ಪನ್ನೀರ್ ಬಣದಿಂದ ಹಲವರು ಶಶಿಕಲಾ ಬಣಕ್ಕೆ: ಸಚಿವ ಜಯಕುಮಾರ್
ಚೆನ್ನೈ, ಮೇ 9: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದಲ್ಲಿ ನಡೆಯುತ್ತಿರುವ ಬಣಗಳ ನಡುವಿನ ತಿಕ್ಕಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.
ಪನ್ನೀರ್ ಸೆಲ್ವಂ ಅವರ ಬಣದಲ್ಲಿರುವ ಅನೇಕ ಶಾಸಕರು ಸಧ್ಯದಲ್ಲೇ ಶಶಿಕಲಾ ಬಣವನ್ನು ಸೇರಿಕೊಳ್ಳಲಿದ್ದಾರೆಂದು ಹಣಕಾಸು ಸಚಿವ ಡಿ. ಜಯಕುಮಾರ್ ತಿಳಿಸಿದ್ದಾರೆ.

ಇದು, ಸೋಮವಾರ ಸೇಲಂನಲ್ಲಿ ಮಾಜಿ ಸಚಿವ ಸೆಮ್ಮಲಾಯ್ ಅವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುವ ಪ್ರಯತ್ನವಾಗಿದೆ.
ಇತ್ತೀಚೆಗೆ, ಪನ್ನೀರ್ ಸೆಲ್ವಂ ಬಣದಲ್ಲಿರುವ ಮಾಜಿ ಸಚಿವ ಎಸ್. ಸೆಮ್ಮಲಾಯ್ ಅವರು, ''ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಲ್ಲಿರುವ ಶಶಿಕಲಾ ಆಪ್ತ ಪಳನಿ ಸ್ವಾಮಿ ಮಂತ್ರಿಮಂಡಲದಲ್ಲಿರುವ ಅನೇಕ ಸಚಿವರು ಪಳನಿ ಸ್ವಾಮಿ ಹಾಗೂ ಶಶಿಕಲಾ ಆಪ್ತರ ಕೆಲ ಧೋರಣೆಗಳಿಂದ ಬೇಸತ್ತಿದ್ದಾರೆ. ಶೀಘ್ರದಲ್ಲೇ ಅವರು, ಪನ್ನೀರ್ ಸೆಲ್ವಂ ಬಣಕ್ಕೆ ಸೇರ್ಪಡೆಗೊಳ್ಳಲು ಹಾತೊರೆಯುತ್ತಿದ್ದಾರೆ. ಆದರೆ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆಂದು ಹೇಳಿದ್ದರು.












Click it and Unblock the Notifications