ಈ ಅಭ್ಯರ್ಥಿ ಆಸ್ತಿ 2ಜಿ ಹಗರಣದ ಮೊತ್ತ ಮೀರುತ್ತೆ

ಚೆನ್ನೈ, ಏಪ್ರಿಲ್ 04: ತಮಿಳುನಾಡಿನ ಪೆರಂಬೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೇಬಮಣಿ ಜನತಾ ಪಾರ್ಟಿಯ ಅಭ್ಯರ್ಥಿ ಮೋಹನರಾಜ್ ಜೇಬಮಣಿ ಅವರ ಆಸ್ತಿ ಹಾಗೂ ಸಾಲದ ಮೊತ್ತ ನೋಡಿದ ಚುನಾವಣಾ ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋಹನ್ ರಾಜ್ ಸಲ್ಲಿಸಿರುವ ಅಫಿಡವಿಟ್ ನಂತೆ ಅವರ ಬಳಿ 1.76 ಲಕ್ಷ ಕೋಟಿ ರೂ. ನಗದು ಇದೆ(ಕಾಕತಾಳೀಯವೆಂಬರ್ 2ಜಿ ಹಗರಣದ ಮೊತ್ತ ಇಷ್ಟೇ ಇದೆ) ಹಾಗೂ 4 ಲಕ್ಷ ಕೋಟಿ ರೂ. ವಿಶ್ವ ಬ್ಯಾಂಕ್ ಸಾಲ ಬಾಕಿಯಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಅಫಿಡವಿಟ್ ನಲ್ಲಿ ಇರುವುದೆಲ್ಲವೂ ಖಚಿತ ಮಾಹಿತಿಯೆಂದಾದರೆ ಚುನಾವಣೆ ಎದುರಿಸುತ್ತಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗುತ್ತಾರೆ.

Cash Worth 2G Scam, World Bank Loan: Candidate Punks Election Commission

ಆದರೆ,ಮೋಹನ್ ರಾಜ್ ಬಳಿ ಒಟ್ಟು 1.67 ಲಕ್ಷ ಕೋಟಿ ರೂ. ನಗದು ಇದೆ. 4 ಲಕ್ಷ ಕೋಟಿ ವಿಶ್ವ ಬ್ಯಾಂಕ್ ಸಾಲ ಇದೆ ಎಂದು ಬರೆದಿದ್ದಾರೆ. ಈ ಸಂಖ್ಯೆ 2020ರಲ್ಲಿ ರಾಜ್ಯದ ಒಟ್ಟು ಸಾಲದ ಮೊತ್ತವನ್ನು ಸೂಚಿಸುತ್ತದೆ ಎನ್ನಲಾಗಿದೆ.

Cash Worth 2G Scam, World Bank Loan: Candidate Punks Election Commission

ತಪ್ಪು ಮಾಹಿತಿ ನಿಜ: 2009ರ ಲೋಕಸಭೆ ಸಂದರ್ಭದಲ್ಲಿ 1,977 ಕೋಟಿ ರು ಇದೆ ತೋರಿಸಿದ್ದೆ. ಈಗ 1.76 ಲಕ್ಷ ಕೋಟಿ ನಗದು ಇದೆ ಎಂದು ಬರೆದು ಚುನಾವಣಾ ಆಯೋಗಕ್ಕೆ ಮುಜುಗರ ಸೃಷ್ಟಿಸಲು ಬಯಸಿದ್ದೆ. ಫಾರ್ಮ್ 26 ಎಂಬುದು ನಿರುಪಯೋಗಿಯಾಗಿದ್ದು, ಅಫಿಡವಿಟ್ ಲೋಪಗಳನ್ನು ಸಿವಿಲ್ ವಿಚಾರವನ್ನಾಗಿಸಿದ ಕಾನೂನು ಕಾರ್ತಿ ಚಿದಂಬರಂ ಅವರನ್ನು ರಕ್ಷಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ.

Cash Worth 2G Scam, World Bank Loan: Candidate Punks Election Commission

2014ರಲ್ಲಿ ಕಾರ್ತಿ ಚಿದಂಬರಂ ಶಿವಗಂಗಾದಿಂದ ಸ್ಪರ್ಧಿಸಿದ್ದರು. ಅವರು ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಿದ್ದರು. ಏಪ್ರಿಲ್ 07ರಂದು ದೆಹಲಿಯ ಐಟಿ ಆಯುಕ್ತರು 147 ಪುಟಗಳ ವರದಿಯಲ್ಲಿ ನಾಮಪತ್ರ ತಿರಸ್ಕರಿಸಬೇಕು ಎನ್ನಲಾಗಿತ್ತು. ಆಗ ವಿರುದ್ಧುನಗರದಿಂದ ಸ್ಪರ್ಧಿಸಿದ್ದ ನಾನು ಆಯೋಗಕ್ಕೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಫಿಡವಿಟ್ ಗೆ ಬೆಲೆ ಇಲ್ಲ ಎಂಬುದನ್ನು ತೋರಿಸಲು ಹೀಗೆ ಮಾಡಿದ್ದೇನೆ ಎಂದಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+