಚೀನ ನಗರವನ್ನು ಕಾಡುತ್ತಲೇ ಇದೆ. ಆದರೂ ಎರಡನೇ ಸ್ವಚ್ಛನಗರ ಎಂಬ ಹೆಗ್ಗಳಿಕೆ ಗಳಿಸಿದೆ. ಆದರೆ, ಇತ್ತೀಚೆಗೆ ಮಳೆ ಪ್ರವಾಹ, ಸುನಾಮಿ ಭೀತಿ ಎದುರಿಸಿ ಕೂಡಾ ಗಟ್ಟಿಯಾಗಿ ನಿಂತಿದೆ.

ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರ

ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರ ಹರಿದು ಬರುತ್ತಿದೆ

ಚೆನ್ನೈ (ಮದ್ರಾಸ್) ಅಂದು ಇಂದು ಚಿತ್ರಗಳು

ಚೆನ್ನೈ (ಮದ್ರಾಸ್) ಅಂದು ಇಂದು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ

ಇಂದು ಮದ್ರಾಸ್ ಡೇಯಾದರೆ ಚೆನ್ನೈ ಡೇ ಎಂದು?

ಇಂದು ಮದ್ರಾಸ್ ಡೇಯಾದರೆ ಚೆನ್ನೈ ಡೇ ಯಾವತ್ತು? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chennai celebrates 377th founding day today (August 22). The Madras city the which came into being on August 22, 1639 after British East India Company administrator Francis Day struck a deal with local Nayak and got hold of St. George Fort.
Please Wait while comments are loading...