ತಮಿಳುನಾಡು: ಸಿನಿಮೀಯ ರೀತಿಯಲ್ಲಿ 67 ಭೂಗತ ಪಾತಕಿಗಳ ಸೆರೆ

ಚೆನ್ನೈ, ಫೆಬ್ರವರಿ 08: ಡಾನ್ ಒಬ್ಬನ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿರುತ್ತದೆ, ನಂಗಾ ನಾಚ್, ಹೆಂಡಗಳ ಹೊಳೆ ಹರಿಯುತ್ತಿರುತ್ತದೆ ಆಗ ಕೂಡಲೇ ದೊಡ್ಡ ಪೊಲೀಸರ ಪಡೆಯೊಂದು ಬಂದು ಅಲ್ಲಿದ್ದ ಎಲ್ಲರನ್ನೂ ಬಂಧಿಸಿ ಕರೆದೊಯ್ಯುತ್ತಾರೆ. ಇದಾವುದೊ ಸಿನಿಮಾ ಕತೆಯಲ್ಲ, ತಮಿಳುನಾಡಿನಲ್ಲಿ ನಿಜವಾಗಿಯೂ ನಡೆದಿರುವ ಘಟನೆ.

ಚುಲೈಮೇಡು ಬಿನ್ನು ಹೆಸರಿನ ಭೂಗತ ಪಾತಕಿಗಳ ನಾಯಕ ತನ್ನ ಹುಟ್ಟುಹಬ್ಬವನ್ನು ಚೆನ್ನೈ ಸಮೀಪದ ಮಾಲಿಯಾಂಬಿಕಾ ಗ್ರಾಮದಲ್ಲಿ ಆಯೋಜಿಸಿದ್ದ. ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹಲವು ಕುಖ್ಯಾತ ಪಾತಕಿಗಳು, ಪಾತಕಿ ನಾಯಕನ ಸಹವರ್ತಿಗಳು ಆಗಮಿಸಿದ್ದರು. ಇದರ ಸುಳಿವು ಪಡೆದ ಚೆನ್ನೈ ಪೊಲೀಸರು ದೊಡ್ಡ ದಂಡು ಕರೆದುಕೊಂಡು ಹೋಗಿ 67 ಕುಖ್ಯಾತ ಪಾತಕಿಗಳನ್ನು ಬಂಧಿಸಿದ್ದಾರೆ.

ಬಳ್ಳಿಯೇ ಬಂದು ಕಾಲಿಗೆ ಸಿಕ್ಕಂತೆ, ಹಲವಾರು ವರ್ಷಗಳಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ, ವಿವಿಧ ಕೇಸುಗಳಲ್ಲಿ ಬೇಕಾಗಿದ್ದ ಪಾತಕಿಗಳೆಲ್ಲಾ ಒಂದೇ ಸೂರಿನಡಿ ಪೊಲೀಸರ ಕೈಗೆ ದೊರಕಿದ್ದಾರೆ. ಅವರು ದೊರೆತದ್ದು ಕೂಡಾ ಕುತೂಹಲಕಾರಿಯಾಗಿದೆ.

Chennai cops arrest 67 gangsters in cinematic style

ಚೆನ್ನೈನಲ್ಲಿ ಪೊಲೀಸರು ಮಾಮೂಲಿನಂತೆ ವಾಹನ ತಪಾಸಣೆ ಮಾಡಬೇಕಾದರೆ ಭೂಗತ ಪಾತಕಿಗಳ ನಾಯಕ ಚುಲೈಮೇಡು ಬಿನ್ನುವಿನ ಕಾರು ಹಿಡಿದಿದ್ದಾರೆ. ಕಾರಿನಲ್ಲಿದ್ದವ ಕಾರು ಮಾಲಿಯಾಂಬಿಕಾ ಗ್ರಾಮಕ್ಕೆ ಹೊರಟಿರುವುದಾಗಿ ಹೇಳಿದ್ದಾನೆ. ಕೂಡಲೇ ಜಾಗರೂಕರಾದ ಚೆನ್ನೈ ಪೊಲೀಸರು ದಾಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಪಾರ್ಟಿ ನಡೆಯುತಿದ್ದ ಸ್ಥಳ ತಲುಪಿದಾಗ ಚುಲೈಮೇಡು ಬಿನ್ನು ತನ್ನ ರೌಡಿ ವೃತ್ತಿಗೆ ಅನುಗುಣವಾಗಿ ಕತ್ತಿಯಿಂದ ಹುಟ್ಟುಹಬ್ಬದ ಕೇಕ್‌ ಕತ್ತಿರಿಸುತ್ತಿರುವುದು ಕಂಡಿದೆ. ಕೂಡಲೇ ಪೊಲೀಸರು ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. 67 ಪ್ರಮುಖ ಪಾತಕಿಗಳನ್ನು ಬಂಧಿಸಿದ್ದಾರೆ. ಆದರೆ ಅವರ ನಾಯಕ ಚುಲೈಮೇಡು ಬಿನ್ನು ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.

ದಾಳಿ ವೇಳೆ 50 ಕ್ಕೂ ಹೆಚ್ಚು ಬೈಕ್‌ಗಳು, ನಾಲ್ಕು ಕಾರುಗಳು, ಹಲವು ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+