ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಚಿನ್ನಮ್ಮ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್,31: ತಮಿಳುನಾಡಿನಲ್ಲಿ ಅಮ್ಮ ಯುಗಾಂತ್ಯವಾದ ಮೇಲೆ ಚಿನ್ನಮ್ಮ ಅವರ ಯುಗ ಪ್ರಾರಂಭವಾಗಿದೆ. ಚಿನ್ನಮ್ಮ ಶಶಿಕಲಾ ನಟರಾಜನ್ ಅವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ನ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಚಿನ್ನಮ್ಮ ಅಧಿಕಾರ ಸ್ವೀಕರಿಸುವಾಗ ಪಕ್ಷದ ಎಲ್ಲ ಸದಸ್ಯರು ಮರು ಮಾತನಾಡದೇ ಅವರ ಅಧಿಕಾರನ್ನು ಒಪ್ಪಿಕೊಂಡಿದೆ. ಇನ್ನು ಅವರು ಚೆನ್ನೈನಲ್ಲಿರುವ ಎಐಎಡಿಎಂಕೆ ಪಕ್ಷದ ಪ್ರಧಾನಕಚೇರಿಯಲ್ಲಿ ಪಕ್ಷದ ನಿರ್ಮಾತೃ ಎಂ. ಜಿ. ರಾಮಚಂದ್ರನ್ ಅವರಿಗೆ ಮತ್ತು ಜಯಲಲಿತಾ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನಸಲ್ಲಿಸಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಬಹಳಷ್ಟಿದ್ದರು. ಅಲ್ಲದೆ ಪೊಲೀಸ್ ಭದ್ರತೆಯೂ ಇತ್ತು.[ತಮಿಳುನಾಡಿನಲ್ಲಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಯುಗಾರಂಭ!]

AIADMK gets its new ‘lady in green’ as Sasikala takes charge

ಪಕ್ಷದ ಪ್ರಧಾನ ಕಚೇರಿ ಬಳಿ ಶಶಿಕಲಾ, ಜಯಲಲಿತಾ ಅವರ ಪೊಸ್ಟರ್ ಗಳು, ಬ್ಯಾನರ್ ಗಳು ಕಾಣುತ್ತಿದ್ದವು, ಶಶಿಕಲಾ ಅವರ ಪರವಾಗಿ ಚಿನ್ನಮ್ಮ ಎಂಬ ಘೋಷಣೆಗಳು ಕೇಳಿ ಬಂದವು. ಜಯಲಲಿತಾ ಅವರ ಬೆಂಬಲಿಗರಾಗಿ ಹಲವು ವರ್ಷ ಜನರ ಮುಂದೆ ಬಾರದೇ ದುಡಿದ ಶಶಿಕಲಾ ಅವರು ಇನ್ನು ಚಿನ್ನಮ್ಮ ಆಗಿ ಪಕ್ಷದಲ್ಲಿ ಕಾರ್ಯ ನಿರ್ವಹಿಸಲು ಮುಂದಾದರು.

AIADMK gets its new ‘lady in green’ as Sasikala takes charge

ಶಶಿಕಲಾ ಅಣ್ಣಾ ಡಿಎಂಕೆ ಪಕ್ಷದಲ್ಲಿ ಜಯಲಲಿತಾ ಅವರು ಪಕ್ಷ ಸಂಘಟನೆ ಮಾಡಲು ಪ್ರಾರಂಭಿಸಿದಾಗಿನಿಂದಲೂ ಜೊತೆಯಲ್ಲಿದ್ದಾರೆ. ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿದ್ದಾರೆ. ಆದರೆ ಪಕ್ಷ ಈಗ ಹೊಸ ಪ್ರಧಾನ ಕಾರ್ಯದರ್ಶಿಯನ್ನು ಹೊಂದಿದೆ. ಜಯಲಲಿತಾ ಅವರಂತೆಯೇ ಪಕ್ಷದಲ್ಲಿ ಏನೇ ಭಿನ್ನಾಭಿಯವಿದ್ದರೂ ಶಶಿಕಲಾ ಅವರು ಅದನೆಲ್ಲಾ ಪರಿಹರಿಸಿ ಪಕ್ಷದ ರಥವನ್ನು ಎಳೆದುಕೊಂಡು ಹೊಗುತ್ತಾರೆಯೇ ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Clad in a green saree, Sasikala Natarajan pulled a Jayalalithaa on the All India Anna Dravida Munnetra Kazhagam cadre as she took over the leadership of the party as its general secretary. While keeping mum on it all the while, Sasikala Natarajan accepted the party's resolution to appoint her as the general secretary without any qualms.
Please Wait while comments are loading...