ತಮಿಳುನಾಡು ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪಾ ಸಸ್ಪೆಂಡ್

Posted By:
Subscribe to Oneindia Kannada

ಚೆನ್ನೈ,ಆಗಸ್ಟ್ 01: ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ ಜಯಲಲಿತಾ ಅವರು ರಾಜ್ಯಸಭೆ ಸದಸ್ಯೆ ಶಶಿಕಲಾ ಪುಷ್ಪಾ ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ರಾಜ್ಯಸಭೆಯಲ್ಲಿ ಗದ್ಗದಿತರಾಗಿ ಭಾಷಣ ಮಾಡಿದ ಘಟನೆ ಸೋಮವಾರ ನಡೆದಿದೆ.

ತಮಿಳುನಾಡಿನ 'ಅಮ್ಮ' ಜಯಲಲಿತಾ ಅವರ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಡಿಎಂಕೆ ಸಂಸದ ತಿರುಚ್ಚಿಯ ಶಿವ ಅವರ ಕೆನ್ನೆಗೆ ಸಂಸದೆ ಶಶಿಕಲಾ ಪುಷ್ಪಾ ಅವರು ಬಾರಿಸಿದ್ದರು. ಇತ್ತೀಚೆಗೆ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.

AIADMK sacks MP Sasikala Pushpa

ಈ ಬಗ್ಗೆ ರಾಜ್ಯಸಭೆಯಲ್ಲಿ ಸೋಮವಾರ ಮಾತನಾಡಿದ ಶಶಿಕಲಾ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ನನಗೆ ಜೀವ ಬೆದರಿಕೆ ಇದೆ. ಸಂಸದ್ ಸದಸ್ಯತ್ವ ತೊರೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ್ದರು.

ಆದರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣ ನೀಡಿ ಸಂಸದೆ ಶಶಿಕಲಾ ಪುಷ್ಪಾ ಅವರ ಪಕ್ಷದ ಪ್ರಾಥಮಿಕ ಸದಸ್ಯ ರದ್ದುಗೊಳಿಸಲಾಗಿದೆ. ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ.

2014ರಿಂದ ರಾಜ್ಯಸಭೆ ಸದಸ್ಯೆಯಾಗಿರುವ ಪುಷ್ಪಾ ಅವರು ಈ ಹಿಂದೆ ತಮಿಳುನಾಡಿನ ತೂತ್ತುಕುಡಿಯ ಮೇಯರ್ ಆಗಿದ್ದರು. ಇತ್ತೀಚೆಗೆ ಎಐಎಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿ ಹುದ್ದೆಯನ್ನು ಕಳೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AIADMK general secretary and Tamil Nadu Chief Minister Jayalalithaa sacked AIADMK MP Sasikala Pushpa from the party. Meanwhile, AIADMK MP Sasikala Pushpa broke down in Rajya Sabha while narrating that how she was harassed and forced to leave her constitutional post.
Please Wait while comments are loading...