ಕುಡಿದ ಮತ್ತಲ್ಲಿ ಗಗನಸಖಿಯರ ಫೋಟೋ ತೆಗೆಯಲು ಮುಂದಾದ್ರು..
ಚೆನ್ನೈ, ನವೆಂಬರ್. 20: ಗಗನಸಖಿಯರೊಂದಿಗೆ ಅಸಭ್ಯ ವರ್ತನೆ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಮಹಾಸಭಾ ಮುಖಂಡ ಹಾಗೂ ಇಬ್ಬರು ವಕೀಲರನ್ನು ಬಂಧಿಸಲಾಗಿದೆ.
ಚೆನ್ನೈನಿಂದ ಕೊಯಂಬತ್ತೂರಿಗೆ ಹೊರಟಿದ್ದ ವಿಮಾನದಲ್ಲಿ ಪ್ರಕರಣ ನಡೆದಿದೆ. ತಮಿಳುನಾಡಿನ ಹಿಂದೂ ಮಹಾಸಭಾ ಉಪಾಧ್ಯಕ್ಷ ಸುಭಾಷ್ ಸ್ವಾಮಿನಾಥನ್ ಹಾಗೂ ಸೆಂಥಿಲ್ ಕುಮಾರ್, ರಾಜಾ ಎಂಬುವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.[ಪತ್ರಕರ್ತೆ ಮೇಲೆ ವೀರ್ಯ ಚೆಲ್ಲಿದ ಕಿಡಿಗೇಡಿಗಳು]

ಗುರುವಾರ ರಾತ್ರಿ 10.30ಕ್ಕೆ ವಿಮಾನ ಹೊರಡುವುದರಲ್ಲಿತ್ತು. ಪಾನಮತ್ತರಾಗಿ ಆಸೀನರಾಗಿದ್ದ ಆರೋಪಿಗಳು ಗಗನಸಖಿಯರ ಫೋಟೋ ತೆಗೆಯಲು ಯತ್ನ ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಸಿಬ್ಬಂದಿ ಮತ್ತು ಸಹಪ್ರಯಾಣಿಕರ ಮೇಲೆ ಸುಭಾಷ್ ಸ್ವಾಮಿನಾಥನ್ ಮತ್ತು ಇತರರು ಹಲ್ಲೆಗೆ ಮುಂದಾಗಿದ್ದಾರೆ. [ಕಾಮುಕರ ಪುರುಷತ್ವ ಹರಣ ಮಾಡಿ]
ಮಧ್ಯಪ್ರವೇಶಿಸಿದ ಆಸ್ಪತ್ರೆ ಸಿಬ್ಬಂದಿ ಪಾನಮತ್ತರಾಗಿದ್ದವರನ್ನು ಬಂಧಿಸಿ ಪೊಲೀಶರ ವಶಕ್ಕೆ ನೀಡಿದ್ದಾರೆ.ಆರೋಪಿಗಳ ಮೇಲೆ ದೌರ್ಜನ್ಯ ಮತ್ತು ಅಸಭ್ಯ ನಡವಳಿಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು 14 ದಿನ ನ್ಯಾಯಾಂಗ ಬಂರಧನಕ್ಕೆ ನೀಡಲಾಗಿದೆ.












Click it and Unblock the Notifications