ಶಶಿಕಲಾ ಪುಷ್ಪರ ಗಂಡ, ವಕೀಲನಿಗೆ ಎಐಎಡಿಎಂಕೆ ಕಾರ್ಯಕರ್ತರ ಗೂಸಾ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 28 : ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾನೂ ಸಿದ್ದನಿದ್ದೇನೆ ಎಂದು ನಾಮಪತ್ರ ಹಿಡಿದುಬಂದ ಉಚ್ಚಾಟಿತ ಶಶಿಕಲಾ ಪುಷ್ಪಾ ಅವರ ಗಂಡ ಮತ್ತು ವಕೀಲನ ಬಾಯಿ ಮೂಗನಿಲ್ಲಿ ರಕ್ತ ಬರುವಂತೆ ಎಐಎಡಿಎಂಕೆ ಕಾರ್ಯಕರ್ತರು ಬಾರಿಸಿದ್ದಾರೆ.

ಪಕ್ಷವಿರೋಧಿ ಚಟುವಟಿಕೆಗಾಗಿ ಪಕ್ಷದಿಂದ ಹೊರಹಾಕಿಸಿಕೊಂಡಿದ್ದ ಶಶಿಕಲಾ ಪುಷ್ಪಾ ಅವರು ಗಂಡ ಮತ್ತು ವಕೀಲನೊಂದಿಗೆ ಎಐಎಡಿಎಂಕೆ ಪಕ್ಷದ ಕಚೇರಿಗೆ ಬಂದಿದ್ದಾಗ ಬುಧವಾರ ಈ ಘಟನೆ ನಡೆದಿದೆ. ಈ ಘರ್ಷಣೆಯಲ್ಲಿ ಶಶಿಕಲಾ ಅವರ ಗಂಡ ಲಿಂಗೇಶ್ವರನ್ ತಿಳಗಾರ್ ಮತ್ತು ವಕೀಲನನ್ನು ಥಳಿಸಲಾಗಿದೆ.

AIADMK cadres assault Sasikala Pushpa's lawyer and husband

ಸಂಸದೆ ಶಶಿಕಲಾ ಪುಷ್ಪ ಅವರು ಸದ್ಯಕ್ಕೆ ಪಕ್ಷದ ಚುಕ್ಕಾಣಿಯನ್ನು ಹಿಡಿದಿರುವ ಪ್ರಭಾವಿ ಮಹಿಳೆ ಶಶಿಕಲಾ ನಟರಾಜನ್ ಅವರ ವಿರುದ್ಧ ಸೆಣಸಾಡಲು ನಿರ್ಧರಿಸಿದ್ದರು. ಶಶಿಕಲಾ ನಟರಾಜನ್ ಅವರೇ ಪ್ರಧಾನ ಕಾರ್ಯದರ್ಶಿಯಾಗಬೇಕು ಎಂದು ಒಕ್ಕೊರಲಿನಿಂದ ಪಕ್ಷದ ಕಾರ್ಯಕರ್ತರು ನಿರ್ಧರಿಸಿರುವ ಹೊತ್ತಿನಲ್ಲಿ ಶಶಿಕಲಾ ಪುಷ್ಪ ಅವರು ವಿರೋಧದ ಬಾವುಟ ಹಾರಿಸಿದ್ದು ಈ ಘರ್ಷಣೆಗೆ ಕಾರಣವಾಗಿದೆ.

ನಾಮಪತ್ರ ಹಿಡಿದುಕೊಂಡು ಬಂದ ಶಶಿಕಲಾ ಪುಷ್ಪ ಅವರೊಂದಿಗಿದ್ದ ಗಂಡ ಲಿಂಗೇಶ್ವರನ್ ತಿಳಗಾರ್ ಮತ್ತು ವಕೀಲನ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ಗುರುವಾರ ಪಕ್ಷದ ಮಹತ್ವದ ಸಭೆ ನಡೆಯಲಿದ್ದು, ಶಶಿಕಲಾ ನಟರಾಜನ್ ಅವರು ಆಯ್ಕೆ ಮಾಡಲು ಯೋಜನೆ ಹೂಡಲಾಗಿತ್ತು.

ಶಶಿಕಲಾ ನಟರಾಜನ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಲ್ಲಿಸಿರುವ ನಾಮಪತ್ರವನ್ನು ವಿರೋಧಿಸಿ ಶಶಿಕಲಾ ಪುಷ್ಪ ಅವರು ಈಗಾಗಲೆ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಡಿಸೆಂಬರ್ 5ರಂದು ಜಯಲಲಿತಾ ಅವರು ಅಸುನೀಗಿದ್ದರಿಂದ ಹುದ್ದೆ ಖಾಲಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Expelled AIADMK MP Sasikala Pushpa's husband and her lawyer was assaulted by party cadres when they arrived at the AIADMK headquarters on Wednesday. Lingeshwaran, MP Sasikala Natarajan's husband was assaulted after he brought in the nomination papers for Sasikala Pushpa to run for the post of general secretary. ಶಶಿಕಲಾ ಪುಷ್ಪರ ಗಂಡ, ವಕೀಲನಿಗೆ ಎಐಎಡಿಎಂಕೆ ಕಾರ್ಯಕರ್ತರ ಗೂಸಾ
Please Wait while comments are loading...