ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ: ನಟ ಸಿದ್ದಾರ್ಥ್ ವಿರುದ್ಧ ಕೇಸ್

ಚೆನ್ನೈ, ಡಿಸೆಂಬರ್ 20: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣೀ(ಎನ್ ಆರ್ ಸಿ) ವಿರುದ್ಧ ತಮಿಳುನಾಡಿನಲ್ಲಿ ಪ್ರಮುಖವಾಗಿ ದನಿ ಎತ್ತಿರುವ ನಟ ಸಿದ್ದಾರ್ಥ್ ಸೇರಿದಂತೆ 600 ಮಂದಿ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣಾ ದಾಖಲಿಸಿಕೊಂಡಿದ್ದಾರೆ.

ಮೋದಿ ಸರ್ಕಾರ ವಿರುದ್ಧ ದನಿ ಎತ್ತಿ ಸರಣಿ ಟ್ವೀಟ್ ಮಾಡಿದ್ದರಿಂದ ನನಗೆ ಬೆದರಿಕೆ ಕರೆ, ದ್ವೇಷಪೂರಿತ ಪ್ರತಿಕ್ರಿಯೆಗಳು ಬರುತ್ತಿವೆ ಎಂದು ನಟ ಸಿದ್ಧಾರ್ಥ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಭಟನೆ ಸಾಂವಿಧಾನಿಕ ಹಕ್ಕು, ನಮ್ಮ ದೇಶದಲ್ಲಿ ನಮ್ಮ ಮನಸ್ಸಿನ ಮಾತುಗಳನ್ನು ಆಡಲು ಇಚ್ಛಿಸುತ್ತೇವೆ. ಭಿನ್ನಾಭಿಪ್ರಾಯದ ದನಿಯನ್ನು ಕಾನೂನುಗಳು ಹಾಗೂ ಅವಾಚ್ಯ ಪದಗಳು ಹಿಡಿದಿಡಲು ಸಾಧ್ಯವಿಲ್ಲ. ನಾವು ಗೆಲ್ಲುತ್ತೇವೆ..! ಜೈ ಹಿಂದ್ ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದರು.

Anti CAA protest: Actor Siddharth and 600 others booked

ಕ್ರಾಂತಿಕಾರಿ ಹೋರಾಟಗಾರ ಭಗತ್‌ ಸಿಂಗ್‌ ಮಾತುಗಳನ್ನು ಉಲ್ಲೇಖಿಸಿ, ಕ್ರಾಂತಿ ಎಂಬುದು ಪ್ರಜಾಪ್ರಭುತ್ವದ ರಕ್ತವಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ವಲ್ಲುವರ್ ಕೊಟ್ಟಂನಲ್ಲಿ ಪ್ರತಿಭಟನೆಯಲ್ಲಿ ಸಿದ್ದಾರ್ಥ್ ಭಾಗವಹಿಸಿದ್ದರು. ಗಾಯಕ ಟಿಎಂ ಕೃಷ್ಣ ಅವರು ತಿರುಮವಲಾವನ್ ನಲ್ಲಿ ಪ್ರತಿಭಟಿಸಿದ್ದಕ್ಕೆ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+