ಯಾವಾಗ ರಾಜಕೀಯ ಬಿಡ್ತೀರಿ ಸಿಧು?: ಪಂಜಾಬ್‌ನಲ್ಲಿ ಬಿತ್ತಿಪತ್ರ

ಲೂಧಿಯಾನ, ಜೂನ್ 22: ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋತರೆ ರಾಜಕೀಯದಿಂದ ತ್ಯಜಿಸುವುದಾಗಿ ಹೇಳಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ತಮ್ಮ ಆಶ್ವಾಸನೆಯನ್ನು ಉಳಿಸಿಕೊಳ್ಳುವಂತೆ ಲೂಧಿಯಾನದಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಸಚಿವೆ ಸ್ಮೃತಿ ಇರಾನಿ ಅವರ ಎದುರು ಅಮೇಥಿಯಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಸೋಲು ಅನುಭವಿಸಿದರೆ ರಾಜಕೀಯ ತ್ಯಜಿಸುವುದಾಗಿ ಹೇಳಿದ್ದರು.

ಇದನ್ನು ಪೋಸ್ಟರ್‌ಗಳಲ್ಲಿ ನೆನಪಿಸಿರುವ ಕೆಲವರು, 'ನೀವು ಯಾವಾಗ ರಾಜಕೀಯ ಬಿಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಮಾತಿಗೆ ಬದ್ಧರಾಗಿ ಈಡೇರಿಸುವ ಸಮಯ ಬಂದಿದೆ. ನಿಮ್ಮ ರಾಜೀನಾಮೆಗೆ ಕಾಯುತ್ತಿದ್ದೇವೆ' ಎಂದು ಹೇಳಿದ್ದಾರೆ.

when are you quitting politics congress navjot singh sidhu posters

'ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲು ಅನುಭವಿಸಿದರೆ ನಾನು ರಾಜಕೀಯ ತ್ಯಜಿಸುತ್ತೇನೆ' ಎಂಬ ಸಿಧು ಅವರ ಹೇಳಿಕೆಯನ್ನು ಸಹ ಮುದ್ರಿಸಲಾಗಿದೆ. ಇದೇ ರೀತಿಯ ಪೋಸ್ಟರ್‌ಗಳು ಮೊಹಾಲಿಯಲ್ಲಿಯೂ ಶುಕ್ರವಾರ ಕಂಡುಬಂದಿದ್ದವು.

ನೆಹರೂ-ಗಾಂಧಿ ಕುಟುಂಬದ ಪ್ರಬಲ ನೆಲೆಯಾದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ಎದುರು 55,120 ಮತಗಳಿಂದ ಸೋಲು ಅನುಭವಿಸಿದ್ದರು. ಇದು ಕಾಂಗ್ರೆಸ್‌ಗೆ ತೀವ್ರ ಆಘಾತ ಉಂಟುಮಾಡಿತ್ತು.

ಪಂಜಾಬ್‌ನಲ್ಲಿ ಹಾಗೂ ಇತರೆ ಕೆಲವೆಡೆ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ನವಜೋತ್ ಸಿಂಗ್ ಸಿಧು ಅವರ ಹೇಳಿಕೆಗಳು ಹಾಗೂ ನಡೆಗಳೇ ಕಾರಣ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರೋಪಿಸಿದ್ದರು. ಅಲ್ಲದೆ, ಅವರ ಸಚಿವ ಸ್ಥಾನದಲ್ಲಿ ಹಿಂಬಡ್ತಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+