ನೆಚ್ಚಿನ '20 ರೂಪಾಯಿ ಡಾಕ್ಟರ್' ಶರೀರದ ಮುಂದೆ ಕಣ್ಣೀರಿಟ್ಟರು ಜನ
ಚೆನ್ನೈ, ಅಕ್ಟೋಬರ್ 4: ರೋಗಿಗಳಿಂದ ಕೇವಲ ಐದು ರೂಪಾಯಿ ಸೇವಾ ಶುಲ್ಕ ಪಡೆಯುವ ಮಂಡ್ಯದ ವೈದ್ಯ ಡಾ.ಎಚ್.ಸಿ. ಶಂಕರೇಗೌಡ ಅವರು 'ಐದು ರೂಪಾಯಿ ಡಾಕ್ಟ್ರು' ಎಂದೇ ಬಹುಪ್ರಸಿದ್ಧಿ ಗಳಿಸಿದವರು. ಅವರಂತೆಯೇ ನೆರೆಯ ತಮಿಳುನಾಡಿನ ಚೆನ್ನೈನಲ್ಲಿ '20 ರೂಪಾಯಿ ಡಾಕ್ಟರ್' ಜಗನ್ ಮೋಹನ್ ಕೂಡ ಹೆಸರುವಾಸಿ.
ದಿನಬೆಳಗಾದರೆ ಸಾಕು, ಚೆನ್ನೈನ ಆರ್.ಕೆ. ಮಠ ರಸ್ತೆಯಲ್ಲಿರುವ ಡಾ. ಎ. ಜಗನ್ ಮೋಹನ್ ಅವರ ಮನೆ ಮತ್ತು ಕ್ಲಿನಿಕ್ ಮುಂದೆ ರೋಗಿಗಳು ಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತಿರುತ್ತಿದ್ದರು. ಬುಧವಾರ ಬೆಳಿಗ್ಗೆಯೂ ಆ ರಸ್ತೆಯ ತುಂಬಾ ಜನದಟ್ಟಣೆ.
ಉಕ್ಕಿ ಬರುತ್ತಿದ್ದ ಕಣ್ಣೀರ ಕೋಡಿಯನ್ನು ತಡೆಯಲಾಗದೆ ಬಿಕ್ಕುತ್ತಲೇ ತಮ್ಮ ಪ್ರೀತಿಯ '20 ರೂಪಾಯಿ ಡಾಕ್ಟರ್' ಅವರನ್ನು ನೋಡಲು ಜನರು ಸಾಲುಗಟ್ಟಿ ನಿಂತಿದ್ದರು. ಒಂದು ಬಟ್ಟೆ ಅಂಗಡಿ ಮತ್ತು ಸೂಪರ್ ಮಾರ್ಕೆಟ್ ಒಂದರ ನಡುವಿನ ಮನೆಯ ಮುಂದೆ ಜಗನ್ ಮೋಹನ್ ಅವರ ಮೃತದೇಹ ತಣ್ಣನೆ ಮಲಗಿತ್ತು.
ಸುರಿಯುತ್ತಿದ್ದ ಮಳೆಯ ಹನಿಯ ಜೊತೆಗೆ ಅವರ ಅಭಿಮಾನಿಗಳ ಕಣ್ಣೀರು ಕರಗಿ ಹೋಗುತ್ತಿತ್ತು. ಸುದ್ದಿ ಕೇಳಿ ದೂರ ಊರುಗಳಿಂದ ಬಂದಿದ್ದ ಜನರು ಮಳೆಯನ್ನೂ ಲೆಕ್ಕಿಸದೆ ತಮ್ಮ ಪ್ರೀತಿಯ ವೈದ್ಯರಿಗೆ ಅಂತಿಮ ವಿದಾಯ ಹೇಳಿದರು. ಜನರ ಅಭಿಮಾನ, ಪ್ರೀತಿಗೆ ಪಾತ್ರರಾಗಿದ್ದ ವೈದ್ಯರ ಅಗಲುವಿಕೆಗೆ ವರುಣನೂ ಅಶ್ರುತರ್ಪಣ ನೀಡಿದ.
|
ಮಂಗಳವಾರ ನಿಧನ
ಬಡ ಜನರಿಗೆ ಯಾವ ಆಸ್ಪತ್ರೆಯೂ ನೀಡದ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದ ಡಾ. ಜಗನ್ ಮೋಹನ್ ಅವರೆಂದರೆ ಜನರಿಗೆ ಅಚ್ಚುಮೆಚ್ಚು. ಬಡ ರೋಗಿಗಳಿಗೆ ಅನುಕೂಲವಾಗುವಂತೆ ಚಿಕಿತ್ಸೆ ನೀಡುತ್ತಿದ್ದ ಅವರು ತೆಗೆದುಕೊಳ್ಳುತ್ತಿದ್ದ ಗರಿಷ್ಠ 20 ರೂಪಾಯಿ ಮಾತ್ರ. 78 ವರ್ಷ ವಯಸ್ಸಿನ ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದರು.
ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗನನ್ನು ಅವರು ಅಗಲಿದ್ದಾರೆ.
| Array |
ಬಡವರಿಗಾಗಿ ಸೇವೆ
1940ರಲ್ಲಿ ಜನರಿದ ಡಾ. ಜಗನ್ ಅವರು, 1970ರ ದಶಕದ ಆರಂಭದಲ್ಲಿ ಕ್ಲಿನಿಕ್ ತೆರೆದರು. ವೈದ್ಯ ಸೇವೆ ಆರಂಭಿಸಿದ ಸಂದರ್ಭದಲ್ಲಿ ಅವರು ಬಡ ರೋಗಿಗಳಿಂದ ತೆಗೆದುಕೊಳ್ಳುತ್ತಿದ್ದ ಶುಲ್ಕ ಒಂದು ರೂಪಾಯಿ ಮಾತ್ರ. ಸಮಾಜದ ಅತಿ ಬಡ ವರ್ಗದ ಜನರೇ ಅವರ ಮುಖ್ಯ ರೋಗಿಗಳಾಗಿದ್ದರು. ಒಂದು ರೂಪಾಯಿ ಕೂಡ ಕೊಡಲು ಸಾಮರ್ಥ್ಯ ಇಲ್ಲದವರಿಗೆ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು. ಜನರು ತಮ್ಮ ಕೈಯಲ್ಲಿದ್ದಷ್ಟು ಹಣ ಕೊಡುತ್ತಿದ್ದರು. ಎಷ್ಟು ಕೊಡುತ್ತಿದ್ದರೋ ಅವರು ಅಷ್ಟನ್ನೇ ತೆಗೆದುಕೊಳ್ಳುತ್ತಿದ್ದರು.

1 ರಿಂದ 20 ರೂ.ವರೆಗೆ
ಕ್ರಮೇಣ ಅವರ ಸೇವಾ ಶುಲ್ಕ 2, 3, 5, 10 ಹೀಗೆ ಸ್ವಲ್ಪವೇ ಏರಿಕೆಯಾಗಿ 20 ರೂಪಾಯಿಗೆ ತಲುಪಿತ್ತು. ವಯಸ್ಸಾದರೂ ಕಳೆದ ಎರಡು ವಾರದವರೆಗೂ ಅವರು ರೋಗಿಗಳ ತಪಾಸಣೆ ನಡೆಸುವುದನ್ನು ಮುಂದುವರಿಸಿದ್ದರು. ದುಡ್ಡಿಲ್ಲದಿದ್ದರೆ, 'ಈಗ ಹೋಗು, ಆಮೇಲೆ ಹಣ ಕೊಟ್ಟರಾಯಿತು' ಎನ್ನುತ್ತಿದ್ದರು. 'ಈಗಿನ ಜನರು ಅವರನ್ನು 20 ರೂಪಾಯಿ ಡಾಕ್ಟರ್ ಎಂದು ಕರೆಯುತ್ತಿದ್ದರು. ಆದರೆ ನಮಗೆ ಅವರು 'ಎರಡು ರೂಪಾಯಿ ಡಾಕ್ಟರ್'. ಇನ್ನು ಮುಂದೆ ನಮ್ಮ ಪಾಡೇನು' ಎಂದು ಕಣ್ಣೀರಿಟ್ಟರು 67 ವರ್ಷದ ವೃದ್ಧೆ ಸೆಲ್ವಿ ಅಮ್ಮಾ.
|
ಸಮಯವನ್ನೂ ನೋಡುತ್ತಿರಲಿಲ್ಲ
'ಒಮ್ಮೆ ನನ್ನ ಮಗನಿಗೆ ತೀವ್ರ ಹೊಟ್ಟೆ ನೋವು ಬಂದಿತ್ತು. ಅವನ ಕಿಡ್ನಿಯಲ್ಲಿ ಕಲ್ಲುಗಳಿದ್ದವು. ನೋವು ತಡೆದುಕೊಳ್ಳುವುದು ಅಸಾಧ್ಯವಾಗಿತ್ತು. ಅದು ನಸುಕಿನ ಮೂರು ಗಂಟೆ ಸಮಯ. ನನಗೀಗಲೂ ನೆನಪಿದೆ. ಅವರ ಮನೆ ಬೆಲ್ ಮಾಡಿದಾಗ ಅವರು ಸ್ಪಂದಿಸಿದರು. ನನ್ನ ಮಗನಿಗೆ ಮಾತ್ರೆಗಳನ್ನು ಮತ್ತು ಇಂಜೆಕ್ಷನ್ ನೀಡಿದರು. ನಮ್ಮಿಂದ ಹಣವನ್ನೇ ತೆಗೆದುಕೊಳ್ಳಲಿಲ್ಲ. ನನ್ನ ಮಗನ ಆರೋಗ್ಯ ಸುಧಾರಿಸಿತು. ಅವರದು ಅದೃಷ್ಟದ ಕೈಗುಣ' ಎಂದು ಸೆಲ್ವಿ ನೆನಪಿಸಿಕೊಂಡರು.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್












Click it and Unblock the Notifications