ತಮಿಳಿಗರ ಪಾಲಿಗೆ ಫೆಬ್ರವರಿ 28 ಶೋಕಾಚರಣೆಯ ದಿನ
ಚೆನ್ನೈ, ಫೆಬ್ರವರಿ 28 : ಅಪ್ಪಟ ತಮಿಳಿಗರಿಗೆ ಬುಧವಾರ, ಫೆಬ್ರವರಿ 28 ಕರಾಳ ದಿನ. ಮೂರು ಘಟನೆಗಳು ತಮಿಳುನಾಡಿಗರನ್ನು ಶೋಕಸಾಗರದಲ್ಲಿ ತಳ್ಳಿವೆ.
ನಾಲ್ಕು ದಿನಗಳ ಹಿಂದೆ ದುಬೈನಲ್ಲಿ ದುರಂತ ಸಾವಿಗೀಡಾದ ಬಾಲಿವುಡ್ ಅಪ್ಸರೆ ಶ್ರೀದೇವಿಯವರ ಅಂತಿಮ ಸಂಸ್ಕಾರವನ್ನು ಬುಧವಾರ ಮಧ್ಯಾಹ್ನ ಮುಂಬೈನಲ್ಲಿ ನೆರವೇರಿಸಲಾಗುತ್ತಿದೆ. ಇದು ಮುಂಬೈನಲ್ಲಿ ನಡೆಯುತ್ತಿದ್ದರೂ, ಶ್ರೀದೇವಿ ತಮಿಳುನಾಡಿನ ಮಗಳು, ಹುಟ್ಟಿದ್ದು ಶಿವಕಾಶಿಯಲ್ಲಿ.
ಶ್ರೀದೇವಿಯವರು ಕ್ರಮೇಣ ಹಿಂದಿ ಚಿತ್ರರಂಗದಲ್ಲಿಯೇ ಅವಕಾಶ ಗಿಟ್ಟಿಸಿ, ಅಲ್ಲಿಯೇ ಸೆಟ್ಲ್ ಆದರೂ ಆರಂಭದ ವರ್ಷಗಳಲ್ಲಿ ತಮಿಳಿನಲ್ಲಿ ಹಲವಾರು ಮನೋಜ್ಞ ಚಿತ್ರಗಳಲ್ಲಿ ನಟಿಸಿದ್ದರು. ಅವುಗಳಲ್ಲಿ ಮೂಡ್ರಂ ಪಿರೈ ಶ್ರೀದೇವಿಯವರು ಅಭಿನಯಿಸಿರುವ ಅದ್ಭುತವಾದ ಚಿತ್ರಗಳಲ್ಲೊಂದು. ಇದು ಸಹಜವಾಗಿ ತಮಿಳಿಗರ ಕಣ್ಣು ಮಂಜಾಗಿಸಿದೆ.

ಇದು ಸಾಲದೆಂಬಂತೆ, ಬುಧವಾರ ಬೆಳಿಗ್ಗೆ ಕಂಚಿ ಶಂಕರಾಚಾರ್ಯರಾದ ಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಶಿವೈಕ್ಯರಾಗಿರುವುದು. 83 ವರ್ಷದ ಶ್ರೀಗಳು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅವರು 69ನೇ ಜಗದ್ಗುರುಗಳಾಗಿ ಕಂಚಿ ಪೀಠವನ್ನು ಏರಿದ್ದರು.
ಲಕ್ಷಾಂತರ ಭಕ್ತರನ್ನು ದುಃಖದ ಮಡುವಿನಲ್ಲಿ ತಳ್ಳಿ ಕಂಚಿ ಕಾಮಕೋಟಿಯ ಜಗದ್ಗುರುಗಳು ಪರಂಧಾಮಗೈದಿದ್ದಾರೆ. ಅರ್ಧ ಶತಮಾನಕ್ಕೂ ಅವರು ಮಾನವಕುಲದ ಸೇವೆಗೈದಿದ್ದಾರೆ. ಅವರು ನಿರಂತರ ಸೇವೆ ಮತ್ತು ತಪೋಬಲದ ಮೂಲಕ ಸಹಸ್ರಾರು ಭಕ್ತರಿಗೆ ದಾರಿದೀಪವಾಗಿದ್ದರು. ಅವರನ್ನು ಕಳೆದುಕೊಂಡ ಭಕ್ತರು ಅನಾಥ ಭಾವ ಅನುಭವಿಸುತ್ತಿದ್ದಾರೆ.

ಇವೆರಡೂ ಶೋಕಾಚರಣೆಯಾದರೆ, ಪಂಚೆಯ ರಾಜಕಾರಣಿ ಎಂದೇ ಹೆಸರಾಗಿರುವ, ಮಾಜಿ ವಿತ್ತ ಸಚಿವ, ಅಪಾರ ಬುದ್ಧಿವಂತ ರಾಜಕಾರಣಿ ಪಿ ಚಿದಂರಬರಂ ಅವರ ಮಗ ಕಾರ್ತಿ ಚಿದಂಬರಂ ಅವರನ್ನು, ವಿದೇಶಿ ಹಣ ಗೋಲ್ ಮಾಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಚೆನ್ನೈನಲ್ಲಿ ಬಂಧಿಸಲಾಗಿದೆ.

ಯುನಿವರ್ಸಿಟಿ ಆಫ್ ಕೇಂಬ್ರಿಜ್ ನಲ್ಲಿ ಕಲಿತು ಅಪ್ಪನಂತೆಯೇ ಮಹಾಬುದ್ಧಿವಂತ ಅಂತ ಅನ್ನಿಸಿಕೊಂಡಿರುವ ಕಾರ್ತಿ ಚಿದಂಬರಂ, ಬುದ್ಧಿವಂತಿಕೆಯನ್ನು ವ್ಯಾಪಾರವೃದ್ಧಿಗಾಗಿ ಬಳಸಿಕೊಳ್ಳುವ ಬದಲು ಹಲವಾರು ಹಗರಣಗಳಲ್ಲಿ ಸಿಲುಕಿರುವುದು ದೊಡ್ಡು ದುರಂತ. ಕನಿಷ್ಠಪಕ್ಷ ಕಾಂಗ್ರೆಸ್ ಈ ಘಟನೆಯಿಂದಾಗಿ ತೀವ್ರ ಶೋಕಾಚರಣೆಯಲ್ಲಿ ಮುಳುಗಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications