ಶರತ್ ಕುಮಾರ್ ಆಯ್ತು, ಅವರ ಪತ್ನಿ ರಾಧಿಕಾ ಕಚೇರಿ ಮೇಲೆ ಐಟಿ ದಾಳಿ

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಏಪ್ರಿಲ್ 11: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚೆನ್ನೈನಲ್ಲಿ ದಾಳಿ ಮುಂದುವರಿಸಿದ್ದಾರೆ. ರಾಜಕಾರಣಿ-ನಟ ಶರತ್ ಕುಮಾರ್ ಮನೆ ಮೇಲೆ ದಾಳಿ ನಡೆಸಿದ ಒಂದು ದಿನದ ನಂತರ ಐಟಿ ಅಧಿಕಾರಿಗಳು, ಶರತ್ ಕುಮಾರ್ ಪತ್ನಿ ರಾಧಿಕಾ ಅವರಿಗೆ ಸೇರಿದ ಮಾಧ್ಯಮ ಸಂಸ್ಥೆ ಮೇಲೆ ದಾಳಿ ನಡೆಸಿದ್ದಾರೆ.

ಚೆನ್ನೈನ ಟಿ ನಗರದಲ್ಲಿರುವ ರಾಧಿಕಾ ಶರತ್ ಕುಮಾರ್ ಅವರ ರಾದನ್ ಮೀಡಿಯಾ ವರ್ಕ್ಸ್ ನ ಕಚೇರಿ ಮೇಲೆ ಮಂಗಳವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ನಿರ್ಮಾಣ ಸಂಸ್ಥೆಯನ್ನು ರಾಧಿಕಾ-ಶರತ್ ಕುಮಾರ್ ದಂಪತಿ ಜೊತೆಯಾಗಿ ನಡೆಸುತ್ತಾರೆ. 1994ರಲ್ಲಿ ರಾದನ್ ಮೊದಲಿಗೆ ಆರಂಭವಾದಾಗ ವ್ಯಕ್ತಿ ಒಡೆತನದ ಸಂಸ್ಥೆಯಾಗಿತ್ತು. 1999ರಲ್ಲಿ ಕಾರ್ಪೋರೇಟ್ ಸಂಸ್ಥೆಯಾಗಿ ಮಾರಪಡಿಸಲಾಯಿತು.[ತಮಿಳುನಾಡಿನ ಹಲವೆಡೆ ಐಟಿ ದಾಳಿ: ಶಶಿಕಲಾ ಆಪ್ತ, ನಟ ಶರತ್ ಕುಮಾರ್ ಮನೆ ರೇಡ್]

After Sarathkumar, IT raids actor Raadhika's office in Chennai

ತಮಿಳುನಾಡಿನ ಸಚಿವ ವಿಜಯಭಾಸ್ಕರ್ ಹಾಗೂ ಶರತ್ ಕುಮಾರ್ ಮನೆಯಿಂದ ಹಲವು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಒಂದು ದಿನದ ನಂತರ ಈ ದಾಳಿ ನಡೆದಿದೆ. ಸೋಮವಾರವಷ್ಟೇ ಶರತ್ ಕುಮಾರ್ ಅವರನ್ನು ಅಧಿಕಾರಿಗಳು ಅಸ್ತಿ ವಿವರಗಳಿಗೆ ಸಂಬಂಧಿಸಿದ ಹಾಗೆ ಪ್ರಶ್ನೆ ಮಾಡಿದ್ದರು. ಅ ನಂತರ ಅವರು ಹಾಗೂ ಆಪ್ತರ ಒಡೆತನದ ಆಸ್ತಿಗಳಿಗಾಗಿ ಶೋಧ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The income tax department' crackdown has continued in Chennai. A day after actor turned politician Sarathkumar was grilled following raids at his residence, officials of the income tax department carried out searches at his wife's media house office.
Please Wait while comments are loading...