ದೇವರನ್ನೂ ಬಿಡದ ಪುಣ್ಯಾತ್ಮರು, ದೇವಸ್ಥಾನಗಳ 1500 ಎಕರೆ ಗುಳುಂ!

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಜನವರಿ 29: ತಮಿಳುನಾಡಿನ ದೇವಸ್ಥಾನಗಳ 1500 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಸುಪ್ರಿಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಕೆ.ಎಸ್ ಕುಪ್ಪುಸ್ವಾಮಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಕೋರ್ಟ್ ಈ ಅಭಿಪ್ರಾಯ ಹೊರ ಹಾಕಿದೆ.[ಕಾವೇರಿ ವಾದಕ್ಕೆ ಮೋಹನ್ ಕಾತರಕಿ ಗುಡ್ ಬೈ]

'ದೇವರ ಜಮೀನುಗಳು ತೊಂದರೆಯಲ್ಲಿವೆ' ಎಂಬ ಹೆಸರಿನಲ್ಲಿ ಕೆ.ಎಸ್ ಕುಪ್ಪುಸ್ವಾಮಿ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. ಈರೋಡ್ ಜಿಲ್ಲೆಯ ಪೆರುಂದುರೈ ಗ್ರಾಮದ ಸೆಲ್ಲಂದಿಯಮ್ಮನ್ ದೇವಸ್ಥಾನದ ಜಮೀನು ಒತ್ತುವರಿ ಮಾಡಿಕೊಂಡಿರುವವರಿಗೆ ಮತ್ತು ದೇವಸ್ಥಾನದ ಜಾಗದಲ್ಲಿರುವ ಅಂಗಡಿಗಳಿಗೆ ಬಾಡಿಗೆ ನೀಡುವಂತೆ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಕೋರಿ ಕುಪ್ಪುಸ್ವಾಮಿ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.[ಚುನಾವಣೆ ಹಿನ್ನಲೆ, ಬಜೆಟ್ ಮುಂದೂಡಿಕೆಗೆ ಸುಪ್ರಿಂ ನಕಾ]

 1,500 acres temple land encroached in TN, SC told

ಕೋರ್ಟ್ ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದೆ. ಇದರಲ್ಲಿ ಒಟ್ಟು 9 ವಿಚಾರಗಳಿದ್ದು ಕೋರ್ಟ್ ಸಮಸ್ಯೆ ಬಗೆಹರಿಸಬೇಕಾಗಿದೆ. ದೇವಸ್ಥಾನಗಳ ಮೇಲುಸ್ತುವಾರಿ, ಆಡಳಿತ, ಆಸ್ತಿ, ದೇವಸ್ಥಾನಗಳ ಸ್ಥಿರಾಸ್ತಿ ಆದಾಯದ ವಿನಿಯೋಗ, ಒತ್ತುವರಿ, ಬಾಡಿಗೆ ನಿರ್ಧಾರ, ದೇಗುಲಕ್ಕೆ ಸಾರ್ವಜನಿಕರ ಪ್ರವೇಶ, ದೇವಸ್ಥಾನದ ನಿರ್ವಹಣೆ ಮತ್ತು ಮರು ನಿರ್ಮಾಣ ವಿಚಾರಗಳ ಕುರಿತು ಸುಪ್ರಿಂ ಕೋರ್ಟ್ ಆದೇಶ ನೀಡಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As much as 1,500 acres of land belonging to some temples in Tamil Nadu have been encroached, the Supreme Court was told.
Please Wait while comments are loading...