ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲ್ಲಾಚಿ ಲೈಂಗಿಕ ಕಿರುಕುಳ ಕೇಸ್, ಸಿಬಿಐನಿಂದ ತನಿಖೆ ಆರಂಭ

|
Google Oneindia Kannada News

ಚೆನ್ನೈ, ಏಪ್ರಿಲ್ 28: ತಮಿಳುನಾಡು ಬೆಚ್ಚುವಂತೆ ಮಾಡಿರುವ ಪೊಲ್ಲಾಚಿಯ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡು, ಎರಡು ಎಫ್ಐಆರ್ ಹಾಕಲಾಗಿದೆ.

ಈ ಪ್ರಕರಣದ ತನಿಖೆ ಹಾದಿ ತಪ್ಪುತ್ತಿದೆ. ಪ್ರಮುಖ ಆರೋಪಿ ಎ ನಾಗರಾಜ್ ಅವರ ಹೆಸರನ್ನು ಆರೋಪಿಗಳ ಪಟ್ಟಿಯಿಂದ ಎಐಎಡಿಎಂಕೆ ಕೈಬಿಟ್ಟಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ತನಿಖೆ ಪ್ರಗತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ನಟ ಕಮಲ್ ಹಾಸನ್ ಸೇರಿದಂತೆ ಹಲವರು ಕಿಡಿಕಾರಿದ್ದರು. ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಈಗ ಸಿಬಿಐಗೆ ವರ್ಗವಾಗಿದೆ.

ಲೈಂಗಿಕ ಹಗರಣದ ಸುನಾಮಿಗೆ ಸಿಕ್ಕ ಪೊಲ್ಲಾಚಿ ಈಗ ಮೊದಲಿನಂತಿಲ್ಲ! ಲೈಂಗಿಕ ಹಗರಣದ ಸುನಾಮಿಗೆ ಸಿಕ್ಕ ಪೊಲ್ಲಾಚಿ ಈಗ ಮೊದಲಿನಂತಿಲ್ಲ!

ಲೈಂಗಿಕ ಕಿರುಕುಳ, ಬೆದರಿಕೆ, ಕಿಡ್ನಾಪ್ ಕೇಸ್ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ಬಂದ ವರದಿ ಆಧಾರದ ಮೇಲೆ ಎಚ್ಚೆತ್ತುಕೊಂಡ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿರಾಜನ್, ತಿರುನಾವುಕ್ಕರಸು, ಸತೀಶ್ ಹಾಗೂ ವಸಂತ್ ಕುಮಾರ್ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಾಲ್ವರು ಇತರರ ಜತೆ ಸೇರಿ ಇಂಥದ್ದೇ ದೊಡ್ಡ ದಂಧೆ ನಡೆಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿ, ತನಿಖೆ ಕೈಗೊಂಡ ಪೊಲೀಸರು, ಐಪಿಸಿ ಸೆಕ್ಷನ್ 354ಎ, 394, ಐಟಿ ಕಾಯ್ದೆ 66ಇ, ತಮಿಳುನಾಡಿನ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ತಡೆ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲಿ ಎಫ್ಐಆರ್ ಹಾಕಿದ್ದಾರೆ.

CBI takes over probe into Pollachi sexual harassment case

ಪೊಲ್ಲಾಚಿ ಲೈಂಗಿಕ ಕಿರುಕುಳ ಕೇಸ್: ಎಐಎಡಿಎಂಕೆ ವಿರುದ್ಧ ತಿರುಗಿಬಿದ್ದ ಕಮಲ್ ಪೊಲ್ಲಾಚಿ ಲೈಂಗಿಕ ಕಿರುಕುಳ ಕೇಸ್: ಎಐಎಡಿಎಂಕೆ ವಿರುದ್ಧ ತಿರುಗಿಬಿದ್ದ ಕಮಲ್

ತಮಿಳುನಾಡಿನ ಕೊಯಮತ್ತೂರಿನಿಂದ ದಕ್ಷಿಣಕ್ಕೆ ನಲವತ್ತೈದು ಕಿ.ಮೀ. ದೂರದಲ್ಲಿದೆ ಪೊಲ್ಲಾಚಿಯಲ್ಲಿ ಫೆಬ್ರವರಿ 26ರಂದು ನಾಲ್ಕು ಮಂದಿಯ ಗುಂಪೊಂದು 19 ವರ್ಷ ವಯಸ್ಸಿನ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಪೊಲ್ಲಾಚಿಯ ಈ ಕಾಮುಕರನ್ನು ಬಂಧಿಸಿದ ಮೇಲೆ ವಿಚಾರಣೆ ವೇಳೆ ಈ ಗ್ಯಾಂಗ್ ನಿಂದ 50ಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಸುಮಾರು ಏಳು ವರ್ಷಗಳ ಕಾಲ ಈ ರೀತಿ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ, ಸಂತ್ರಸ್ತರನ್ನು ಪೀಡಿಸಿ, ಬೆದರಿಸಿ, ಹಣ ಗಳಿಸುತ್ತಿದ್ದರು ಎಂದು ತಿಳಿದು ಬಂದಿದೆ.

English summary
The Central Bureau of Investigation (CBI) on Saturday took over Pollachi sexual harassment case and also two registered two FIRs in connection with the probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X