ಚೆನ್ನೈ : ವಿವಾದಕ್ಕೆ ಸಿಲುಕಿದ ಮೋದಿ ವೈಮಾನಿಕ ವೀಕ್ಷಣೆ ಚಿತ್ರ
ನವದೆಹಲಿ, ಡಿ.04: ತಮಿಳುನಾಡಿನಲ್ಲಿ ಜನಜೀವನಕ್ಕೆ ಮಾರಕವಾಗಿರುವ ಭಾರಿ ಮಳೆ, ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಲು ಪ್ರಧಾನಿ ಮೋದಿ ಅವರು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದು ಎಲ್ಲರಿಗೂ ತಿಳಿದಿರುತ್ತದೆ. ಆದರೆ, ಸಮೀಕ್ಷೆ ಬಗ್ಗೆ ಚಿತ್ರಗಳನ್ನು ಪ್ರಕಟಿಸುವಾಗ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪಿಐಬಿ) ಮಾಡಿದ ಪ್ರಮಾದ ನಗೆಪಾಟಲಿಗೀಡಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಪ್ರಮುಖವಾಗಿ ಬಿಂಬಿಸುವ ಸರ್ಕಾರದ ಪ್ರಯತ್ನಗಳು ಎಡವಟ್ಟಾದರೆ ಸಂತೆ ಯಲ್ಲಿ ನಿಂತು ಬೆತ್ತಲಾದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದಕ್ಕೆ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಮೋದಿ ಹಾಗೂ ಪಿಐಬಿ ವಿರುದ್ಧ ಬಂದ ಪ್ರತಿಕ್ರಿಯೆಗಳೇ ಸಾಕ್ಷಿ.[ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ: ಹೆಚ್ಚುವರಿ ಸಾವಿರ ಕೋಟಿ]
ಚೆನ್ನೈಗೆ ತುರ್ತು ಪ್ರವಾದ ಕೈಗೊಂಡ ಮೋದಿ ಅವರು ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದರು. ಮೋದಿ ಅವರು ವಿಶೇಷ ವಿಮಾನದಲ್ಲಿ ಕುಳಿತು ಕಿಟಕಿಯಿಂದ ಪ್ರವಾಹ ಪರಿಸ್ಥಿತಿ ವೀಕ್ಷಿಸುವ ಚಿತ್ರವೊಂದನ್ನು ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೊ(ಪಿಐಬಿ) ಸಂಜೆ ಐದು ಗಂಟೆಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿತ್ತು.

ಪಿಐಬಿಯಿಂದ ಒಂದೇ ಚಿತ್ರ ಎರಡು ಬಾರಿ ಪೋಸ್ಟ್
ಪ್ರಧಾನಿ ವಿಮಾನದ ಕಿಟಕಿಯಿಂದ ಹೊರಕ್ಕೆ ನೋಡುತ್ತಿರುವ ಈ ಚಿತ್ರದಲ್ಲಿ ಹೊರಗಡೆ ಮೋಡಗಳು ಮುಸುಕಿದ್ದರಿಂದ ನೋಡುವಂಥ ಪರಿಸ್ಥಿತಿ ಇರಲಿಲ್ಲ. ಎರಡು ಗಂಟೆಗಳ ಬಳಿಕ ಬ್ಯೂರೋ ಅದೇ ಚಿತ್ರವನ್ನು ಮತ್ತೊಮ್ಮೆ ಪೋಸ್ಟ್ ಮಾಡಿತ್ತು.
ಈ ಬಾರಿ ಚಿತ್ರ ಅತ್ಯಂತ ಸ್ಪಷ್ಟವಾಗಿದ್ದು ನೆರೆನೀರು ನಿಂತಿದ್ದು ಚೆನ್ನಾಗಿ ಕಾಣಿಸುತ್ತಿತ್ತು. ಕಂಪ್ಯೂಟರ್‌ನ ಫೋಟೊಶಾಪ್‌ನಲ್ಲಿ ಈ ಚಿತ್ರ ರೂಪಿಸಿದ್ದು ಎಂಬುದು ತಕ್ಷಣಕ್ಕೆ ತಿಳಿದುಕೊಂಡ ಸಾರ್ವಜನಿಕರು ಕೆಲ ಪತ್ರಿಕೆ ಸಂಪಾದಕರು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡರು.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ
ಫೋಟೊಶಾಪ್ ಕೈಚಳಕವಿದ್ದ ಚಿತ್ರವನ್ನು ಶೀಘ್ರವೇ ಅಳಿಸಿ ಹಾಕಿ ಮತ್ತೊಂದು ಚಿತ್ರ ಹಾಕುವಷ್ಟರಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ, ಗೇಲಿಗಳು ವ್ಯಕ್ತವಾಗಿತ್ತು. ಆಫ್ ಕೋರ್ಸ್ ಪಿಐಬಿ ಜೊತೆಗೆ ಮೋದಿ ಅವರ ಮೇಲೂ ಜನತೆ ಕಿಡಿಕಾರಿದ್ದರು.
|
ಕಾಶ್ಮೀರದ ನಾಯಕ ಒಮರ್ ಅಬ್ದುಲ್ಲಾರಿಂದ ಟೀಕೆ
ಕಾಶ್ಮೀರದ ನಾಯಕ ಒಮರ್ ಅಬ್ದುಲ್ಲಾರಿಂದ ಟೀಕೆ, ಮೋದಿ ಅವರು ಚೆನ್ನೈಗೆ ಬರಲೇ ಇಲ್ವವೇ
|
ಗುಜರಾತ್ ಮಾಡೆಲ್ ನಂತೆ ಫೋಟೋಶಾಪ್
ಗುಜರಾತ್ ಮಾಡೆಲ್ ನಂತೆ ಫೋಟೋಶಾಪ್ ಮಾಡಿದಂತೆ, ಪಿಐಬಿ ಫೋಟೋ ಶಾಪ್ ಪಿಕ್ಚರ್ಸ್ ಹಾಕುವುದು ಸರಿಯೇ
|
ವೇರಿ ಸಿಲ್ಲಿ ಎಂದ ಟ್ವೀಟ್
ಇದು ವೇರಿ ಸಿಲ್ಲಿ ಎಂದ ಟ್ವೀಟ್












Click it and Unblock the Notifications