ಕರುಪ್ಪನಸಾಮಿ ದೇವಾಲಯದಲ್ಲಿ ಕಾಲ್ತುಳಿತಕ್ಕೆ ಏಳು ಮಂದಿ ಸಾವು
ತಿರುಚ್ಚಿ (ತಮಿಳುನಾಡು), ಏಪ್ರಿಲ್ 21: ನಾಲ್ವರು ಮಹಿಳೆಯರು ಸೇರಿ ಏಳು ಮಂದಿ ಕರುಪ್ಪನಸಾಮಿ ದೇವಾಲಯದಲ್ಲಿ ಕಾಲ್ತುಳಿತಕ್ಕೆ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ತುರೈಯೂರು ಬಳಿಯ ಮುತ್ತೈಯಮ್ ಪಾಳ್ಯಂ ಬಳಿ ಇರುವ ದೇವಾಲಯದಲ್ಲಿ ಬೆಳಗ್ಗೆ 10.45ರ ಹೊತ್ತಿಗೆ ಸಂಭವಿಸಿದೆ. ಚಿತ್ರ ಪೌರ್ಣಮಿ ಭಾಗವಾಗಿ 'ಪಿಡಿಕಾಸು' (ನಾಣ್ಯಗಳು) ಹಂಚುವ ವೇಳೆ ಘಟನೆ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಆ ನಂತರ ನಾಣ್ಯಗಳನ್ನು ಹೆಕ್ಕಿಕೊಳ್ಳಲು ಮುಗಿ ಬಿದ್ದಿದ್ದರಿಂದ ಭಾರೀ ಅನಾಹುತ ಸಂಭವಿಸಿದೆ. ಆರ್.ಲಕ್ಷ್ಮೀಕಾಂತನ್, ಕೆ.ರಾಜ್ ವೇಲ್, ಎಸ್. ಗಂಧಾಯಿ, ಎ.ಶಾಂತಿ, ರಾಮರ್, ವಿ.ಪೂಂಗಾವನಮ್ ಮತ್ತು ಆರ್.ವಲ್ಲಿ ಮೃತ ದುರ್ದೈವಿಗಳು.

ಇವರೆಲ್ಲರೂ ಕರೂರ್, ಕಡಲೂರ್, ಸೇಲಂ, ನಾಮಕ್ಕಲ್ ಮತ್ತು ವಿಲ್ಲುಪುರಂ ಜಿಲ್ಲೆಗೆ ಸೇರಿದವರು. ಈ ದೇವಸ್ಥಾನದ ವಾರ್ಷಿಕ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಕಾಲ್ತುಳಿತ ಸಂಭವಿಸಿದ್ದರಿಂದ ಅನಾಹುತ ಆಗಿದೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕ ಆರಂಭದಲ್ಲಿ ಇತ್ತು.












Click it and Unblock the Notifications