Breaking: ಉಗ್ರರ ದಾಳಿ ಭೀತಿ: ಪಂಜಾಬ್ ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ!

ಚಂಡೀಗಢ, ಆಗಸ್ಟ್ 21: ಅಂತಾರಾಜ್ಯ ಬಸ್ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಂಚು ರೂಪಿಸುವ ವರದಿ ಬಂದಿದೆ. ವರದಿ ಬೆನ್ನಲ್ಲೇ ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಅಂತಾರಾಜ್ಯ ಬಸ್ ಟರ್ಮಿನಲ್(ISBT)ಗಳ ಮೇಲೆ ಭಯೋತ್ಪಾದನಾ ದಾಳಿ ಬಗ್ಗೆ ಭದ್ರತಾ ಸಂಸ್ಥೆಗಳು ಸೂಚನೆ ನೀಡಿದ ಬೆನ್ನಲ್ಲೇ ಪಂಜಾಬ್ ಪೊಲೀಸರು ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ.

ಚಂಡೀಗಢದಲ್ಲಿರುವ ಅಂತಾರಾಜ್ಯ ಬಸ್ ಟರ್ಮಿನಲ್ ಸೆಕ್ಟರ್ 43 ಹಾಗೂ ಸೆಕ್ಟರ್ 17 ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಜಾರಿಯಲ್ಲಿದೆ.

"ನಾವು ಬೆಳಗ್ಗೆ 8 ಗಂಟೆಗೆ ತಪಾಸಣೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಸ್ತುಗಳನ್ನು ಹುಡುಕುತ್ತಿದ್ದೇವೆ. ನಾವು ಹೊರ ನಿಲ್ದಾಣಗಳಿಂದ ಬಸ್‌ಗಳಲ್ಲಿ ಬರುವ ಜನರ ಲಗೇಜ್‌ಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಚಂಡೀಗಢ ಪೊಲೀಸ್ ಆಪರೇಷನ್ ಸೆಲ್‌ನ ಎಎಸ್‌ಐ ಹೃದಯವಂತ್ ಸಿಂಗ್ ಹೇಳಿದ್ದಾರೆ.

Terror alert in Punjab: Security beefed up across major bus terminals

"ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಮಾಲ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದೇವೆ. ಯಾವುದೇ ಸ್ಫೋಟಕ ವಸ್ತು ಅಥವಾ ಆಯುಧವನ್ನು ಹೊತ್ತೊಯ್ಯುವ ಯಾರಾದರೂ ಈ ಪ್ರದೇಶಗಳಿಗೆ ಪ್ರವೇಶಿಸಿ ಸಾರ್ವಜನಿಕರಿಗೆ ಹಾನಿಯನ್ನುಂಟುಮಾಡುವುದನ್ನು ತಡೆಗಟ್ಟಲು ಸಜ್ಜಾಗಿದ್ದೇವೆ, ಭದ್ರತಾ ದೃಷ್ಟಿಯಿಂದ ತಪಾಸಣೆ ನಡೆಸಲಾಗುತ್ತಿದೆ'' ಎಂದು ಚಂಡೀಗಢ ಪೊಲೀಸ್‌ನ ಆಪರೇಷನ್ ಸೆಲ್‌ನ ಎಎಸ್‌ಐ ಹೃದಯವಂತ್ ಸಿಂಗ್ ಹೇಳಿದರು.

ಘಟನೆ ಹಿನ್ನೆಲೆ:
ಚಂಡೀಗಢ ಮತ್ತು ಮೊಹಾಲಿ ಸೇರಿದಂತೆ ಪಂಜಾಬ್‌ನ ಪ್ರಮುಖ ಐಎಸ್‌ಬಿಟಿಗಳನ್ನು ಗುರಿಯಾಗಿಸಲು ಕೆನಡಾ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಯೋಜಿಸಿವೆ ಎಂದು ಇತ್ತೀಚೆಗೆ ಬಂಧಿತ ಆರೋಪಿಗಳ ವಿಚಾರಣೆಯ ಸಮಯದಲ್ಲಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಇದರ ನಂತರ, ಈ ಟರ್ಮಿನಲ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಎಚ್ಚರಿಕೆಯನ್ನು ನೀಡಿವೆ.

ಮಹಾರಾಷ್ಟ್ರದ ಶಿರಡಿಯಲ್ಲಿ ಮೂರನೇ ಆರೋಪಿ ರಾಜಿಂದರ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಇದಕ್ಕೂ ಮೊದಲು, ಪೊಲೀಸರು ಹರ್ಪಾಲ್ ಸಿಂಗ್, ಪೋಲೀಸ್ ಮತ್ತು ಅವರ ಸಂಬಂಧಿ ಫತೇದೀಪ್ ಸಿಂಗ್ ಅನ್ನು ಪಾಟಿ ಉಪವಿಭಾಗದ ತರ್ನ್ ತರನ್‌ನಲ್ಲಿ ಬಂಧಿಸಿದ್ದರು. ಅವರು ಆರೋಪಿಸಲ್ಪಟ್ಟ ಮುಖ್ಯ ನಿರ್ವಾಹಕರು ಮತ್ತು IED ಗಳನ್ನು ಪೊಲೀಸ್ ಅಧಿಕಾರಿಗಳ ಬೈಕಿನಲ್ಲಿಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಕೆನಡಾ ಮೂಲದ ದರೋಡೆಕೋರ ಲಖ್ಬೀರ್ ಸಿಂಗ್ ಲಾಂಡಾ ಅವರೊಂದಿಗೆ ವಾಟ್ಸಾಪ್‌ನಲ್ಲಿ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತಸರ ಎಸ್‌ಐ ಮೇಲಿನ ದಾಳಿಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಮತ್ತು ಲಾಂಡಾ ಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 24 ರಂದು ಪ್ರಧಾನಿ ನರೇಂದ್ರ ಮೋದಿಯವರ ಮೊಹಾಲಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ಕೂಡ ಹೈ ಅಲರ್ಟ್‌ನಲ್ಲಿವೆ. ಶನಿವಾರ, ನಿಷೇಧಿತ ಸಂಘಟನೆ ಎಸ್‌ಜೆಎಫ್‌ನ ಗುರುಪತ್‌ವಂತ್ ಪನ್ನು ಅವರು ಪ್ರಧಾನಿ ಕಾರ್ಯಕ್ರಮಕ್ಕೆ ದಾಳಿ ಮತ್ತು ಅಡ್ಡಿಪಡಿಸುವ ಬೆದರಿಕೆ ಹಾಕಿರುವ ವಿಡಿಯೊವನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+