ತ.ನಾಡಿನಲ್ಲಿ ವಾಹನ ಚಾಲನೆ ವೇಳೆ ಒರಿಜಿನಲ್ ಡಿಎಲ್ ಕಡ್ಡಾಯ
Recommended Video

ನೀವೇನಾದರೂ ತಮಿಳುನಾಡಿಗೆ ತೆರಳುತ್ತಿದ್ದೀರಾ, ಅಲ್ಲಿ ವಾಹನ ಚಾಲನೆ ಮಾಡ್ತೀರಾ ಅನ್ನೋದಾದರೆ ಈ ಸುದ್ದಿಯನ್ನು ಕಡ್ಡಾಯವಾಗಿ ಓದಲೇಬೇಕು. ಸೆಪ್ಟೆಂಬರ್ 5ರಿಂದ ತಮಿಳುನಾಡಿನಲ್ಲಿ ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಅನ್ನು ತೆಗೆದುಕೊಂಡು ಹೋಗುವುದು ಕಡ್ಡಾಯ ಮಾಡಲಾಗಿದೆ.
ಒಂದು ವೇಳೆ ಹಾಗಿಲ್ಲದಿದ್ದರೆ ಐನೂರು ರುಪಾಯಿ ದಂಡ ಅಥವಾ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಅದೃಷ್ಟ ಕೆಟ್ಟಿದ್ದರೆ ಎರಡೂ ಆಗಬಹುದು. ಮದ್ರಾಸ್ ಹೈ ಕೋರ್ಟ್ ನಿಂದ ತಮಿಳುನಾಡು ಲಾರಿ ಮಾಲೀಕರ ಸಂಘದ ಮನವಿ ತಿರಸ್ಕೃತವಾದ ನಂತರ ಈ ಆದೇಶ ಜಾರಿಗೆ ಬಂದಿದೆ.

ವಾಹನ ಚಾಲನೆ ವೇಳೆ ಸವಾರರು ಅಥವಾ ಚಾಲಕರು ಅಸಲಿ ಚಾಲನಾ ಪರವಾನಗಿ ಇಟ್ಟುಕೊಂಡಿರಬೇಕು ಎಂದು ತಮಿಳುನಾಡು ರಾಜ್ಯ ಸಂಚಾರ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ತಮಿಳುನಾಡು ಲಾರಿ ಮಾಲೀಕರ ಸಂಘ ಹಾಗೂ ಟ್ರಾಫಿಕ್ ರಾಮಸ್ವಾಮಿ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ಎಂ.ದೊರೈಸ್ವಾಮಿ ಅವರಿಗೆ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣನ್ ಮಾಹಿತಿ ನೀಡಿದ್ದು, ಸೆಪ್ಟೆಂಬರ್ ಐದರವರೆಗೆ ಅಧಿಸೂಚನೆ ಜಾರಿ ಮಾಡುವುದಿಲ್ಲ ಎಂದು ತಿಳಿಸಿದ್ದರು.












Click it and Unblock the Notifications