ನಟಿ ಭಾನುಪ್ರಿಯ ಮನೆಯಲ್ಲಿ ಮೂವರು ಅಪ್ರಾಪ್ತರಿಗೆ ಕಿರುಕುಳ?
ಚೆನ್ನೈ, ಫೆಬ್ರವರಿ 04: ಬಹುಭಾಷಾ ತಾರೆ ಭಾನುಪ್ರಿಯ ಅವರ ಮನೆಯಲ್ಲಿ ಮೂವರು ಅಪ್ರಾಪ್ತರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಮೂರು ಮಕ್ಕಳ ತಾಯಿ ನೀಡಿದ ದೂರಿನ ಮೇರೆಗೆ ಮಕ್ಕಳ ಸಂರಕ್ಷಣಾ ವಿಭಾಗದ ಅಧಿಕಾರಿಗಳು ಟಿ ನಗರದಲ್ಲಿರುವ ನಟಿ ಮನೆಯತ್ತ ಧಾವಿಸಿದ್ದಾರೆ.
ಆಂಧ್ರಪ್ರದೇಶದ ಸಮಲ್ ಕೋಟ್ ನಲ್ಲಿರುವ ಮಹಿಳೆಯೊಬ್ಬರು ಈ ಆರೋಪ ಮಾಡಿದ್ದು, ಭಾನುಪ್ರಿಯ ಮನೆಯಲ್ಲಿ ನನ್ನ ಮಗಳು ಮನೆ ಕೆಲಸದಾಕೆಯಾಗಿ ಸೇರಿಕೊಂಡಿದ್ದು, ಇಲ್ಲಿ ತನಕ ಯಾವುದೇ ಸಂಬಳ ಸಿಕ್ಕಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸುತ್ತಿದ್ದಾಳೆ ಎಂದು ದೂರಿದ್ದಾರೆ.
ಮಕ್ಕಳ ಹಕ್ಕು ಸಂರಕ್ಷಣಾ ಕಾರ್ಯಕರ್ತರಾದ ಅಚ್ಯುತ್ ರಾವ್ ಅವರು ರಾಷ್ಟ್ರೀಯ ಮಕ್ಕಳ ಆಯೋಗಕ್ಕೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಬಾಲ ಕಾರ್ಮಿಕ ಕಾಯ್ದೆಯಡಿಯಲ್ಲಿ ನಟಿ ಭಾನುಪ್ರಿಯರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ಸಾಧ್ಯತೆಯಿದ್ದು, ಮಾನವ ಕಳ್ಳಸಾಗಣೆ ಶಂಕೆ ವ್ಯಕ್ತವಾಗಿದೆ ಎಂದು ಅಚ್ಯುತ್ ರಾವ್ ಆರೋಪಿಸಿದ್ದಾರೆ.
ಕಳ್ಳತನದ ಆರೋಪ: ಅಪ್ರಾಪ್ತರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿಲ್ಲ. ಆಕೆಗೆ 18 ತುಂಬಿದೆ ಎಂದು ಅವರ ತಾಯಿಗೆ ಇಲ್ಲಿ ಕೆಲಸಕ್ಕೆ ಸೇರಿಸಿದ್ದು, ಮನೆಯಲ್ಲಿ ಕಳುವಾದ ಆಭರಣಗಳು ಆಕೆಯ ತಾಯಿಯ ಬಳಿ ಇರುವುದು ಪತ್ತೆಯಾಗಿದ್ದು, ಎಲ್ಲವನ್ನು ವಾಪಸ್ ಮಾಡುವಂತೆ ಸೂಚಿಸಿದೆ. ಐಪ್ಯಾಡ್, ಕೆಮರಾ ಹಾಗೂ ವಾಚ್ ಮಾತ್ರ ವಾಪಸ್ ತಂದುಕೊಟ್ಟಳು.
ಈಗ ನೋಡಿದರೆ ನನ್ನ ವಿರುದ್ಧವೇ ಕೇಸು ದಾಖಲಿಸಿದ್ದಾಳೆ, ಅದು ಆಂಧ್ರಪ್ರದೇಶದಲ್ಲಿ, ಇದೆಲ್ಲವೂ ವ್ಯವಸ್ಥಿತವಾದ ಕುತಂತ್ರ ಎಂದು ಭಾನುಪ್ರಿಯ ಪ್ರತಿಕ್ರಿಯಿಸಿದ್ದಾರೆ
ತಿಂಗಳಿಗೆ 10 ಸಾವಿರ ರುಪಾಯಿ ಸಂಬಳ ನೀಡಬೇಕಿದ್ದ ಭಾನುಪ್ರಿಯ ಕಳೆದ 18 ತಿಂಗಳಿನಿಂದ ಸಂಬಳ ನೀಡಿಲ್ಲ. ನನ್ನನ್ನು ಭೇಟಿ ಮಾಡಲು ಬಿಡುತ್ತಿಲ್ಲ ಎಂದು ಅಪ್ರಾಪ್ತೆಯ ತಾಯಿ ದೂರಿದ್ದಾರೆ. ಭಾನುಪ್ರಿಯ ಹಾಗೂ ಅವರ ಸೋದರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಹುಡುಗಿಯ ಕುಟುಂಬವರ್ಗವನ್ನು ವಿಚಾರಣೆಗೊಳಪಡಿಸಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications