ಜಯಾ 'ಅಮ್ಮ' ಬಲದಿಂದ ಚುನಾವಣೆ ಗೆಲ್ಲುವೆ: ದೀಪಾ

Posted By:
Subscribe to Oneindia Kannada

ಚೆನ್ನೈ, ಅಕ್ಟೋಬರ್ 20: ತಮಿಳರ ಪಾಲಿನ 'ಅಮ್ಮ' ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅವರು 'ಎಂಜಿಆರ್ ಅಮ್ಮ ದೀಪಾ ಪೆರವೈ' ಎಂಬ ಪಕ್ಷ ಸ್ಥಾಪಿಸಿದ್ದು ನೆನಪಿರಬಹುದು. ಈಗ ಜಯಾ ನಾಮಬಲದಿಂದ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಆರ್‌.ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ತಿರುಚ್ಚಿಯಲ್ಲಿ ಗುರುವಾರದಂದು ದೀಪಾ ಅವರು ಹೇಳಿದ್ದಾರೆ. ಡಿಸೆಂಬರ್‌ 31ಕ್ಕು ಮುನ್ನ ಆರ್ ಕೆ ನಗರ ಕ್ಷೇತ್ರಕ್ಕೆ ಉಪಚುನಾವಣೆಗೆ ನಡೆಸುವ ಸಾಧ್ಯತೆಯಿದೆ.

Chennai: Jayalalithaa's niece Deepa to contest RK Nagar Bypoll

'ಎಂಜಿಆರ್ ಅಮ್ಮಾ ದೀಪಾ ಪೆರವೈ ಪಕ್ಷದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಆಯ್ಕೆಯಾದರೆ ಜಯಲಲಿತಾ ಅವರು ಆರಂಭಿಸಿದ್ದ ಕಲ್ಯಾಣ ಯೋಜನೆಗಳನ್ನು ಮುಂದುವರಿಸುತ್ತೇನೆ' ಎಂದು ದೀಪಾ ಹೇಳಿದರು.

ಮುಖ್ಯಮಂತ್ರಿ ಎಡಪಳ್ಳಿ ಪಳನಿಸ್ವಾಮಿ ಬಣ ಬೆಂಬಲ ನೀಡಿಲ್ಲ. ಜಯಾ ಅವರು ಆರಂಭಿಸಿದ ಜನಪ್ರಿಯ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂದರು.

ಎಐಎಡಿಎಂಕೆಯ ಎರಡೆಲೆ ಚಿಹ್ನೆಗಾಗಿ ಇಪಿಎಸ್ ಹಾಗೂ ಒಪಿಎಸ್ ಬಣಗಳ ಕದನ ನಡೆಯುತ್ತಿರುವಾಗಲೇ, ಈ ಚಿನ್ಹೆಯನ್ನು ನಮ್ಮ ಪಕ್ಷಕ್ಕೆ ನೀಡಿ ಎಂದು ದೀಪಾ ಅವರು ಚುನಾವಣಾ ಆಯೋಗದ ಮೊರೆ ಹೊಕ್ಕಿರುವ ಸುದ್ದಿಯೂ ಬಂದಿದೆ.

ಡಿಸೆಂಬರ್ 05, 2016ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ರಾಧಾಕೃಷ್ಣನಗರ(ಆರ್ ಕೆ ನಗರ) ವಿಧಾನಸಭಾ ಕ್ಷೇತ್ರವನ್ನು ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chennai : "I will contest the RK Nagar by-election again and will win and will work for the people in place of the late leader J Jayalalithaa", said MGR Amma Deepa Peravai general secretary J Deepa here on Thursday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ