ತಮಿಳುನಾಡಿನ ದೇಗುಲಗಳಲ್ಲಿ ಹೊಸ ವರ್ಷದಿಂದ ವಸ್ತ್ರ ಸಂಹಿತೆ

Posted By:
Subscribe to Oneindia Kannada

ಚೆನ್ನೈ, ಡಿ.29: ಹೊಸ ವರ್ಷದ ದಿನ(ಜನವರಿ 1) ದಿಂದ ತಮಿಳುನಾಡಿನ ಎಲ್ಲಾ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳ್ಳಲಿದೆ. ಈ ಹೊಸ ವ್ಯವಸ್ಥೆ ಬಗ್ಗೆ ಮದ್ರಾಸ್ ಹೈಕೋರ್ಟ್ ಡಿಸೆಂಬರ್ ಮೊದಲ ವಾರ ಮಹತ್ವದ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಜನವರಿ ತಿಂಗಳಿನಿಂದ ಡ್ರೆಸ್ ಕೋಡ್ ಜಾರಿಗೊಳ್ಳಲಿದೆ.

ತಮಿಳುನಾಡಿನ ದೇವಸ್ಥಾನಗಳಲ್ಲಿ ಜೀನ್ಸ್ ಪ್ಯಾಂಟ್, ಲೆಗ್ಗಿಂಗ್ಸ್ ಮತ್ತು ಸ್ಕರ್ಟ್‌ಗಳನ್ನು ಧರಿಸಿರುವ ಭಕ್ತಾದಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಧಾರ್ಮಿಕ ಮತ್ತು ಧರ್ಮ ದತ್ತಿಗಳ ಇಲಾಖೆಯು ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ. [ಪಂಚೆ ಪ್ರಕರಣ: ಕ್ರಿಕೆಟ್ ಕ್ಲಬ್ಬಿಗೆ ಸಿಎಂ ಜಯಾ ಪಂಚ್]

A dress code for men, women and children at Tamil Nadu temples from 1 Jan

ಇಲಾಖೆಯ ಅಧೀನದಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಜ.1ರಿಂದ ಆಗಮಗಳು, ಸಂಪ್ರದಾಯಗಳು ಮತ್ತು ಆಚಾರಗಳಿಗನುಗುಣವಾಗಿ ವಸ್ತ್ರ ಸಂಹಿತೆ ಜಾರಿಗೆ ಬರಲಿದೆ. [ಸೀರೆ ಕಡ್ಡಾಯವಲ್ಲ, ಸಭ್ಯವಾದ ಡ್ರೆಸ್ ಇರಲಿ: ಕಾಶಿ ದೇಗುಲ ಟ್ರಸ್ಟ್]

ಹಿಂದೂ ದೇವಸ್ಥಾನಗಳಲ್ಲಿ ಈ ನಿಯಮ ಹಿಂದಿನಿಂದಲೂ ಇತ್ತು. ಪ್ರತಿ ದೇವಸ್ಥಾನವೂ ತನ್ನದೇ ಆದ ನಿಯಮಗಳನ್ನು ಹೊಂದಿದೆ. ಪುರುಷರು ಪಂಚೆಯನ್ನು ಮಾತ್ರ ಮತ್ತು ಮಹಿಳೆಯರು ಸೀರೆಯನ್ನು ಧರಿಸಿರಬೇಕೆನ್ನುವುದು ಅತ್ಯಂತ ಹಳೆಯ ಮತ್ತು ಅತ್ಯಂತ ಮುಖ್ಯ ನಿಯಮವಾಗಿದೆ.

ಮದ್ರಾಸ್ ನ್ಯಾಯಾಲಯದ ಅದೇಶವನ್ನು ಮದುರೈ ಪೀಠ ಜಾರಿಗೊಳಿಸುತ್ತಿದೆ. ವಡಪಳನಿ ದೇಗುಲ, ತ್ಯಾಗರಾಜ ದೇಗುಲ ಮುಂತಾದ ದೇವಸ್ಥಾನದ ದತ್ತಿ ಮಂಡಳಿಗಳು ಇನ್ನೂ ಸುತ್ತೋಲೆಗೆ ಪ್ರತಿಕ್ರಿಯಿಸಿಲ್ಲ. ಪುರುಷರಿಗೆ ಧೋತಿ ಹಾಗೂ ಪೈಜಾಮಾ, ಶರ್ಟ್ ಹಾಗೂ ಪ್ಯಾಂಟ್ ಜೊತೆಗೆ ಪ್ಯಾಂಟ್ ಧರಿಸಬಹುದು. ಮಹಿಳೆಯರು ಸೀರೆ, ಲಂಗ ದಾವಣಿ ಅಥವಾ ಚೂಡಿದಾರ್ ಧರಿಸಿ ಬರಬೇಕು. ಈ ನಿಯಮಗಳು ಮಕ್ಕಳಿಗೂ ಅನ್ವಯವಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A notice from Tamil Nadu’s Hindu religious and charitable endowments (HR & CE) department, Tamil Nadu says people dressed in denim pants, leggings and skirts will not be allowed to enter temples henceforth.
Please Wait while comments are loading...