ದಿನಕರನ್ ಬೆಂಬಲಿತ 44 ಕಾರ್ಯಕರ್ತರಿಗೆ ಗೇಟ್ ಪಾಸ್

Posted By:
Subscribe to Oneindia Kannada
   ಟಿ ಟಿ ವಿ ದಿನಕರನ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ಯಾಕೆ? | Oneindia Kannada

   ಚೆನ್ನೈ, ಡಿಸೆಂಬರ್ 28: ರಾಧಾಕೃಷ್ಣ ನಗರ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಟಿಟಿವಿ ದಿನಕರನ್ ಸ್ಪರ್ಧಿಸಿ ಭರ್ಜರಿ ಜಯಭೇರಿ ಬಾರಿಸಿದ್ದು, ಎಐಎಡಿಎಂಕೆಗೆ ಭಾರಿ ಹಿನ್ನಡೆಯಾಗಿದೆ. ಚುನಾವಣೆ ಫಲಿತಾಂಶದ ನಂತರ ಎರಡನೇ ಬಾರಿಗೆ ಟಿಟಿವಿ ದಿನಕರನ್ ಬೆಂಬಲಿತ ಎಐಎಡಿಎಂಕೆ ಸದಸ್ಯರನ್ನು ಪಕ್ಷದಿಂದ ಹೊರ ಹಾಕಲಾಗಿದೆ.

   ಡಿಸೆಂಬರ್ 25ರಂದು 9 ಮಂದಿಯನ್ನು ಹೊರಗಟ್ಟಿದ್ದ ಎಐಎಡಿಎಂಕೆ, ಇಂದು 44 ಮಂದಿಯನ್ನು ಪಕ್ಷದಿಂದ ವಜಾಗೊಳಿಸಿರುವುದಾಗಿ ಹೇಳಿದೆ. ಈ ಬಗ್ಗೆ ಪಕ್ಷದ ಸಂಚಾಲಕ ಓ ಪನ್ನೀರ್ ಸೆಲ್ವಂ ಹಾಗೂ ಸಹ ಸಂಚಾಲಕ ಕೆ ಪಳನಿಸ್ವಾಮಿ ಅಧಿಕೃತ ಪ್ರಕಟಣೆ ಹೊರಡಿಸಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 44 ಮಂದಿ ಪ್ರಾಥಮಿಕ ಸದಸತ್ವ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

   AIADMK cracks whip against Dhinakaran loyalists, expels 44 from party

   44 ಮಂದಿ ಪೈಕಿ ಮಧುರೈನ ಮೇಲೂರಿನ ಶಾಸಕ ಆರ್ ಸ್ವಾಮಿ ಕೂಡಾ ಸೇರಿದ್ದಾರೆ. ಮಧುರೈ, ಧರ್ಮಪುರಿ, ತಿರುಚನಾಪಳ್ಳಿ, ಪೆರುಂಬಲೂರ್ ಹಾಗೂ ವೆಲ್ಲೂರು ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

   ಇತ್ತೀಚೆಗೆ ನಡೆದ ಆರ್ ಕೆ ನಗರ ಉಪಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಇ ಮಧುಸೂದನನ್ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳಿಂದ ದಿನಕರನ್ ಜಯ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   he ruling AIADMK on Thursday continued to crack the whip against supporters of rival leader TTV Dhinakaran post its RK Nagar bypoll defeat, expelling 44 of them and relieving two others from party posts.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ